LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನೌಕಾಪಡೆಯ ಹಡಗು ನಿಗ್ರಹ ಸಾಮರ್ಥ್ಯಕ್ಕೆ ಮತ್ತಷ್ಟು ಬಲ

ಹೊಸದಿಲ್ಲಿ, ಎ.30 : ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ನೌಕಾಪಡೆ ಜಂಟಿಯಾಗಿ ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿಯಲ್ಲಿ ಹೆಲಿಕಾಪ್ಟರ್ ವೇದಿಕೆಯಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸುವ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿವೆ.

ಈ ಪ್ರಯೋಗದಲ್ಲಿ ಅಲ್ಪ ಅವಧಿಯಲ್ಲೇ ಒಂದೇ ಹೆಲಿಕಾಪ್ಟರ್‌ನಿಂದ ಎರಡು ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಅತ್ಯಾಧುನಿಕ ವಾಯುವಿನಿಂದ ಉಡಾಯಿಸಲಾಗುವ ಹಡಗು ನಿಗ್ರಹ ವ್ಯವಸ್ಥೆಯ ಪ್ರಥಮ ಯಶಸ್ವಿ ಪರೀಕ್ಷೆಯಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಎನ್ಎಎಸ್‌ಎಂ-ಎಸ್‌ಆರ್ ಎಂಬ ಅಲ್ಪದೂರ ಸಾಮರ್ಥ್ಯದ ಹಡಗು ನಿಗ್ರಹ ಕ್ಷಿಪಣಿ ಭಾರತದ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ವಾಯು ಆಧಾರಿತ ಕ್ಷಿಪಣಿಯಾಗಿದೆ. ಇದು ಸಮುದ್ರಮಟ್ಟದ ಸಮೀಪದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 55 ಕಿಲೋಮೀಟರ್ ದೂರವರೆಗೆ ದಾಳಿ ನಡೆಸಬಲ್ಲದು. ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಯಾವುದೇ ಸಮಯದಲ್ಲಿ ಕಾರ್ಯಾಚರಣೆ ನಡೆಸುವ ‘ಫೈರ್-ಅಂಡ್-ಫರ್ಗೆಟ್’ ತಂತ್ರಜ್ಞಾನವನ್ನು ಹೊಂದಿದೆ.

ಪ್ರಯೋಗದ ವೇಳೆ ದೂರ ಮತ್ತು ಚಲನವಲನವನ್ನು ಗಮನಿಸಲು ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆ ಹಾಗೂ ಟೆಲೆಮೆಟ್ರಿ ಸೌಲಭ್ಯಗಳನ್ನು ಬಳಸಿ ಚಂಡೀಪುರದ ಸಮಗ್ರ ಪರೀಕ್ಷಾ ಕ್ಷೇತ್ರದಲ್ಲಿ ದತ್ತಾಂಶ ಸಂಗ್ರಹಿಸಲಾಯಿತು. ಕ್ಷಿಪಣಿಯ ಕಾರ್ಯಕ್ಷಮತೆ ಎಲ್ಲ ಮಾನದಂಡಗಳಿಗೆ ಅನುಗುಣವಾಗಿರುವುದು ದೃಢಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಪರೀಕ್ಷೆಯಿಂದ ಕ್ಷಿಪಣಿಯ ಉಡಾವಣಾ ಸಾಮರ್ಥ್ಯ ಮಾತ್ರವಲ್ಲದೇ, ಸಮುದ್ರಮಟ್ಟದಲ್ಲಿ ಗುರಿ ಹೊಡೆದಿಳಿಸುವ ನಿಖರತೆ ಮತ್ತು ದಾಳಿಯ ಸಾಮರ್ಥ್ಯವೂ ಯಶಸ್ವಿಯಾಗಿ ಸಾಬೀತಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಿಷ್ಮಾ ಕಪೂರ ಮಕ್ಕಳಿಗೆ ಮಧ್ಯಂತರ ರಿಲೀಫ್ ನೀಡಿದ ಹೈಕೋರ್ಟ2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 180 ದೇಶಗಳ ಪೈಕಿ 157ನೇ ಸ್ಥಾನಕ್ಕೆ ಕುಸಿದ ಭಾರತನಾಯಕತ್ವ ಬದಲಾವಣೆ ಕುರಿತು ಸೂಕ್ತ ಸಮಯದಲ್ಲಿ ತೀರ್ಮಾನ: ಮಲ್ಲಿಕಾರ್ಜುನ ಖರ್ಗೆಮುಸ್ಲಿಮರ ಮೇಲಿನ ದಾಳಿ ಪ್ರಕರಣಗಳಲ್ಲಿ ಮಾನವ ಹಕ್ಕು ಆಯೋಗಗಳ ನಿರ್ಲಕ್ಷ್ಯ: ಅಲಹಾಬಾದ ಹೈಕೋರ್ಟನಲ್ಲಿ ಭಿನ್ನಾಭಿಪ್ರಾಯಪಿಕ್‌ಅಪ್‌ ವಾಹನ–ಎಸ್‌ಯುವಿ ಡಿಕ್ಕಿ: 15 ಮಂದಿ ಸಾವು ಕ್ಲೋರಿನ್ ಅನಿಲ ಸೋರಿಕೆ: 22 ನಿವಾಸಿ, 2 ಅಗ್ನಿಶಾಮಕ ಸಿಬ್ಬಂದಿ ಆಸ್ಪತ್ರೆಗೆಅಮೆರಿಕ–ಇರಾನ್ ಉದ್ವಿಗ್ನತೆ ತೀವ್ರ: ಹೊಸ ಅಸ್ತ್ರ ಅನಾವರಣ ಎಚ್ಚರಿಕೆಸಂಜಯ ಗಾಂಧಿ ಹೆಸರಿನ ಸಂಸ್ಥೆಗಳ ಮರುನಾಮಕರಣ ನೌಕಾಪಡೆಯ ಹಡಗು ನಿಗ್ರಹ ಸಾಮರ್ಥ್ಯಕ್ಕೆ ಮತ್ತಷ್ಟು ಬಲಮಾನನಷ್ಟ ಮೊಕದ್ದಮೆ: ಇನ್ನೂ 20 ವರ್ಷ ಕಾಯುವಂತೆ 90ರ ವೃದ್ಧೆಗೆ ಬಾಂಬೆ ಹೈಕೋರ್ಟ ಸೂಚನೆ!