LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವಿದ್ಯುತ್ ಸಂಪರ್ಕ ಕಡಿತ : ಇಬ್ಬರು ರೋಗಿಗಳ ಸಾವು

ಬಳ್ಳಾರಿ: ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಇಬ್ಬರು ರೋಗಿಗಳು ಸಾವನ್ನಪ್ಪಿದ್ದ ಘಟನೆ ವಿಜಯನಗರ ವಿಮ್ಸ್​​ ಆಸ್ಪತ್ರೆಯಲ್ಲಿ ನಡೆದಿದೆ. ಇಲ್ಲಿ ವೆಂಟಿಲೇಟರ್​​​ ಕಾರ್ಯ ಸ್ಥಗಿತಗೊಂಡಿದ್ದು, ಪರಿಣಾಮ ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ.



ಐಸಿಯುನಲ್ಲೇ ರೋಗಿಗಳು ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಕುರಿತು ವಿಮ್ಸ್​ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಒಂದು ವೇಳೆ ವಿದ್ಯುತ್​​ ಸಂಪರ್ಕ ಕಡಿತವಾಗಿದ್ದರೆ ಎಲ್ಲಾ ರೋಗಿಗಳಿಗೂ ತೊಂದರೆ ಆಗುತ್ತಿತ್ತು ಎಂದು ವೈದ್ಯರು ಹೇಳುತ್ತಿದ್ದಾರೆ.



ಇನ್ನು, ವಿಮ್ಸ್​​ ಆಸ್ಪತ್ರೆಯಲ್ಲಿ 10 ರೋಗಿಗಳಿಗೆ ವೆಂಟಿಲೇಟರ್​​ ಹಾಕಲಾಗಿತ್ತು. ಸಾವನ್ನಪ್ಪಿರುವ ಇಬ್ಬರ ಪೈಕಿ ಒಬ್ಬ ರೋಗಿ ಹಾವು ಕಡಿತದಿಂದ ಗಂಭೀರ ಸ್ಥಿತಿಗೆ ತಲುಪ್ಪಿದ್ದರೆ, ಮತ್ತೋರ್ವ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆ ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST