LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; 180 ಪ್ರಯಾಣಿಕರು ಸುರಕ್ಷಿತ

ಹೊಸದಿಲ್ಲಿ, ಮೇ 22 : ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗುರುವಾರ ರಾತ್ರಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ತುರ್ತು ಸನ್ನಿವೇಶ ಘೋಷಿಸಲಾಯಿತು.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 29ಆರ್ ರನ್‌ವೇನಲ್ಲಿ ರಾತ್ರಿ ಸುಮಾರು 9.30ಕ್ಕೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ರನ್‌ವೇಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ಎಂಜಿನ್‌ನಲ್ಲಿ ಬೆಂಕಿಯ ಎಚ್ಚರಿಕೆ ಸಂದೇಶ ಕಾಣಿಸಿಕೊಂಡಿದ್ದು, ವಿಮಾನ ಇಳಿದ ತಕ್ಷಣ ಬೆಂಕಿಯನ್ನು ನಂದಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಎ321 ಮಾದರಿಯ ವಿಟಿ-ಸಿಐಒ ಏರ್‌ಬಸ್ ವಿಮಾನವನ್ನು ಬಳಿಕ ರನ್‌ವೇಯಿಂದ ತೆರವುಗೊಳಿಸಲಾಗಿದ್ದು, ವಿಮಾನದಲ್ಲಿದ್ದ 180 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಡಿಜಿಸಿಎ ತಂಡ ತನಿಖೆ ಆರಂಭಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಏರ್ ಇಂಡಿಯಾ, ಮೇ 21ರಂದು ಬೆಂಗಳೂರಿನಿಂದ ದೆಹಲಿಗೆ ಆಗಮಿಸಿದ್ದ ಎಐ 2802 ವಿಮಾನದ ಕಾಕ್‌ಪಿಟ್ ಸಿಬ್ಬಂದಿಗೆ ಒಂದು ಎಂಜಿನ್‌ನಿಂದ ಬೆಂಕಿಯ ಸುಳಿವು ದೊರೆತಿತ್ತು ಎಂದು ತಿಳಿಸಿದೆ.

ತಕ್ಷಣ ನಿಗದಿತ ತುರ್ತು ಕಾರ್ಯಾಚರಣೆ ಕ್ರಮಗಳನ್ನು ಅನುಸರಿಸಲಾಗಿದ್ದು, ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

ಬೆಂಕಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಸಂಬಂಧಿತ ಅಧಿಕಾರಿಗಳು ಹಾಗೂ ಏಜೆನ್ಸಿಗಳೊಂದಿಗೆ ಸೇರಿ ಪೂರ್ಣ ಪ್ರಮಾಣದ ತನಿಖೆ ಆರಂಭಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಗರಿಷ್ಠ ಆದ್ಯತೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದು : ಮತ್ತೆ ಭರವಸೆ ನೀಡಿದ ಧರ್ಮೇಂದ್ರ ಪ್ರಧಾನನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಕಾಕ್ರೋಚ್‌ ಜನತಾ ಪಕ್ಷದ ಆನ್‌ಲೈನ್‌ ಅಭಿಯಾನಮೌಂಟ್‌ ಎವರೆಸ್ಟ ಇಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವುರಾಷ್ಟ್ರೀಯ ಭದ್ರತೆ ಕಾರಣ ಕಾಕ್ರೋಚ್‌ ಜನತಾ ಪಕ್ಷ ಎಕ್ಸ ಖಾತೆ ನಿರ್ಬಂಧಕಾಕ್ರೋಚ್‌ ಹೀಗೆ ಮಾವು ತಿನ್ನುತ್ತವೆ ಎಂದು ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ ವ್ಯಂಗ್ಯ ವಿಡಿಯೋ ವೈರಲ್‌ದ್ವೇಷ ರಾಜಕಾರಣ ಬೇಡ; ಭಾರತೀಯ ಕುಸ್ತಿ ಒಕ್ಕೂಟಕ್ಕೆ ದಿಲ್ಲಿ ಹೈಕೋರ್ಟ ತೀವ್ರ ತರಾಟೆ : ವಿನೇಶ ಫೋಗಟ್‌ ಅನರ್ಹತೆಗೆ ನಿರ್ಧಾರಕ್ಕೆಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; 180 ಪ್ರಯಾಣಿಕರು ಸುರಕ್ಷಿತತಲೆಗೆ ಗುಂಡು ಹಾರಿಸಿಕೊಂಡು ಕೆಎಲ್ಇ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ದಿನೇಶ ಭಟ್ಕಳ ಆತ್ಮಹತ್ಯೆಇರಾನ್‌ ಯುದ್ಧದ ಕಾರಣ ಪುತ್ರನ ಮದುವೆಗೂ ಹೋಗಲಾಗುತ್ತಿಲ್ಲ: ಟ್ರಂಪ್‌ಜೂನ್‌ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ : ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಮತದಾನ