LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 180 ದೇಶಗಳ ಪೈಕಿ 157ನೇ ಸ್ಥಾನಕ್ಕೆ ಕುಸಿದ ಭಾರತ

ಹೊಸದಿಲ್ಲಿ,ಎ.30: ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್‌ಎಸ್‌ಎಫ್) ಗುರುವಾರ ಪ್ರಕಟಿಸಿರುವ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತವು 157ನೇ ಸ್ಥಾನಕ್ಕೆ ಕುಸಿದಿದೆ. 2025ರಲ್ಲಿ ಭಾರತವು 151ನೇ ಸ್ಥಾನದಲ್ಲಿತ್ತು. ಅದು ಈಗಲೂ ‘ಅತ್ಯಂತ ಗಂಭೀರ’ ವರ್ಗದಲ್ಲಿ ಉಳಿದುಕೊಂಡಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂದೂ ಕರೆಯಲಾಗುವ ಆರ್‌ಎಸ್‌ಎಫ್ ಹೇಳಿದೆ. ಅದು 2002ರಿಂದಲೂ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಕಟಿಸುತ್ತಿದೆ.

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಮಾಧ್ಯಮಗಳನ್ನು ಮೌನಗೊಳಿಸಲು ಅಸ್ತ್ರವಾಗಿ ಕಾನೂನು ಚೌಕಟ್ಟುಗಳ ಬಳಕೆಯು ಹೆಚ್ಚುತ್ತಿದೆ ಎಂದು ಆರ್ ಎಸ್‌ಎಫ್ ಕಳವಳ ವ್ಯಕ್ತಪಡಿಸಿದೆ.

ಭಾರತದಲ್ಲಿ ಪತ್ರಕರ್ತರನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾನನಷ್ಟ ಮತ್ತು ರಾಷ್ಟ್ರೀಯ ಭದ್ರತಾ ಕಾನೂನುಗಳಂತಹ ಕ್ರಿಮಿನಲ್ ಶಾಸನಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ಸ್ವತಂತ್ರ ಮಾಧ್ಯಮಗಳಿಗೆ ನ್ಯಾಯಾಂಗ ಕಿರುಕುಳ ತೀವ್ರಗೊಳ್ಳುತ್ತಿದೆ ಎಂದು ಅದು ಹೇಳಿದೆ.

ಸೂಚ್ಯಂಕ ಪ್ರಾರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಶೇ.50ಕ್ಕೂ ಅಧಿಕ ದೇಶಗಳು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ‘ಕಷ್ಟಕರ’ ಅಥವಾ ‘ಅತ್ಯಂತ ಗಂಭೀರ’ ವರ್ಗಗಳಲ್ಲಿವೆ. 2002ರಲ್ಲಿ ಸೂಚ್ಯಂಕ ಪ್ರಾರಂಭಗೊಂಡಾಗ ಕೇವಲ ಶೇ.13.7ರಷ್ಟು ದೇಶಗಳು ಈ ವರ್ಗದಲ್ಲಿದ್ದವು ಎಂದು ಹೇಳಿರುವ ಆರ್‌ಎಸ್‌ಎಫ್, ಅಧ್ಯಯನಕ್ಕೊಳಪಡಿಸಲಾದ 180 ದೇಶಗಳ ಸರಾಸರಿ ಪತ್ರಿಕಾ ಸ್ವಾತಂತ್ರ್ಯ ಅಂಕಗಳು ಎಂದೂ ಇಷ್ಟು ಕಡಿಮೆಯಾಗಿರಲಿಲ್ಲ ಎಂದು ತಿಳಿಸಿದೆ.

ಶೇ.60ಕ್ಕೂ ಅಧಿಕ ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಅಂಕ ಕುಸಿದಿದ್ದು, ಭಾರತ, ಈಜಿಪ್ಟ್, ಇಸ್ರೇಲ್ ಮತ್ತು ಜಾರ್ಜಿಯಾಗಳಲ್ಲಿಯೂ ಇದೇ ಪರಿಸ್ಥಿತಿಯಿದೆ ಎಂದಿದೆ.

ಭಾರತದ ನೆರೆಯ ದೇಶಗಳಾದ ನೇಪಾಳ 87, ಮಾಲ್ದೀವ್ಸ್ 108, ಶ್ರೀಲಂಕಾ 134, ಭೂತಾನ್‌ 150, ಬಾಂಗ್ಲಾದೇಶ 152, ಪಾಕಿಸ್ತಾನ 153, ಮ್ಯಾನ್ಮಾರ್ 166, ಅಫ್ಘಾನಿಸ್ತಾನ 175 ಮತ್ತು ಚೀನಾ 178ನೇ ಸ್ಥಾನಗಳಲ್ಲಿವೆ.

ನಾರ್ವೆ, ನೆದರ್‌ಲ್ಯಾಂಡ್ಸ್ ಮತ್ತು ಎಸ್ಟೋನಿಯಾ ಅಗ್ರ ಮೂರು ಸ್ಥಾನಗಳಲ್ಲಿದ್ದರೆ ಅಮೆರಿಕ ಏಳು ಸ್ಥಾನಗಳಷ್ಟು ಕುಸಿದು 64ನೇ ಸ್ಥಾನದಲ್ಲಿದೆ.


Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಿಷ್ಮಾ ಕಪೂರ ಮಕ್ಕಳಿಗೆ ಮಧ್ಯಂತರ ರಿಲೀಫ್ ನೀಡಿದ ಹೈಕೋರ್ಟ2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 180 ದೇಶಗಳ ಪೈಕಿ 157ನೇ ಸ್ಥಾನಕ್ಕೆ ಕುಸಿದ ಭಾರತನಾಯಕತ್ವ ಬದಲಾವಣೆ ಕುರಿತು ಸೂಕ್ತ ಸಮಯದಲ್ಲಿ ತೀರ್ಮಾನ: ಮಲ್ಲಿಕಾರ್ಜುನ ಖರ್ಗೆಮುಸ್ಲಿಮರ ಮೇಲಿನ ದಾಳಿ ಪ್ರಕರಣಗಳಲ್ಲಿ ಮಾನವ ಹಕ್ಕು ಆಯೋಗಗಳ ನಿರ್ಲಕ್ಷ್ಯ: ಅಲಹಾಬಾದ ಹೈಕೋರ್ಟನಲ್ಲಿ ಭಿನ್ನಾಭಿಪ್ರಾಯಪಿಕ್‌ಅಪ್‌ ವಾಹನ–ಎಸ್‌ಯುವಿ ಡಿಕ್ಕಿ: 15 ಮಂದಿ ಸಾವು ಕ್ಲೋರಿನ್ ಅನಿಲ ಸೋರಿಕೆ: 22 ನಿವಾಸಿ, 2 ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಗೆಅಮೆರಿಕ–ಇರಾನ್ ಉದ್ವಿಗ್ನತೆ ತೀವ್ರ: ಹೊಸ ಅಸ್ತ್ರ ಅನಾವರಣ ಎಚ್ಚರಿಕೆಸಂಜಯ ಗಾಂಧಿ ಹೆಸರಿನ ಸಂಸ್ಥೆಗಳ ಮರುನಾಮಕರಣ ನೌಕಾಪಡೆಯ ಹಡಗು ನಿಗ್ರಹ ಸಾಮರ್ಥ್ಯಕ್ಕೆ ಮತ್ತಷ್ಟು ಬಲಮಾನನಷ್ಟ ಮೊಕದ್ದಮೆ: ಇನ್ನೂ 20 ವರ್ಷ ಕಾಯುವಂತೆ 90ರ ವೃದ್ಧೆಗೆ ಬಾಂಬೆ ಹೈಕೋರ್ಟ ಸೂಚನೆ!