LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ನಾಡೋಜ ದಿನಪತ್ರಿಕೆ ಸಂಪಾದಕ ಸಲೀಮ ಧಾರವಾಡಕರ ಸೇರಿದಂತೆ 25 ಸಾಧಕರಿಗೆ ಸನ್ಮಾನ

ಬೆಳಗಾವಿ, ನ.1 : ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ 1 ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪತ್ರಕರ್ತರು, ಕನ್ನಡಪರ ಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ಒಟ್ಟು 25 ಜನರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಿದರು.



ಪತ್ರಿಕಾ ಮಾಧ್ಯಮ ಕ್ಷೇತ್ರದ ವಿವಿಧ 7 ವಿಭಾಗಗಳಿಂದ 9 ಜನ ಪತ್ರಕರ್ತರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.



ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆ ಸಂಪಾದಕರ ವಿಭಾಗದಲ್ಲಿ ನಾಡೋಜ ದಿನಪತ್ರಿಕೆಯ ಸಂಪಾದಕ ಸಲೀಮ ಧಾರವಾಡಕರ, ಇಂಡಿಯನ್ ಎಕ್ಸಪ್ರೆಸ್ ದಿನಪತ್ರಿಕೆಯ ಸಂಪಾದಕ ನೌಶಾದ ಬಿಜಾಪುರ, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ್ತಿ ಕೀರ್ತನಕುಮಾರಿ ಕಾಸರಗೋಡ, ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಿಂದ ನ್ಯೂಸ್ 18 ವರದಿಗಾರ ಚಂದ್ರಕಾಂತ ಸುಗಂಧಿ ಹಾಗೂ ಟಿ.ವ್ಹಿ 5 ವರದಿಗಾರ ಶ್ರೀಧರ ಕೋಟಾರಗಸ್ತಿ, ಪತ್ರಿಕಾ ಛಾಯಾಗ್ರಾಹಕರ ವಿಭಾಗದಲ್ಲಿ ಪಿ.ಕೆ ಬಡಿಗೇರ, ಟಿ.ವ್ಹಿ ಕ್ಯಾಮೆರಾಮನ್ ವಿಭಾಗದಲ್ಲಿ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಸುನೀಲ ಗಾವಡೆ, ತಾಲೂಕು ವರದಿಗಾರ ವಿಭಾಗದಲ್ಲಿ ರಾಯಬಾಗ ತಾಲೂಕು ವರದಿಗಾರ ಯಲ್ಲಪ್ಪ ತಳವಾರ ಹಾಗೂ ಪತ್ರಿಕಾ ವಿತರಕರ ವಿಭಾಗದಲ್ಲಿ ಖಾನಾಪುರದ ಶಿವಾನಂದ ಅನಂತರಾವ ವಾಗೂಡೆಕರ ಅವರನ್ನು ಸನ್ಮಾನಿಸಲಾಯಿತು.



ಕನ್ನಡಪರ ಹೋರಾಟಗಾರರಾದ ಬೆಳಗಾವಿಯ ಪಂಚಾಕ್ಷರಿ ಶ್ರೀಶೈಲ ಹಿರೇಮಠ, ರಾಜು ಕುಬೇರ ಭಾವಿ, ಭಾವಕಣ್ಣ ಭಂಗ್ಯಾಗೋಳ(ನಾಯಕ), ಸುರೇಶ ಲಗಮಪ್ಪ ಗವನ್ನವರ, ಬಾಳು ಈರಪ್ಪ ಜಡಗಿ, ಮಲ್ಲೇಶ ಚೌಗಲೆ ಹಾಗೂ ಬೈಲಹೊಂಗಲದ ಮಹಾಂತೇಶ ತುರಮರಿ ಅವರಿಗೆ   ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.



ಸಂಗೀತ ಕ್ಷೇತ್ರದಲ್ಲಿ ಬೆಳಗಾವಿಯ ನಾದ ಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕರು ಹಾಗೂ ಶಿಕ್ಷಕರಾದ ಎಂ.ಎನ್. ಸತ್ಯನಾರಾಯಣ, ಕೈವಲ ಭಜನಾ ಕ್ಷೇತ್ರದಲ್ಲಿ ಅಥಣಿ ತಾಲ್ಲೂಕು ದರೂರಿನ ಮಾರುತಿ ಸಿದ್ದಪ್ಪ ಸಿನಪ್ಪಗೊಳ, ಮಿಮಿಕ್ರಿ/ಸಮಾಜ ಸೇವೆಯಲ್ಲಿ ತೊಡಗಿರುವ ಬೆಳಗಾವಿ ಟಿಳಕವಾಡಿಯ ಸಂತೋಷ ಆರ್. ದಾಮೇಕರ, ಕ್ರೀಡಾ ವಿಭಾಗದಲ್ಲಿ ಖಾನಾಪುರ ತಾಲ್ಲೂಕಿನ ತೋಲಗಿ ಗ್ರಾಮದ ಸುನೀತಾ ದುಂಡಪ್ಪನವರ, ವೈದ್ಯಕೀಯ ವಿಭಾಗದಲ್ಲಿ ಹುಕ್ಕೇರಿ ತಾಲ್ಲೂಕಿನ ದಾದಬಾನಹಟ್ಟಿಯ ಡಾ. ಸುಕಲಾದೇವಿ ವಿರೂಪಾಕ್ಷಪ್ಪ ದುಗಾಣಿ, ಸಮಾಜ ಸೇವೆ ಕ್ಷೇತ್ರದಲ್ಲಿ ಅಥಣಿ ತಾಲ್ಲೂಕು ಕೋಳಿಗುಡ್ಡದ ಸುಶೀಲಾ ಪಾಟೀಲ, ಬೆಳಗಾವಿ ತಾಲ್ಲೂಕು ಹುದಲಿಯ ಯಲ್ಲಪ್ಪ ಹುದಲಿ, ರಾಯಬಾಗ ತಾಲ್ಲೂಕು ಕುಡಚಿಯ ಕಿರಣ ಬೇಡಿ ಹಾಗೂ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಬಸಪ್ಪ ಮಾಲಗಾರ ಅವರನ್ನು ರಾಜ್ಯೋತ್ಸವದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.



ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ (ರಾಜು) ಸೇಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಗಣ್ಯರು ಹಾಜರಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ