LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಸಂತೋಷ ಪದ್ಮಣ್ಣವರ ಸಂಶಯಾಸ್ಪದ ಸಾವು: ಪೊಲೀಸರಿಗೆ ದೂರು ನೀಡಿದ ಪುತ್ರಿ

ಬೆಳಗಾವಿ : ಇಲ್ಲಿನ ಆಂಜನೇಯ ನಗರದ ನಿವಾಸಿ ಸಂತೋಷ ದುಂಡಪ್ಪ ಪದ್ಮಣ್ಣವರ (45 ವರ್ಷ) ಅವರ ಹಠಾತ್ ಸಾವಿನ ಕುರಿತು ಅವರ ಪುತ್ರಿ ಸಂಜನಾ ಅವರು ಸಂಶಯ ವ್ಯಕ್ತಪಡಿಸಿರುವುದರಿಂದ ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.



ತನಿಖೆ ನಡೆಸುತ್ತಿರುವ ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಅಂಶಗಳು : ‌



ಮೃತ ಸಂತೋಷ ಪದ್ಮಣ್ಣವರ ಅವರು ಸಂತೋಷ ಫೈನಾನ್ಸ ಹೆಸರಿನಲ್ಲಿ ಬಡ್ಡಿಯಿಂದ ಜನರಿಗೆ ಸಾಲ ಕೊಡುತ್ತಿದ್ದರು. ಅವರಿಗೆ ಬರಬೇಕಾಗಿದ್ದ ಮೊತ್ತ ಅಸಲು, ಬಡ್ಡಿ ಸಮೇತ ಕೆಲವು ಕೋಟಿಗಳಷ್ಟು ಎನ್ನಲಾಗಿದೆ. ಇದಕ್ಕಿಂತ ಮುಖ್ಯ ವಿಷಯವೆಂದರೆ ಸಂತೋಷ ಪತ್ನಿ ಉಮಾ ಅಲ್ಲದೇ ಅವರು ಇನ್ನೊಂದು ವಿವಾಹ ಮಾಡಿಕೊಂಡಿದ್ದರು ಮತ್ತು ತಮ್ಮ ಎರಡನೇ ಪತ್ನಿಗೇ ಹೆಚ್ಚು ಪ್ರಾಧಾನ್ಯತೆ ನೀಡಿ ಅವರಿಗೆ ಹೆಚ್ಚು ಹಣ ವೆಚ್ಚ ಮಾಡುತ್ತಿದ್ದರು ಎನ್ನಲಾಗಿದೆ. ಇದು ಸಂತೋಷ ಮತ್ತು ಮೊದಲ ಪತ್ನಿ ಉಮಾ ನಡುವೆ ಹಲವು ಬಾರಿ ಕೌಟುಂಬಿಕ ಘರ್ಷಣೆಗೆ ಕಾರಣವಾಗಿದ್ದು ಇದೇ ಕಾರಣದಿಂದ ಅವರ ಹತ್ಯೆ ನಡೆದಿರಬಹುದೇ ಅಥವಾ ಬೇರೆ ಕಾರಣದಿಂದ ಅವರ ಸಾವು ಸಂಭವಿಸಿದೆಯೇ ಎಂಬುದರ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.



ಕೋಟ್ಯಾಂತರ ರೂಪಾಯಿ ಹಣಕಾಸಿನ ಲೇವಾದೇವಿ ಮಾಡುತ್ತಿದ್ದ ಎನ್ನಲಾಗುವ ಕೋಟ್ಯಾಧಿಪತಿ ಸಂತೋಷ ಅವರು ಇದೇ ತಿಂಗಳು 9ನೇ ತಾರೀಖು ಹಠಾತ್ ನೇ ಮರಣ ಹೊಂದಿದ್ದರು. ಬೆಂಗಳೂರಿನಲ್ಲಿ ಇಂಜಿನೀಯರಿಂಗ ವಿದ್ಯಾಭ್ಯಾಸ ಮಾಡುವ ಸಂತೋಷ ಅವರ 18 ವರ್ಷದ ಪುತ್ರಿ ಸಂಜನಾ ಅವರು ತಂದೆಯ ಸಾವಿನ ಸುದ್ದಿ ಕೇಳಿ ಧಾವಿಸಿ ಬಂದಿದ್ದರು. ಅಂತ್ಯಕ್ರಿಯೆಯ ನಂತರ ಮನೆಗೆ ಬಂದ ಸಂಜನಾ ಅವರು ತಂದೆಯ ಆಕಸ್ಮಿಕ ಸಾವಿನ ಕುರಿತು ಸಂಶಯಗೊಂಡು ತಾಯಿಯನ್ನು ಕೇಳಿದ್ದಾರೆ ಹಾಗು ಆ ದಿನದ ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ತೋರಿಸಲು ಕೇಳಿದ್ದಾರೆ. ಅದಕ್ಕೆ ತಾಯಿ "ಈಗಷ್ಟೇ ಅಂತ್ಯಸಂಸ್ಕಾರದಿಂದ ಬಂದಿರುವಿ, ಮೊದಲು ಸ್ನಾನ ಮಾಡಿ ಬಾ ನಂತರ ನೋಡುವಿ" ಎಂದು ಕಳುಹಿಸಿದ್ದಾರೆ.



ಸಂಜನಾ ಸ್ನಾನ ಮಾಡಿ ಬಂದ ನಂತರ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ತೋರಿಸಲು ಕೇಳಿದಾಗ ಅದಕ್ಕೆ ತಾಯಿ ವಿಡಿಯೋ ತೋರಿಸಿದ್ದಾರೆ. ಆದರೆ ಅದರಲ್ಲಿನ ದೃಶ್ಯಗಳನ್ನು ಡಿಲೀಟ್ ಮಾಡಲಾಗಿತ್ತು. ಈ ಕುರಿತು ಸಂಜನಾ ತನ್ನ ಇಬ್ಬರು ಸಹೋದರರಾದ ಸುಜಲ್ (13 ವರ್ಷ) ಮತ್ತು ಅಕುಲ್ (8 ವರ್ಷ) ಅವರನ್ನು ವಿಚಾರಿಸಿದಾಗ "ನೀನು ಸ್ನಾನಕ್ಕೆ ಹೋದಾಗ ಅಮ್ಮ ಸಿಸಿಟಿವಿಯ ವಿಡಿಯೋ ಡಿಲೀಟ್ ಮಾಡಲು ಹೇಳಿದಳು, ನಾವು ಮಾಡಿದೆವು" ಎಂದು ತಿಳಿಸಿದರು.



ಇದರಿಂದ ಸಂಜನಾ ಅವರ ಸಂಶಯ ಇನ್ನಷ್ಟು ದೃಢವಾಗಿದೆ. "ನನ್ನ ತಂದೆಯ ಸಾವು ಆಕಸ್ಮಿಕವಲ್ಲ, ಅದು ಕೊಲೆಯಾಗಿದ್ದು ತನಿಖೆ ಮಾಡಿ" ಎಂದು ಮಂಗಳವಾರ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.



ನೆರೆ ಮನೆಗಳ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅದರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಂಜಾನೆ ಮನೆಗೆ ಆಗಮಿಸಿ 40 ರಿಂದ 45 ನಿಮಿಷಗಳ ನಂತರ ಹೊರಗೆ ಹೋದ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ದೃಶ್ಯಗಳನ್ನು ನೋಡಿದ ನಂತರ  ಸಂತೋಷ ಸಾವು ಸಂಚಲನ ಮೂಡಿಸಿದೆ.



ಮಾಳಮಾರುತಿ ಪೊಲೀಸರು ಇನ್ಸಪೆಕ್ಟರ್ ಕಾಲಿಮಿರ್ಚಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು ಬೆರಳಚ್ಚು ತಜ್ಞರ ನೆರವಿನಿಂದ ಮನೆಯಲ್ಲಿನ ಕೆಲ ವಸ್ತುಗಳನ್ನು ತನಿಖೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಸಂತೋಷ ಪದ್ಮಣ್ಣವರ ಪತ್ನಿ ಮತ್ತು ಮನೆಯ ಕೆಲಸದವರನ್ನೂ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.







[caption id="attachment_46303" align="alignnone" width="1041"] Screenshot[/caption]



[caption id="attachment_46304" align="alignnone" width="1040"] Screenshot[/caption]



[caption id="attachment_46305" align="alignnone" width="1170"] Screenshot[/caption]
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು