LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Entertainment News

ಬಾಕ್ಸ ಆಫೀಸ: ಎರಡನೇ ದಿನ ೨೦೦ ಕೋಟಿ ದಾಟಿದ ಪಠಾಣ

ಮುಂಬೈ:ಖ್ಯಾತ ಹಿಂದಿ ನಟ ಶಾರೂಕ ಖಾನ್ ಅಭಿನಯದ ಪಠಾಣ ಸಿನಿಮಾ 2 ನೇ ದಿನದಂದು 200 ಕೋಟಿ ರೂಪಾಯಿಗೂ ಅಧಿಕ ಗಳಿಸಿ ಬಾಕ್ಸ ಆಫೀಸ್‌ ನಲ್ಲಿ ಜಯಭೇರಿ ಬಾರಿಸುತ್ತಿದೆ.  ಮೊದಲ ಎರಡು ದಿನ  ಬಾಕ್ಸ ಆಫೀಸನಲ್ಲಿ  ಪಠಾಣ ಸಿನಿಮಾ 219.6 ಕೋಟಿ ರೂಪಾಯಿ ಸಂಗ್ರಹಿಸಿದೆ.



ಯಶ ರಾಜ ಫಿಲಂಸ್‌ ನೀಡಿರುವ ಮಾಹಿತಿಯ ಪ್ರಕಾರ ಶಾರೂಕ-ದೀಪಿಕಾ ಪಡುಕೋಣೆ ನಟನೆಯ ಸಿನಿಮಾ 2 ನೇ ದಿನದಂದು 113.6 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ ಸಿನಿಮಾದ ಗಳಿಕೆ 106 ಕೋಟಿ ರೂಪಾಯಿಯಷ್ಟಿತ್ತು.



ದೇಶೀಯ ಮಾರುಕಟ್ಟೆಯಲ್ಲಿ ಸಿನಿಮಾ ಎರಡನೇ ದಿನದಂದು 70.5 ಕೋಟಿ ರೂಪಾಯಿಗಳನ್ನು ಗಳಿಸಿದೆ. (ಒಟ್ಟು 82.94 ಕೋಟಿ ರೂಪಾಯಿ) ಸಿನಿಮಾದ ಹಿಂದಿ ಆವೃತ್ತಿ 68 ಕೋಟಿ ರೂಪಾಯಿಯನ್ನು ಗಳಿಸಿದ್ದು, ಡಬ್ಬಿಂಗ್ ಆವೃತ್ತಿಯಲ್ಲಿ 2.5 ಕೋಟಿ ರೂಪಾಯಿ ಗಳಿಸಿದೆ.  ಪಠಾಣ ಸಿನಿಮಾ ತಮಿಳು ಹಾಗೂ ತೆಲುಗು ಗಳಲ್ಲಿ ಬಿಡುಗಡೆಯಾಗಿದೆ. ಒಂದೇ ದಿನದಲ್ಲಿ ಒಟ್ಟು 70 ಕೋಟಿ ರೂಪಾಯಿ ಗಳಿಸಿದ ಹಿಂದಿ ಸಿನಿಮಾ ಎಂಬ ದಾಖಲೆಯನ್ನೂ ಪಠಾಣ ನಿರ್ಮಿಸಿದೆ.



ವಿದೇಶಗಳಲ್ಲಿ ಈ ಸಿನಿಮಾ ಒಟ್ಟು 30.70 ಕೋಟಿ ರೂಪಾಯಿ ಗಳಿಸಿದೆ. ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು ಎಂಬ ಕಾರಣಕ್ಕೆ ಸಿದ್ಧಾರ್ಥ ಆನಂದ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಬಹಿಷ್ಕಾರದ ಕರೆಗಳನ್ನೂ ನೀಡಲಾಗಿತ್ತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನನೀರಾವರಿ ಸೌಲಭ್ಯಕ್ಕೆ ₹3.25 ಲಕ್ಷ ಸಹಾಯಧನ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಅಭಿನಂದನ್ ಅವಧಿಗೂ ಮುನ್ನ ನಿವೃತ್ತಿ; ಖಾಸಗಿ ವಿಮಾನ ಪೈಲಟ್ ಆಗಿ ಹೊಸ ವೃತ್ತಿಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿನೇಪಾಳ: 7,500 ಮನೆ ಸಂಪೂರ್ಣ ನಾಶಕೈದಿಯೊಂದಿಗೆ ಸರಸ ಸಲ್ಲಾಪ : ಪಿಎಸ್‌ಐ ಜಯಶ್ರೀ ಅಮಾನತುಕರಡು ಮತದಾರರ ಪಟ್ಟಿಯಿಂದ ರಾಘವ ಚಡ್ಡಾ ಹೆಸರು ಡಿಲಿಟ್ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿ