LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಬೋಟ್ ದುರಂತದಲ್ಲಿ ಮನಕಲಕುವ ದೃಶ್ಯ: ಮಗುವನ್ನು ಎದೆಗವಚಿಕೊಂಡ ತಾಯಿ

ಜಬಲ್ಪುರ್, ಮೇ 2 : ಒಂಬತ್ತು ಮಂದಿಯನ್ನು ಬಲಿ ಪಡೆದ ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ನಡೆದ ಕ್ರೂಸ್ ಬೋಟ್ ದುರಂತದ ವೇಳೆ, ಕೊನೆಯ ಕ್ಷಣಗಳಲ್ಲಿ ತಾಯಿಯು ತನ್ನ ಮಗುವನ್ನು ಎದೆಗವಚಿಕೊಂಡಿರುವುದು ವೈರಲ್ ವಿಡಿಯೊದಲ್ಲಿ ಕಂಡು ಬಂದಿದೆ.

ನೀರು ದೋಣಿಯೊಳಗೆ ಪ್ರವೇಶಿಸಿದಾಗ ಪ್ರಯಾಣಿಕರು ಜೀವ ರಕ್ಷಕ ಜಾಕೆಟ್‌ಗಳತ್ತ ಧಾವಿಸಿದ್ದು, ಈ ವೇಳೆ ತಾಯಿಯು ಜಾಕೆಟ್ ತೊಟ್ಟುಕೊಂಡು ಮಗುವನ್ನು ಹಿಡಿದುಕೊಂಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಗುರುವಾರ ಸಂಜೆ ಜಲಾಶಯದ ಬಾರ್ಗಿ ಅಣೆಕಟ್ಟು ಬಳಿ ಬೋಟ್ ಮುಳುಗುವ ಮುನ್ನ ತಾಯಿ ಮತ್ತು ಮಗುವಿನ ಕೊನೆಯ ಕ್ಷಣಗಳನ್ನು ವಿಡಿಯೊದಲ್ಲಿ ಕಾಣಬಹುದು. ಹಲವು ಗಂಟೆಗಳ ಬಳಿಕ ರಕ್ಷಣಾ ತಂಡಗಳು ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಪತ್ತೆ ಹಚ್ಚಿದ್ದು, ಇಬ್ಬರೂ ಒಂದೇ ಜೀವ ರಕ್ಷಕ ಜಾಕೆಟ್‌ನಲ್ಲಿ ಸುತ್ತಿಕೊಂಡಿರುವುದು ಕಂಡು ಬಂದಿದೆ.

ಮೃತದೇಹಗಳನ್ನು ನದಿತೀರಕ್ಕೆ ತರಲಾಗುತ್ತಿದ್ದಂತೆ ಕುಟುಂಬ ಸದಸ್ಯರು ಗದ್ಗದಿತರಾದರು. ಸ್ಥಳಕ್ಕೆ ಆಗಮಿಸಿದ್ದ ರಾಜ್ಯ ಸಚಿವ ರಾಕೇಶ್ ಸಿಂಗ್ ಅವರೂ ಭಾವುಕರಾದರು.

ಸುಮಾರು 30 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬೋಟ್ ದಿಢೀರ್ ಬಿರುಗಾಳಿಗೆ ಸಿಲುಕಿ ಮಗುಚಿ ಬಿದ್ದಿದ್ದರಿಂದ ದುರಂತ ಸಂಭವಿಸಿದೆ. ಸಂಜೆ ಸುಮಾರು 6 ಗಂಟೆ ವೇಳೆಗೆ ಬಲವಾದ ಗಾಳಿ ಬೀಸಿದ್ದು, ನೀರು ಉಕ್ಕೇರಿ ದೋಣಿ ಮಗುಚಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡುತ್ತಿದೆ ಹಾಗೂ ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ