LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕೆಎಎಸ್ ಪಾಸಾದ ಕೂಲಿ

ಕೊಚ್ಚಿ: ಸಕಲ ಸೌಲಭ್ಯಗಳಿದ್ದರೂ ಪಾಸಾಗುವದು ಕಷ್ಟ ಎಂದು ಅನೇಕರು ಹೇಳುವುದನ್ನು ಕೇಳುತ್ತೇವೆ, ಆದರೆ ಕೇರಳ ರೈಲು ನಿಲ್ದಾಣದಲ್ಲಿ ಕೂಲಿಯೊಬ್ಬ ರೈಲು ನಿಲ್ದಾಣದಲ್ಲಿ ಲಭ್ಯವಿರುವ ಉಚಿತ ಮೊಬೈಲ್ ವೈಫೈ ಸೌಲಭ್ಯ ಬಳಸಿಕೊಂಡು ಅಧ್ಯಯನ ನಡೆಸಿ, ಪ್ರತಿಷ್ಠಿತ ಕೇರಳ ಸಾರ್ವಜನಿಕ ಸೇವಾ ಪರೀಕ್ಷೆ (ಕೆಎಎಸ್‌)ಯಲ್ಲಿ ಉತ್ತೀರ್ಣರಾದ ಸ್ಫೂರ್ತಿದಾಯಕ ನಿಜ ಜೀವನದ ಕಥೆ ಇದು.



ಮುನ್ನಾರ್‌ ಮೂಲದ ಶ್ರೀನಾಥ‌ ಕೆ. ಎಂಬವರು ಕೊಚ್ಚಿ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ.ಕುಟುಂಬಕ್ಕೆ ಒಳ್ಳೆಯ ಭವಿಷ್ಯ ಕಲ್ಪಿಸಬೇಕು ಹಾಗೂ ತನ್ನ ಜೀವನ ಉತ್ತಮಪಡಿಸಿಕೊಳ್ಳಬೇಕು ಎಂಬ ಅಭಿಲಾಷೆಯಲ್ಲಿ ಸರ್ಕಾರಿ ಹುದ್ದೆ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಆದರೆ ಕೂಲಿ ಕೆಲಸದಲ್ಲಿ ಮುಳುಗಿದ ಅವರಿಗೆ ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. 2016ರಲ್ಲಿ ಕೊಚ್ಚಿ ರೈಲು ನಿಲ್ದಾಣದಲ್ಲಿ ರೈಲ್‌ಟೆಲ್‌ ಉಚಿತ ವೈಫೈ ಸೌಲಭ್ಯ ಪರಿಚಯಿಸಿತು.



ಶ್ರೀನಾಥ‌ ಅವರು ತಾವು ಕೂಡಿಟ್ಟಿದ್ದ ಹಣದಲ್ಲಿ ಮೊಬೈಲ್‌, ಸಿಮ್‌ ಮತ್ತು ಮೆಮೊರಿ ಕಾರ್ಡ್‌ ಖರೀದಿಸಿದರು. ವೈಫೈ ಬಳಸಿಕೊಂಡು ಸರ್ಕಾರಿ ಪರೀಕ್ಷೆಗಳಿಗೆ ಸಂಬಂಧಿಸಿದ ಆಡಿಯೋ ಬುಕ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡರು. ಕೆಲಸ ಮಾಡುವ ಸಮಯದಲ್ಲೇ ಇಯರ್‌ ಫೋನ್‌ ಹಾಕಿಕೊಂಡು ಆಡಿಯೋ ಪ್ರಶ್ನೆ-ಉತ್ತರಗಳು ಮತ್ತು ಇತರೆ ಅಗತ್ಯ ಮಾಹಿತಿಗಳನ್ನು ಆಲಿಸಿ, ನೆನಪಿನಲ್ಲಿ ಇಟ್ಟುಕೊಳ್ಳಲು ಆರಂಭಿಸಿದರು.



ಪರಿಶ್ರಮದ ನಂತರ ವಿಲೇಜ್‌ ಅಸಿಸ್ಟೆಂಟ್‌ ಹುದ್ದೆಗಾಗಿ ಕೇರಳ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆಗೆ ಹಾಜರಾಗಿ, ಶೇ.82ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ