LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಪಕ್ಷಕ್ಕಾಗುವ ಹಾನಿ ತಪ್ಪಿಸಲು ಹೇಳಿಕೆ ಹಿಂದಕ್ಕೆ : ಸತೀಶ ಜಾರಕಿಹೊಳಿ 

ಬೆಳಗಾವಿ : ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗುತ್ತಿತ್ತು ಹೀಗಾಗಿ ಹೆಚ್ಚಿನ ಹಾನಿ ತಡೆಯಲು ತಮ್ಮ ಹೇಳಿಕೆಯನ್ನು ಹಿಂಪಡೆಯುದಿರುವದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.



ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಪದದ ಅರ್ಥದ ಕುರಿತು ತಾವು ಖಾಸಗಿ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ದೇಶದಾದ್ಯಂತ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಯಿತು. ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭವಾಯಿತು, ವೈಯಕ್ತಿಕವಾಗಿ ಪಕ್ಷಕ್ಕೆ ಹಾನಿ ಆಯಿತು. ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ಹಿಂದೂ ವಿರೋಧಿಯೆಂದು ಬಿಂಬಿಸುವ ವ್ಯವಸ್ಥಿತ ಸಂಚು ಯೋಜಿಸಲಾಯಿತು ಎಂದರು.



ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಿರಲೆಂದು ತಾವು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದು ಈ ವಿವಾದ ಇಲ್ಲಿಗೆ ಮುಗಿಯಲಿ. ಆದರೆ ತಮ್ಮ ಹೇಳಿಕೆಯ ನಂತರದ  ಕುತಂತ್ರಗಳು, ತಿರುಚಿದ ವಿಷಯದ ಕುರಿತು ಚರ್ಚೆ ನಡೆಯುವದು ಅವಶ್ಯಕತೆಯಿದೆ. ಸರಕಾರ ಈ ವಿಷಯವನ್ನು ತನಿಖೆ ಮಾಡಬೇಕೆಂದು ತಾವು ಮುಖ್ಯಮಂತ್ರಿಗಳನ್ನು ಕೋರಿರುವದಾಗಿಯೂ ಅವರು ತಿಳಿಸಿದರು.



ಪಕ್ಷದ ರಾಷ್ಟ್ರ ಮತ್ತು ರಾಜ್ಯದ ನಾಯಕರು ತಮ್ಮ ಹೇಳಿಕೆಯನ್ನು ಖಂಡಿಸಿದ್ದು, ಆದರೆ ಯಾರೊಬ್ಬರೂ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕೆಂದು ಸೂಚಿಸಿಲ್ಲ, ಆದರೆ ಜಿಲ್ಲೆಯ ತಮ್ಮ ಕೆಲ ಹಿತೈಷಿಗಳ ಸೂಚನೆ ಮೇರೆಗೆ ತಾವು ಹೇಳಿಕೆಯನ್ನು ಹಿಂದಕ್ಕೆ ಪಡೆದಿರುವದಾಗಿ ಸತೀಶ ತಿಳಿಸಿದರು.



ನನಗೆ ಪಕ್ಷ ದೊಡ್ಡದು. ಹೀಗಾಗಿ ಪಕ್ಷಕ್ಕೆ ಹಾನಿ ಆಗಬಾರದೆಂದು ಆ ಪದ ವಾಪಸ್ ಪಡೆದಿರುವೆ. ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ನನ್ನ ಪತ್ರದ ತನಿಖೆ ಮಾಡಬೇಕು ಎಂದು ಸತೀಶ ಜಾರಕಿಹೊಳಿ ಆಗ್ರಹಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ