LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಉತ್ತರ ಕರ್ನಾಟಕದಲ್ಲಿ ಮಳೆ: ಸಿಡಿಲಿಗೆ ಇಬ್ಬರು ಮಹಿಳೆಯರು ಸೇರಿ ಮೂವರು ಬಲಿ

ಬೆಳಗಾವಿ, ಸೆ. 21 : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಶ್ರೀರಂಗಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಿಡಿಲು ಬಡಿದು ಮದ್ಲೂರ ಗ್ರಾಮದ ರೈತ ಕೇದಾರಪ್ಪ ಮಲ್ಲಪ್ಪ ಗುರ್ಲಹೊಸೂರ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಂಬಂಧಿ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ (45) ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಲದಲ್ಲಿ ಗೋವಿನಜೋಳದ ರಾಶಿ ಮಾಡಿದ್ದರಿಂದ ಇಬ್ಬರೂ ರಾತ್ರಿ ಕಾವಲಿಗೆ ತೆರಳಿದ್ದರು. ಗುಡುಗು-ಸಿಡಿಲು ಸಹಿತ ಮಳೆ ಸುರಿಯುತ್ತಿದ್ದ ವೇಳೆ ರಾಶಿಗೆ ಕಾವಲು ಕಾಯುತ್ತಿದ್ದಾಗ ಸಿಡಿಲು ಬಡಿದಿದೆ. ಕೇದಾರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಭೀಮಪ್ಪ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಎಲ್.ಬಿ. ಮಾಳಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಲಬುರಗಿಯಲ್ಲಿ ಇಬ್ಬರು ಮಹಿಳೆಯರ ಸಾವು

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ಹೊಲದಲ್ಲಿ ಸಿಡಿಲು ಬಡಿದು ಲಕ್ಷ್ಮಿ ಬಸಯ್ಯ ಗುತ್ತೇದಾರ (45) ಹಾಗೂ ಸೈಜಾದಬೀ ಫತ್ರುಸಾಬ (60) ಮೃತಪಟ್ಟಿದ್ದಾರೆ.

ತೊಗರಿ ಬೆಳೆಯಲ್ಲಿ ಕಳೆ ತೆಗೆಯುತ್ತಿದ್ದ ಏಳೆಂಟು ಮಹಿಳೆಯರು ಮಧ್ಯಾಹ್ನ ಊಟಕ್ಕಾಗಿ ಮರದ ಕೆಳಗೆ ಬಂದಿದ್ದರು. ಇದೇ ವೇಳೆ ದಿಢೀರ್ ಮಳೆ ಆರಂಭವಾಗಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ಆಶ್ರಯ ಪಡೆದಾಗ ಗುಡುಗು-ಮಿಂಚಿನೊಂದಿಗೆ ಸಿಡಿಲು ಬಡಿದಿದೆ. ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಧಿವೇಶನ ಒಂದು ವಾರ ವಿಸ್ತರಿಸಿ: ವಿಜಯೇಂದ್ರಹೊಲದಲ್ಲಿ ರಾಶಿ ಕಾಯುತ್ತಿದ್ದ ರೈತನಿಗೆ ಸಿಡಿಲು ಬಡಿದು ಸಾವು; ಮತ್ತೊಬ್ಬರಿಗೆ ಗಂಭೀರ ಗಾಯಯಲ್ಲಮ್ಮನಗುಡ್ಡದಲ್ಲಿ ಅನಧಿಕೃತ ಔಷಧ ಮಾರಾಟ: 9 ಅಂಗಡಿ ಮಾಲೀಕರಿಗೆ ನೋಟಿಸ್ಕರ್ನಾಟಕದಲ್ಲಿ ನಾಲ್ಕು ದಿನ ಭಾರಿ ಮಳೆ; ಸೆ. 24ರಂದು ಕರಾವಳಿಗೆ ರೆಡ್ ಅಲರ್ಟ್ಉತ್ತರ ಕರ್ನಾಟಕದಲ್ಲಿ ಮಳೆ: ಸಿಡಿಲಿಗೆ ಇಬ್ಬರು ಮಹಿಳೆಯರು ಸೇರಿ ಮೂವರು ಬಲಿಕೆಪಿಎಸ್‌ಸಿ ನೇಮಕಾತಿ ಹಗರಣ: ಅಲೋಕ ಕುಮಾರ ನೇತೃತ್ವದಲ್ಲಿ ಎಸ್‌ಐಟಿ ತನಿಖೆನಮ್ಮ ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ– ಡಿ.ಕೆ. ಶಿವಕುಮಾರ‘ವಂದೇ ಮಾತರಂ’ ಗಾಯನಕ್ಕೆ ಉಭಯ ಸದನಗಳಲ್ಲಿ ಜಟಾಪಟಿ; ಸಂವಿಧಾನ ಪೀಠಿಕೆ ವೇಳೆ ಪೂರ್ಣ ಗೀತೆ ಹಾಡಿದ ಬಿಜೆಪಿ ಸದಸ್ಯರುಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ; ಗ್ರಾಮವಾರು ಭೌತಿಕ ಸಮೀಕ್ಷೆಗೆ ಡಾ. ಜಿ. ಪರಮೇಶ್ವರ ಒತ್ತಾಯನಕಲಿ ಔಷಧ ವಿತರಣಾ ಜಾಲದ ನಂಟು: 16 ಫಾರ್ಮಸಿಗಳ ಪರವಾನಗಿ ರದ್ದು, 8 ಅಮಾನತು