LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ಕಾಡಾ ಅಧ್ಯಕ್ಷರಾಗಿ ಯುವರಾಜ ಕದಮ್ ಅಧಿಕಾರ ಸ್ವೀಕಾರ

ಬೆಳಗಾವಿ: ಇಂದು ಬೆಳಗಾವಿಯ ಕಾಡಾ ಕಚೇರಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳಕರ ಅವರ ಉಪಸ್ಥಿತಿಯಲ್ಲಿ ನೂತನ ಕಾಡಾ ಅಧ್ಯಕ್ಷರಾಗಿ ಯುವರಾಜ ಕದಮ್ ಅಧಿಕಾರ ಸ್ವೀಕರಿಸಿದರು.



ಈ ವೇಳೆ ನೂತನ ಕಾಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯುವರಾಜ್ ಕದಮ್ ಅವರಿಗೆ ಅಲ್ಲೇ ಇದ್ದ ಮುಖಂಡರು ಹೂಮಾಲೆ ಹಾಕಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ನೂತನ ಕಾಡಾ ಅಧ್ಯಕ್ಷರು ಲೋಕೋಪಯೋಗಿ ಸಚಿವ ಸತೀಶ‌ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಶಾಲು ಹೊದಿಸಿ ಹೂಗುಚ್ಚ ನೀಡಿ ಸನ್ಮಾನಿಸಿದರು.



ಈ ಸಂದರ್ಭದಲ್ಲಿ ನೂತನ ಕಾಡಾ ಅಧ್ಯಕ್ಷ ಕದಮ್ ಮಾತನಾಡಿ, ನನ್ನ ಸೇವೆಯನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ. ಅದನ್ನು ಬಳಸಿಕೊಂಡು ಬಡವರ ಪರವಾಗಿ ಕೆಲಸ ಮಾಡುತ್ತೇನೆ. ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸುತ್ತೇನೆ ಎಂದರು.



ಈ ವೇಳೆ ಶಾಸಕ ರಾಜು ಕಾಗೆ, ಮಾಜಿ ಶಾಸಕ ಶಾಮ‌ ಘಾಟಗೆ, ವಿ.ಪ. ಸದಸ್ಯ ಚನ್ನರಾಜ ಹೊಟ್ಟಿಹೊಳಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST