LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆಗೆ ಅಭಿನಂದನೆ

Advertisement

 

ಬೆಳಗಾವಿ, ಆ. 1: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 'ಬಸವ ಅಧ್ಯಯನ ಪೀಠ' ಸ್ಥಾಪಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ ಹಾಗೂ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಂತೋಷ ಕಾಮಗೌಡ ಮತ್ತು ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ ಕಂಬಾರ ಅವರನ್ನು ಗೌರವಿಸಿ ಅಭಿನಂದಿಸಿದರು.

ವಿಶ್ವಗುರು ಬಸವಣ್ಣನವರ ಚಿಂತನೆ, ತತ್ವ ಹಾಗೂ ಸಾಮಾಜಿಕ ಕೊಡುಗೆಗಳ ಅಧ್ಯಯನಕ್ಕಾಗಿ ವಿಶೇಷ ಅಧ್ಯಯನ ಪೀಠ ಸ್ಥಾಪಿಸುವಂತೆ ಜಾಗತಿಕ ಲಿಂಗಾಯಿತ ಮಹಾಸಭೆಯ ಪ್ರಧಾನ ಕಚೇರಿಯ ಡಾ. ಎಸ್. ಎಂ. ಜಾಮದಾರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರ ನೇತೃತ್ವದ ನಿಯೋಗವು ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇದೀಗ ಆ ಮನವಿ ಕಾರ್ಯರೂಪಕ್ಕೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ತ್ಯಾಗರಾಜ, ರಿಜಿಸ್ಟ್ರಾರ್ ಸಂತೋಷ ಕಾಮಗೌಡ, ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ ಕಂಬಾರ ಸೇರಿದಂತೆ ಅಧ್ಯಯನ ಪೀಠ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಸಮಸ್ತ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ಖಜಾಂಚಿ ಮುರಗೆಪ್ಪ ಬಾಳಿ, ಸಿ. ಎಂ. ಬೂದಿಹಾಳ, ಪ್ರವೀಣ ಚಿಕ್ಕಲಿ, ಶಂಕರ ಗುಡುಸ, ಅಶೋಕ ಬೆಂಡಿಗೇರಿ, ಶಿವಾನಂದ ಮೇಟ್ಯಾಳ, ಆನಂದ ಗುಡುಸ, ಮಹಾನಂದ ಪರುಶೆಟ್ಟಿ, ಶೋಭಾ ಶಿವಳ್ಳಿ, ಕಾವೇರಿ ಕಿಲಾರಿ, ರತ್ನಾ ಬೆಣಚಿನಮರಡಿ, ಗುರುಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕ: ಮೋದಿಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿಬಾಕ್ಸಿಂಗ್‌ನಲ್ಲಿ ಭಾರತದ ಡಬಲ್ ಚಿನ್ನದ ಸಂಭ್ರಮ: ಪ್ರೀತಿ ಪವಾರ, ಜೈಸ್ಮಿನ್‌ಗೆ ಚಿನ್ನಪರೀಕ್ಷೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತನೀವೇ ಕ್ಷಮೆ ಕೇಳಿ, ನಿಮ್ಮ ಬೆಂಬಲಿಗರ ಭಾಷೆಯನ್ನೂ ಖಂಡಿಸಿ : ಪ್ರಧಾನಿ ವಿಡಿಯೊಗೆ ಉದ್ಧವ್ ಠಾಕ್ರೆ ತಿರುಗೇಟುಇ20 ಇಂಧನ ನೀತಿ ವಿರೋಧಕ್ಕೆ ನನ್ನನ್ನು ಗೃಹಬಂಧನದಲ್ಲಿಟ್ಟಿದ್ದಾರೆ : ಪೂನಾವಾಲಾತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ : ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ ವಾಗ್ದಾಳಿ'ಗೋ ಬ್ಯಾಕ್ ಮೋದಿ' ಚಳುವಳಿ; ದಸಂಸ ಮುಖಂಡರು, ಕಾರ್ಯಕರ್ತರು ಪೊಲೀಸ್ ವಶಕ್ಕೆಮತ್ತೆ ಎಥೆನಾಲ್ ಮಿಶ್ರಣ, ಪೆಟ್ರೋಲ್ ದರ ಹೆಚ್ಚಳ ಸಮರ್ಥಿಸಿಕೊಂಡ ಕೇಂದ್ರಆನ್‌ಲೈನ್ ರಿಫಂಡ್ ನೆಪದಲ್ಲಿ ಸೈಬರ್ ವಂಚನೆ: ₹1 ಲಕ್ಷ ಫ್ರೀಜ್ ಮಾಡಿದ ಸಿಇಎನ್ ಪೊಲೀಸರು