LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹ್ಯಾಂಟಾವೈರಸಗೆ 3 ಸಾವು; ಹಲವು ದೇಶಗಳಲ್ಲಿ ಕಟ್ಟೆಚ್ಚರ

ಕೇಪ್‌ಟೌನ್‌, ಮೇ 8 : ಅಟ್ಲಾಂಟಿಕ್‌ ಸಮುದ್ರದಲ್ಲಿ ಸಂಚರಿಸುತ್ತಿದ್ದ ಡಚ್‌ ಧ್ವಜದ ಎಂವಿ ಹೊಂಡಿಯಸ್‌ ಕ್ರೂಸ್‌ ಹಡಗಿನಲ್ಲಿ ಅಪರೂಪದ ಹ್ಯಾಂಟಾವೈರಸ್‌ ಸೋಂಕು ಹರಡಿದ್ದು, ಇದುವರೆಗೆ 3 ಪ್ರಯಾಣಿಕರು ಮೃತಪಟ್ಟಿದ್ದಾರೆ. ಹಲವರು ಅಸ್ವಸ್ಥರಾಗಿದ್ದಾರೆ.

ಹಡಗಿನಲ್ಲಿ ಇನ್ನೂ 140ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಹಡಗು ಈಗ ಸ್ಪೇನ್‌ನ ಕ್ಯಾನರಿ ದ್ವೀಪಗಳತ್ತ ಸಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ವಿವಿಧ ದೇಶಗಳ ಆರೋಗ್ಯ ಇಲಾಖೆಗಳು ಪತ್ತೆಹಚ್ಚಿ ನಿಗಾವಹಿಸುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯಸ್‌ ಮಾಹಿತಿ ನೀಡಿ, ಹ್ಯಾಂಟಾವೈರಸ್‌ ಸಾಮಾನ್ಯವಾಗಿ ಇಲಿ ಮತ್ತು ಇತರ ಕೀಟಕಗಳಿಂದ ಹರಡುವ ಸೋಂಕು ಎಂದು ತಿಳಿಸಿದ್ದಾರೆ. ಕೆಲ ಅಪರೂಪದ ಸಂದರ್ಭಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೂ ಸೋಂಕು ಹರಡಬಹುದು ಎಂದು ಎಚ್ಚರಿಸಿದ್ದಾರೆ.

ಏಪ್ರಿಲ್‌ 6ರಂದು ಮೊದಲ ಪ್ರಕರಣ ಪತ್ತೆಯಾಗಿದ್ದು, ಬಳಿಕ 70 ವರ್ಷದ ಡಚ್‌ ಪ್ರಯಾಣಿಕ ಹಡಗಿನಲ್ಲೇ ಮೃತಪಟ್ಟಿದ್ದರು. ನಂತರ ಅವರ ಪತ್ನಿ ದಕ್ಷಿಣ ಆಫ್ರಿಕಾದ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಮೇ 2ರಂದು ಜರ್ಮನ್‌ ಮಹಿಳಾ ಪ್ರಯಾಣಿಕೆಯೂ ಮೃತಪಟ್ಟಿದ್ದರು.

ಹಡಗಿನಲ್ಲಿದ್ದ ಮತ್ತೊಬ್ಬ ಬ್ರಿಟಿಷ್‌ ಪ್ರಯಾಣಿಕನಲ್ಲಿ ಸೋಂಕು ದೃಢಪಟ್ಟಿದ್ದು, ಅವರಿಗೆ ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ಸ್ವಿಟ್ಜರ್‌ಲ್ಯಾಂಡ್‌ನಲ್ಲೂ ಮತ್ತೊಬ್ಬ ಪ್ರಯಾಣಿಕನಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ದಕ್ಷಿಣ ಆಫ್ರಿಕಾ, ಸ್ಪೇನ್‌, ನೆದರ್‌ಲ್ಯಾಂಡ್‌ ಸೇರಿದಂತೆ ಹಲವು ದೇಶಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸೋಂಕು ಮತ್ತಷ್ಟು ಹರಡದಂತೆ ಆರೋಗ್ಯ ನಿಗಾ ಬಿಗಿಗೊಳಿಸಲಾಗಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸತೀಶ ಜಾರಕಿಹೊಳಿ ಭಾಮೈದ ಮಂಜುನಾಥಗೆ ಈಡಿ ಬಿಗ್ ಶಾಕ್: ಆರು ಕಡೆ ಏಕಕಾಲದ ದಾಳಿಹಸೆಮಣೆ ಏರಬೇಕಿದ್ದ ಯುವತಿ, ತಂದೆ-ತಾಯಿ ಆತ್ಮಹತ್ಯೆದುಡ್ಡು ಕೊಟ್ಟು ಖರೀದಿಸಿ ತಂದ 17 ಕಾಂಗ್ರೆಸ್‌ ಶಾಸಕರಿಂದಲೇ ಬಿಜೆಪಿ ಹಾಳಾಯ್ತು : ಈಶ್ವರಪ್ಪ ಬಾಂಬ್ಕನ್ನಡ ಆದೇಶ ಹರಿದು ಎಂಇಎಸ್‌ ಪುಂಡಾಟ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆಮೊಸರು ಪ್ಯಾಕೆಟನಲ್ಲಿ ಸತ್ತ ಇಲಿ ಮರಿ ಪತ್ತೆ!ಅಶ್ಲೀಲ ವಿಡಿಯೋಗಳ ವೀಕ್ಷಣೆ ; 9 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 12 ವರ್ಷದ ಬಾಲಕ!ನೀಟ್‌ ಮರುಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲಯುವತಿಯೊಂದಿಗೆ ಹೊಟೇಲ್‌ಗೆ ತೆರಳಿದ್ದ ಯುವಕನ ಮೇಲೆ ಹಲ್ಲೆಮುತಗಾದ 300 ವರ್ಷದ ಬಾವಿ ಪುನರುಜ್ಜೀವನಗೊಳಿಸಿದ ಪ್ಯಾಸ್ ಫೌಂಡೇಶನ್ಬುರ್ಖಾ ಅವನತಿಯ ಸಂಕೇತ : ಇಮ್ತಿಯಾಜ ಅಲಿ