LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
International News

ಇಸ್ರೇಲ್‌ಗೆ ಹೌತಿಗಳ ಸವಾಲು: ಕೆಂಪು ಸಮುದ್ರದಲ್ಲಿ ಸಂಚಾರಕ್ಕೆ ತಡೆ

ಸನಾ, ಜೂ. 8 : ಯೆಮೆನ್‌ನ ಹೌತಿ ಬಂಡುಕೋರರು ಇಸ್ರೇಲ್ ವಿರುದ್ಧ ನಡೆಸಿದ ದಾಳಿಯನ್ನು ದೃಢಪಡಿಸಿದ್ದು, ಆಕ್ರಮಿತ ಜಾಫಾ ಪ್ರದೇಶದಲ್ಲಿರುವ ಇಸ್ರೇಲ್‌ನ ಸೂಕ್ಷ್ಮ ನೆಲೆಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಟೆಲಿಗ್ರಾಮ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕೆಂಪು ಸಮುದ್ರದಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ಸಮುದ್ರ ಸಂಚಾರದ ಮೇಲೆ ಸಂಪೂರ್ಣ ನಿಷೇಧ ಹೇರಿರುವುದಾಗಿ ಹೌತಿಗಳು ಘೋಷಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಯಾವುದೇ ಆಕ್ರಮಣಕಾರಿ ಕ್ರಮ ಕೈಗೊಳ್ಳಲಾದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಜನರ ಮೇಲೂ ಹಾಗೂ ಫೆಲೆಸ್ತೀನ್, ಗಾಝಾ, ಇರಾನ್, ಲೆಬನಾನ್ ಮತ್ತು ಇರಾಕ್‌ನಲ್ಲಿರುವ ಪ್ರತಿರೋಧಿ ಸಂಘಟನೆಗಳ ಮೇಲೂ ಹೇರಲಾಗಿರುವ ಅನ್ಯಾಯದ ಮುತ್ತಿಗೆಯನ್ನು ನಾವು ಮೌನವಾಗಿ ಸಹಿಸುವುದಿಲ್ಲ ಎಂದು ಹೌತಿಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಹೌತಿಗಳ ಈ ಘೋಷಣೆ ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆಯ ಮೆಟ್ಟಿಲಿನಲ್ಲಿ ಕಾಲುಜಾರಿ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವುಹಾವೇರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ₹3.43 ಕೋಟಿ ದಂಡಕನಿಷ್ಠ ವೇತನ ಜಾರಿಗೆ ತಡೆ ನೀಡಿದ್ದ ಸುತ್ತೋಲೆಗಳಿಗೆ ಹೈಕೋರ್ಟ ತಡೆಅನಾರೋಗ್ಯದ ಹಿನ್ನೆಲೆ ಕೆಎಲ್‌ಇ ಆಸ್ಪತ್ರೆ ಉದ್ಘಾಟನೆಗೆ ಅಮಿತ ಶಾ ಗೈರುಅವರಾದಿ ಗ್ರಾಪಂ ಕಚೇರಿಯಲ್ಲಿ ತಂದೆ-ಮಗಳ ಹತ್ಯೆ: ಮೂವರು ಆರೋಪಿಗಳ ಬಂಧನಮಮತಾ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನಮೋದಿ ಜನ್ಮದಿನವನ್ನು ‘ನಿರುದ್ಯೋಗ ದಿನ’ವಾಗಿ ಆಚರಿಸಿ ಕಾಂಗ್ರೆಸ್ ಪ್ರತಿಭಟನೆಐಫೋನ್ 18 ಪ್ರೊ ಮಾರಾಟ ಆರಂಭ; ಆ್ಯಪಲ್ ಮಳಿಗೆಗಳ ಮುಂದೆ ಗ್ರಾಹಕರ ಸಾಲುನಿಥಾರಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ ಶವವಾಗಿ ಪತ್ತೆ‘ಅಂಬಾರಿ’ಯಲ್ಲಿ ಸಿಎಂ, ಸಚಿವರ ಮೆರವಣಿಗೆ