LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಒಬ್ಬನೇ ವರನನ್ನು ಮದುವೆಯಾದ ಅವಳಿ ಇಂಜಿನೀಯರ ಸಹೋದರಿಯರು

ಮುಂಬೈ: ಮುಂಬೈನಲ್ಲಿ ಐಟಿ ಇಂಜಿನೀಯರ‌ಗಳಾಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರಿಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ ಎಂಬಲ್ಲಿ ಅತುಲ್‌ ಎಂಬ ಒಬ್ಬನೇ ಹುಡುಗನನ್ನು ಮದುವೆಯಾಗಿದ್ದಾರೆ.



ಈ ಮದುವೆಗೆ ಅವಳಿ ಸಹೋದರಿಯರ ಕುಟುಂಬದವರು ಹಾಗೂ ಹುಡುಗಿಯರು ಮತ್ತು ಮದುಮಗನ ಕುಟುಂಬದವರು ಒಪ್ಪಿಗೆ ನೀಡಿದ್ದರು. ಸೊಲ್ಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ವಿವಾಹ ನಡೆದಿದೆ.



ಮುಂಬೈನಲ್ಲಿ ಅವಳಿ ಸಹೋದರಿಯಾದ ಪಿಂಕಿ ಮತ್ತು ರಿಂಕಿ ಇಬ್ಬರೂ ಐಟಿ ಇಂಜಿನೀಯರ‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರಿಯರು ಒಂದೇ ಮನೆಯಲ್ಲಿ ಒಟ್ಟಿಗೆ ಬೆಳೆದು ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದದರಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ತಾವು ಮತ್ತು ತಮ್ಮನ್ನು ಮೆಚ್ಚಿದ್ದ ಅತುಲ್ ಅವರನ್ನು ಮದುವೆಯಾಗಿದ್ದಾರೆ.



https://twitter.com/imvivekgupta/status/1599048579968270338/video/1



ಅತುಲ್ ಅವರು ಮಲ್ಶಿರಾಸ್ ತಾಲೂಕಿನ ನಿವಾಸಿಯಾಗಿದ್ದು, ಅತುಲ್‌ ಅವಳಿ ಸಹೋದರಿಯ ಕುಟುಂಬಕ್ಕೆ ಪರಿಚಿತರು. ಕೆಲವು ದಿನಗಳ ಹಿಂದೆ ತಂದೆ ತೀರಿಕೊಂಡ ನಂತರ ಹೆಣ್ಣು ಮಕ್ಕಳಿಬ್ಬರು ತಾಯಿಯೊಂದಿಗೆ ವಾಸವಾಗಿದ್ದರು.



ಅವರ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ಇಬ್ಬರು ಸಹೋದರಿಯರು ಅತುಲ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಹೋಗಲು ಪ್ರಾರಂಭಿಸಿದರು. ಮರಾಠಿ ಆನ್‌ಲೈನ್ ದೈನಿಕ "ಮಹಾರಾಷ್ಟ್ರ ಟೈಮ್ಸ್‌" ವರದಿಯ ಪ್ರಕಾರ, ಈ ಸಮಯದಲ್ಲಿ ಅತುಲ್ ಇಬ್ಬರು ಯುವತಿಯರಿಗೆ ಹತ್ತಿರವಾದರು. ಅದು ನಂತರ ಇಬ್ಬರೂ ಸಹೋದರಿಯರು ಅತುಲ್‌ ಅವರನ್ನು ಮದುವೆಯಾಗುವುದರಲ್ಲಿ ಪರ್ಯವಸಾನಗೊಂಡಿತು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ