LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ದೀಪಾವಳಿ ಅಮವಾಸ್ಯೆಯ ದಿನ ಸಂಭವಿಸಲಿದೆ ಸೂರ್ಯಗ್ರಹಣ

ಹೊಸದಿಲ್ಲಿ, ೧೫- ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ 25 ರಂದು ಸಂಭವಿಸಲಿದೆ. ದೀಪಾವಳಿ ಅಮವಾಸ್ಯೆಯ ದಿನ ಸೂರ್ಯಗ್ರಹಣವಾಗಲಿದ್ದು, ಭಾಗಶಃ ಸೂರ್ಯ ಗ್ರಹಣವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.



ಮಂಗಳವಾರ ತುಲಾ ರಾಶಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಈ ಸೂರ್ಯ ಗ್ರಹಣದ ಅವಧಿಯು ಸುಮಾರು 4 ಗಂಟೆ 3 ನಿಮಿಷಗಳವರೆಗೆ ಇರಲಿದೆ. ಈ ವರ್ಷದ ಸೂರ್ಯಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಯಾಕೆಂದ್ರೆ ಗ್ರಹಣದ ಸೂತಕ ದೀಪಾವಳಿಯ ರಾತ್ರಿಯಿಂದಲೇ ಪ್ರಾರಂಭವಾಗುತ್ತದೆ.



ಸೂರ್ಯಗ್ರಹಣ ಅಕ್ಟೋಬರ 25 ರಂದು ಮಧ್ಯಾಹ್ನ 2 ಗಂಟೆ 29 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ಸೂರ್ಯಗ್ರಹಣದ ಮಧ್ಯಾವಧಿ ಸಂಜೆ 4 ಗಂಟೆ 30 ನಿಮಿಷ. ಸಂಜೆ 6 ಗಂಟೆ 32ಕ್ಕೆ ಗ್ರಹಣ ಮುಗಿಯಲಿದೆ. ಸೂರ್ಯಗ್ರಹಣ ಮುಗಿಯುವ ಮೊದಲೇ ಭಾರತದಲ್ಲಿ ಸೂರ್ಯಾಸ್ತ ಸಂಭವಿಸುತ್ತದೆ. ಹಾಗಾಗಿ ಭಾರತದಲ್ಲಿ ಸೂರ್ಯಾಸ್ತವನ್ನು ಸೂರ್ಯಗ್ರಹಣದ ಮೋಕ್ಷ ಎಂದು ಪರಿಗಣಿಸಲಾಗುತ್ತದೆ.



ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂತಕ ಅವಧಿಯು ಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಹಾಗಾಗಿ ಆ ಸಮಯದಲ್ಲಿ ಯಾವುದೇ ಪೂಜೆಯನ್ನು ಮಾಡುವುದು ಮಂಗಳಕರವಲ್ಲ.



ಸೂರ್ಯ ಗ್ರಹಣ ಇಡೀ ಭಾರತದಲ್ಲಿ ಗೋಚರವಾಗಲಿದೆ. ಸೂರ್ಯಗ್ರಹಣದ ಸಮಯದಲ್ಲಿ ಎಲ್ಲ ದೇವಸ್ಥಾನದ ಬಾಗಿಲು ಮುಚ್ಚಿರಲಿವೆ. ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಎಲ್ಲರೂ ಸ್ನಾನ ಮಾಡಿ ನಂತರ ದೇವರ ಪೂಜೆ ಮಾಡಬೇಕು. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸುವುದರಿಂದ ಈ ದಿನ ತೀರ್ಥಯಾತ್ರೆ, ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ ಎನ್ನಲಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ