LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮಹಿಳೆ ವಿರುದ್ಧ ಬಿಜೆಪಿ ಶಾಸಕ ಲಿಂಬಾವಳಿ ನಿಂದನೆ : ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ತಮ್ಮ ಸಮಸ್ಯೆ ಹೇಳಲು ಶಾಸಕರ ಬಳಿಯಲ್ಲಿ ಬಂದ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನಲೆಯಲ್ಲಿ ಸಚಿವರ ವಿರುದ್ಧ ಸಂತ್ರಸ್ತ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.



ಅರವಿಂದ ಲಿಂಬಾವಳಿ ದರ್ಪಕ್ಕೆ ಒಳಗಾದ ಸಂತ್ರಸ್ತ ಮಹಿಳೆ ರುತ್ ಸಗಾಯ್ ಮೇರಿಯವರು ಮಹಿಳಾ ಆಯೋಗದ ಕಚೇರಿಗೆ ತೆರಳಿ, ಅರವಿಂದ ಲಿಂಬಾವಳಿ ವಿರುದ್ಧ ದೂರು ನೀಡಿದ್ದಾರೆ.



ಈ ವೇಳೆ ಮಾತನಾಡಿದ ಅವರು, ನಮ್ಮ ಮನೆಯ ಗೋಡೆ ಒಡೆದು ಹಾಕಿದ್ದರು. ನಮ್ಮ ಮನೆ ಗೋಡೆ ಒತ್ತುವರಿಯಾಗಿದೆ ಅಂತ ಡೆಮಾಲಿಷ್ ಮಾಡಿದ್ರು. ನಮ್ಮ ಬಳಿ ದಾಖಲೆಗಳು ಸರಿಯಾಗಿಯೇ ಇವೆ.



ಗೋಡೆ ಕೆಡವುದಕ್ಕೂ ಮೊದಲು ನೋಟಿಸ್ ಕೊಡಬೇಕು. ಅದ್ಯಾವುದನ್ನೂ ನೀಡದೆ ಏಕಾಏಕಿ ಕೆಡವಿದ್ದಾರೆ. ನಾನು ಶಾಸಕರಿಗೆ ದಾಖಲೆ ತೋರಿಸಲು ಹೋಗಿದ್ದೆ. ಆಗ ಅವರು ನನ್ನಿಂದ ದಾಖಲೆ ಕಿತ್ತುಕೊಂಡರು. ಆ ಬಳಿಕ ಬಾಯಿಗೆ ಬಂದಂತೆ ಬೈದರು ಎಂದರು.



ನಾನು ಮಹಿಳೆ ಸರ್ ಅಂತ ಹೇಳಿದೆ. ಏನು ಮಹಿಳೆ ನಾಚಿಕೆ, ಮಾನ ಮರ್ಯಾದೆ ಇಲ್ವಾ ಅಂತ ಬೈದರು. ನನ್ನ ಮೇಲೆ ಹಲ್ಲೆ ಮಾಡೋಕೆ ಬಂದರು.



ಅವರ ಪಕ್ಷದ ಕಾರ್ಯಕರ್ತರಿಗೆ ಏ ಇವಳಿಗೆ ಹೊಡಿರೋ ಅಂತ ಹೇಳಿದರು. ಲೇಡಿ ಪೊಲೀಸರನ್ನು ಕರೆಸಿ ಇವಳನ್ನು ಎಳ್ಕೊಂಡು ಹೋಗಿ ಅಂತಾ ಹೇಳಿದರು. ನನ್ನನ್ನು ಪೊಲೀಸ್ ಸ್ಟೇಷನ್ ಗೂ ಕರೆದುಕೊಂಡು ಹೋದರು. ಆದ್ರೆ ಪೊಲೀಸರು ಕೂಡ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಹೇಳಿದರು.



ಇನ್ನು ಈ ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಅರವಿಂದ ಲಿಂಬಾವಳಿ, ನಾನೇನು ರೇಪ್​ ಮಾಡಿದ್ದೇನಾ? ಎಂದು ತಮ್ಮ  ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಪ್ರಶ್ನೆ ಕೇಳಲು ಪತ್ರಕರ್ತರನ್ನೇ ದಬಾಯಿಸಿದ್ದಾರೆ.



ಇನ್ನೂ ನಾನೇನು ರೇಪ್ ಮಾಡಿದ್ದೇನಾ ಎಂಬ ಅರವಿಂದ ಲಿಂಬಾವಳಿ ಹೇಳಿಕೆ ವಿಚಾರವಾಗಿ ಮಹಿಳೆ ಮಾತನಾಡಿ, ಅರವಿಂದ ಲಿಂಬಾವಳಿ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಾನೇನು ರೇಪ್ ಮಾಡಿದ್ದೇನಾ ಅಂತಾ ಹೇಳಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಬಿಜೆಪಿ ನಾಯಕರು ಶಿಸ್ತಿನ ಪಕ್ಷ ಅಂತಾ ಹೇಳುತ್ತಾರೆ. ಇದೇನಾ ಅವರ ಸಂಸ್ಕೃತಿ.? ಆಕೆ ಪ್ರಶ್ನಿಸಿದ್ದಾಳೆ.



ಒಬ್ಬ ಮಹಿಳೆ ಬಗ್ಗೆ ಹೇಗೆ ಮಾತನ್ನಾಡಬೇಕು ಅನ್ನೋದು ಗೊತ್ತಿಲ್ಲ.  ನಾನು ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯುತ್ತೇನೆ ಎಂದು ಆಕೆ ಹೇಳಿದರು. ಇತ್ತ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿ  ಕಿಡಿಕಾರಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆರೌಡಿಸಂಗೆ ಕಠಿಣ ಕಡಿವಾಣ: ಪ್ರತಿ ತಾಲ್ಲೂಕಿನಲ್ಲಿ ವಿಶೇಷ ನಿಗಾ ಪಡೆರಾಹುಲ್‌ ಗಾಂಧಿ-ಸಿದ್ದರಾಮಯ್ಯ ರಿಮೋಟ್‌ ಕಂಟ್ರೋಲ್‌ ಸರಕಾರ : ಆರ್‌.ಅಶೋಕಉ.ಪ್ರ. ವಿಧಿವಿಜ್ಞಾನ ಪ್ರಯೋಗಾಲಯಗಳ ದುಸ್ಥಿತಿಯಿಂದ ಕೊಲೆ, ಅತ್ಯಾಚಾರ ಆರೋಪಿಗಳಿಗೆ ಜಾಮೀನು: ಅಲಹಾಬಾದ ಹೈಕೋರ್ಟ ತೀವ್ರ ಕಳವಳಬೆಳಗಾವಿ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ಅಧಿಕಾರಿಗಳ ದಾಳಿಟ್ರಂಪ್‌ಗೆ ಹಿನ್ನಡೆ : ಇರಾನ್ ಯುದ್ಧ ಅಂತ್ಯಗೊಳಿಸಲು ಅಮೆರಿಕ ಪ್ರತಿನಿಧಿಗಳ ಸಭೆ ನಿರ್ಣಯ ಅಂಗೀಕಾರಕೇರಳಕ್ಕೆ ಮುಂಗಾರು ಪ್ರವೇಶ: ಭಾರಿ ಮಳೆ ಮುನ್ಸೂಚನೆಕಾಂಗ್ರೆಸ್ ಹೈಕಮಾಂಡಗೆ ಹರಿಪ್ರಸಾದ ಕೃತಜ್ಞತೆಡಿ.ಕೆ. ಶಿವಕುಮಾರ ಪದಗ್ರಹಣಕ್ಕೆ ಕ್ಷಣಗಣನೆಹಿಂದೂ ಮಹಿಳೆ ಅಪಹರಣದ ಸುಳ್ಳು ಕಥೆ ಹೆಣೆದು ಮುಸ್ಲಿಂ ಯುವಕರನ್ನು ಸಿಲುಕಿಸಲು ಯತ್ನ, ಆರೋಪಿ ಪರಾರಿ