LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳೇ : ಮೋಹನ ಭಾಗವತ

ರಾಯಪುರ : ಭಾರತದಲ್ಲಿ ವಾಸಿಸುತ್ತಿರುವವರೆಲ್ಲ ಹಿಂದೂಗಳು, ಎಲ್ಲರ ಡಿಎನ್​ಎಗಳು ಒಂದೇ ಎಂದು ರಾಷ್ಟ್ರೀಯ ಸ್ವಯಂ ಸೇವಕ​ ಸಂಘ ಮುಖ್ಯಸ್ಥ ಮೋಹನ​ ಭಾಗವತ​ ಪುನರುಚ್ಛರಿಸಿದ್ದಾರೆ.



ಛತ್ತೀಸಗಡದಲ್ಲಿ ಸ್ವಯಂಸೇವಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಚರಣೆ ವಿಚಾರದಲ್ಲಿ ಯಾರು ಕೂಡ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಭಾರತದ ವೈವಿಧ್ಯತೆಯಲ್ಲಿ ಏಕತೆಯ ಗುಣ ಬಹಳ ಹಿಂದಿನದು. ಪ್ರಪಂಚದಲ್ಲಿ ಎಲ್ಲರನ್ನು ಒಗ್ಗೂಡಿ ಕರೆದುಕೊಂಡು ಹೋಗುವ ತತ್ವ ಹೊಂದಿರುವ ಕಲ್ಪನೆ ಹೊಂದಿರುವುದು ಹಿಂದುತ್ವದಲ್ಲಿ ಮಾತ್ರ ಎಂಬುದನ್ನು ಪ್ರತಿಪಾದಿಸಿದರು.



1925ರಿಂದಲೂ ನಾವು ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎಂದು ಹೇಳಿಕೊಂಡು ಬಂದಿದ್ದೇವೆ. ನಾವು ಭಾರತವನ್ನು ಮಾತೃಭೂಮಿ ಎಂದು ಪರಿಗಣಿಸಿದ್ದು, ವಿವಿಧತೆಯಲ್ಲಿ ಏಕತೆ ಎಂಬಂತೆ ಬದುಕುತ್ತಿದ್ದೇವೆ. ಧರ್ಮ, ಜಾತಿ, ಮತ, ಭಾಷೆ, ಅವರ ಸಿದ್ಧಾಂತಗಳನ್ನು ಲೆಕ್ಕಿಸದೆ ಈ ದೇಶದಲ್ಲಿ ವಾಸಿಸುವವರನ್ನೆಲ್ಲಾ ಹಿಂದೂ ಎಂದು ಪರಿಗಣಿಸಿದ್ದೇವೆ. ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸುವ ಮತ್ತು ಎಲ್ಲಾ ಭಾರತೀಯರ ಡಿಎನ್​ಎ ಒಂದೇ ಎಂಬುದನ್ನು ಒತ್ತಿ ಹೇಳಿದ ಅವರು, ನಮ್ಮ ಪೂರ್ವಿಕರು 40 ಸಾವಿರ ವರ್ಷಗಳಿಂದ ಅಖಂಡ ಭಾರತದಲ್ಲಿದ್ದು, ನಮ್ಮೆಲ್ಲಾ ಡಿಎನ್​ಎ ಒಂದೇ. ನಮ್ಮ ಪೂರ್ವಿಕರು ಪ್ರತಿಯೊಬ್ಬರು ತಮ್ಮ ನಂಬಿಕೆ ಮತ್ತು ಆಚರಣೆಗೆ ಅಂಟಿಕೊಂಡಿರಬೇಕು ಎಂದು ತಿಳಿಸಿದರು. ಅವರು ಯಾರನ್ನು ಮತಾಂತರ ಮಾಡಲಿಲ್ಲ ಎಂದರು.



ಪ್ರತಿಯೊಂದು ಧರ್ಮದ ನಂಬಿಕೆ ಮತ್ತು ಆಚರಣೆಗಳನ್ನು ಗೌರವಿಸಬೇಕು ಎಂದು ಕರೆ ನೀಡಿದ ಅವರು, ಪ್ರತಿಯೊಬ್ಬರ ಮಾರ್ಗವನ್ನು ನಾವು ಗೌರವಿಸಬೆಕಿದೆ. ಪ್ರತಿಯೊಬ್ಬರ ಯಶಸ್ಸಿಗೆ ನಾವು ಹಾದಿಯಾಗಬೇಕು. ಆದರೆ ಬೇರೆಯವರ ಬಗ್ಗೆ ಕಾಳಜಿ ಇಲ್ಲದೇ ಸ್ವಾರ್ಥಿಗಳಾಗಬಾರದು ಎಂದು  ​ಹೇಳಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ