LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ನಿಪ್ಪಾಣಿ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ: ದೆಹಲಿಯ ತಾಂತ್ರಿಕ ತಂಡದ ಭೇಟಿ

ಬೆಳಗಾವಿ, ಆಗಸ್ಟ್ 3: ನಿಪ್ಪಾಣಿ ನಗರದ ಮಹಾತ್ಮಾ ಗಾಂಧಿ ಆಸ್ಪತ್ರೆ ಸಮೀಪ ನಿರ್ಮಾಣ ಹಂತದಲ್ಲಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್–48) ಆರು ಪಥಗಳ ವಿಸ್ತರಣೆ ಕಾಮಗಾರಿಯ ವೇಳೆ ಕುಸಿದ ತಡೆಗೋಡೆಯ ಸ್ಥಳವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ದೆಹಲಿ ಕೇಂದ್ರ ಕಚೇರಿಯ ತಾಂತ್ರಿಕ ತಜ್ಞರ ತಂಡ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸಿದೆ.

ಜುಲೈ 29ರಂದು ಹೆದ್ದಾರಿಯ ಫ್ಲೈಓವರ್ ಸಂಪರ್ಕ ಮಾರ್ಗದ ತಡೆಗೋಡೆಯ ಒಂದು ಭಾಗ ಕುಸಿದ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆ ತೀವ್ರ ಅನುಮಾನಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರದ ತಾಂತ್ರಿಕ ತಂಡವನ್ನು ಸ್ಥಳ ಪರಿಶೀಲನೆಗೆ ನಿಯೋಜಿಸಲಾಗಿತ್ತು.

ಎನ್‌ಎಚ್‌ಎಐನ ಬೆಂಗಳೂರು ವಲಯದ ಮಹಾಪ್ರಬಂಧಕ ಬ್ರಹ್ಮಂಕರ ಅವರ ಮಾಹಿತಿ ಪ್ರಕಾರ, ದೆಹಲಿಯಿಂದ ಆಗಮಿಸಿದ್ದ ತಜ್ಞರ ತಂಡ ಪರೀಕ್ಷಾ ಉಪಕರಣಗಳು ಹಾಗೂ ಇಂಜಿನಿಯರಿಂಗ್ ವಿಧಾನಗಳನ್ನು ಬಳಸಿಕೊಂಡು ತಡೆಗೋಡೆ ನಿರ್ಮಾಣದ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಸ್ಥಳದಿಂದ ವಿವಿಧ ತಾಂತ್ರಿಕ ಮಾಹಿತಿಗಳು ಮತ್ತು ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳ ವಿಶ್ಲೇಷಣೆಯ ನಂತರ ಅಂತಿಮ ವರದಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಘಟನೆ ಸಂಭವಿಸಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಕಾಮಗಾರಿಯನ್ನು ಇದೀಗ ಪುನರಾರಂಭಿಸಲು ಅನುಮತಿ ನೀಡಲಾಗಿದೆ. ತಜ್ಞರ ತಂಡದ ಪ್ರಾಥಮಿಕ ಪರಿಶೀಲನೆಯ ಬಳಿಕ ಕಾಮಗಾರಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಬ್ರಹ್ಮಂಕರ್ ಹೇಳಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಫ್ಲೈಓವರ್ ಸಂಪರ್ಕ ಮಾರ್ಗದ ಮಣ್ಣಿನ ದಿಬ್ಬ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ನಿರಂತರ ಮಳೆಯಿಂದ ನೀರು ಮಣ್ಣಿನೊಳಗೆ ನುಗ್ಗಿತ್ತು. ಇದರಿಂದ ಮಣ್ಣಿನ ಸವೆತ ಉಂಟಾಗಿ ತಡೆಗೋಡೆಗೆ ಒತ್ತಡ ಹೆಚ್ಚಾಗಿ, ರಸ್ತೆ ಮೇಲ್ಮೈ ನಿರ್ಮಾಣ ಕಾರ್ಯ ಆರಂಭವಾಗುವ ಮೊದಲುವೇ ಗೋಡೆ ಕುಸಿದಿರುವ ಸಾಧ್ಯತೆ ಕಂಡುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾಮಗಾರಿಯ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ಈಗಾಗಲೇ ಶಿಸ್ತು ಕ್ರಮ ಕೈಗೊಂಡಿದೆ. ಯೋಜನಾ ನಿರ್ದೇಶಕ, ಸೇತುವೆ ಇಂಜಿನಿಯರ್ ಹಾಗೂ ನಿವಾಸಿ ಇಂಜಿನಿಯರ್ ಅವರನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಲಾಗಿದೆ. ಜೊತೆಗೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.

ದೆಹಲಿ ತಾಂತ್ರಿಕ ತಂಡ ಸಲ್ಲಿಸುವ ಅಂತಿಮ ಗುಣಮಟ್ಟ ಪರಿಶೀಲನಾ ವರದಿಯ ಆಧಾರದ ಮೇಲೆ ಅಗತ್ಯವಿದ್ದರೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ.

ಹೊಸದಾಗಿ ನಿರ್ಮಾಣವಾಗುತ್ತಿದ್ದ ತಡೆಗೋಡೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮೊದಲುವೇ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಬಹುಕೋಟಿ ವೆಚ್ಚದ ಆರು ಪಥಗಳ ಹೆದ್ದಾರಿ ಯೋಜನೆಯ ಗುಣಮಟ್ಟದ ಬಗ್ಗೆ ಸ್ಥಳೀಯ ನಿವಾಸಿಗಳು ಪ್ರಶ್ನೆ ಎತ್ತಿದ್ದಾರೆ. ನಿರ್ಮಾಣ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಭವಿಗಳಿಂದ ಹೊಸ ಮುಖಗಳವರೆಗೆ: ಸಚಿವ ಸಂಪುಟ ಸೇರಿದ 19 ಶಾಸಕರ ರಾಜಕೀಯ ಪಯಣಮಳೆ ಅಬ್ಬರಕ್ಕೆ ರಾಜ್ಯ ತತ್ತರ : ಜಲಾಶಯಗಳು ಭರ್ತಿ, ನದಿ-ಹಳ್ಳಗಳು ಅಪಾಯದ ಮಟ್ಟಕ್ಕೆಸಂಪುಟ ವಿಸ್ತರಣೆಯಲ್ಲೇ ಕೊನೆ ಕ್ಷಣದ ಬದಲಾವಣೆ: 19 ಮಂದಿಗೆ ಮಾತ್ರ ಸ್ಥಾನಕಾಂಗ್ರೆಸ್ ಮೇಲಿನ ನಂಬಿಕೆ ಕುಸಿದಿದೆ : ತನ್ವೀರ ಸೇಠ್ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಮೊದಲ ರಾಜಕೀಯ ಗೆಲುವುಗೋವಾದಲ್ಲಿ ಹೊಸ ಕಟ್ಟುನಿಟ್ಟಿನ ನಿಯಮ: ಈ ತಪ್ಪು ಮಾಡಿದರೆ ₹1 ಲಕ್ಷದವರೆಗೆ ದಂಡಗರ್ಭಪಾತ ಜಾಲದ ಬೆಚ್ಚಿಬೀಳಿಸುವ ಸತ್ಯ: ‘ಗಂಡು ಮಗು’ ಔಷಧಿ ಹೆಸರಿನಲ್ಲಿ ವಂಚನೆ"ನಾನೂ ಸಚಿವ ಸ್ಥಾನದಿಂದ ವಂಚಿತನಾಗಿದ್ದೆ": ಅಸಮಾಧಾನಿತ ಶಾಸಕರಿಗೆ ಡಿ.ಕೆ.ಶಿವಕುಮಾರ ಸಮಾಧಾನಡಿ.ಕೆ. ಸಂಪುಟ ವಿಸ್ತರಣೆ : 19 ಸಚಿವರ ಪ್ರಮಾಣ ವಚನ, ಮಹಿಳೆಯರಿಗೆ ಸಿಗಲಿಲ್ಲ ಅವಕಾಶ ರಾಮಮಂದಿರ ದೇಣಿಗೆ ಕಳ್ಳತನ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ : ಸಂಸತ್ ಆವರಣದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ