LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಗೋಕಾಕ ಪೊಲೀಸರಿಂದ ಡಕಾಯಿತರ ಬಂಧನ

ಗೋಕಾಕ, 19-  ಗೋಕಾಕ ನಗರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ವಲಯದಲ್ಲಿ ಇತ್ತೀಚಿಗೆ ನಡೆದ ದರೋಡೆ, ಸುಲಿಗೆ, ಮೋಟಾರ ಸೈಕಲ್ ಕಳ್ಳತನ, ಜಾನುವಾರು ಕಳ್ಳತನ ಮುಂತಾದ ಪ್ರಕರಣಗಳನ್ನು ಎರಡು ಪ್ರತೇಕ  ಡಕಾಯಿತರ ತಂಡಗಳನ್ನು ಗೋಕಾಕ ಪೊಲೀಸರು ಪತ್ತೆ ಹಚ್ಚಿದ್ದಾರೆ.



ಕಳೆದ 14 ರಂದು ಗುರುನಾಥ ವೀರುಪಾಕ್ಷ ಬಡಿಗೇರ ಎಂಬವರು ಗೋಕಾಕದಿಂದ ಕನಸಗೇರಿಗೆ ಹೋಗುವಾಗ ಅಪರಿಚಿತ ಡಕಾಯಿತರು ಅವರ ಮೋಟರ್ ಸೈಕಲ್ ಅಡ್ಡಗಟ್ಟಿ ಬಂಗಾರದ ಚೈನ್ ಮತ್ತು ಉಂಗುರ ದೋಚಿಕೊಂಡು ಹೋಗಿದ್ದಾರೆಂದು ಗಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.



ಪ್ರಕರಣಗಳ ಪತ್ತೆಗಾಗಿ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠರು  ಭೀಮಾಶಂಕರ ಗುಳೇದ ಗೋಪಾಲ, ಆರ್.ರಾಠೋಡ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ತನಿಖಾ ತಂಡವು ಬೆಳಗಾವಿ ಹೆಚ್ಚುವರಿ ಎಸ್.ಪಿ. ಎಂ.ವೇಣುಗೋಪಾಲ ಹಾಗೂ ಗೋಕಾಕ ಡಿವಾಯ್ಎಸ್ ಪಿ ಡಿ.ಎಚ್. ಮುಲ್ಲಾ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಕೊಂಡರು.



ತನಿಖಾ ತಂಡವು ಕಳೆದ ಸೋಮವಾರ ’ಬೆನಚಿನಮರಡಿ ಖಿಲಾರಿ ಗ್ಯಾಂಗ್' ಹಾಗೂ 'ಗೋಕಾಕದ ಎಸ್‌.ಪಿ ಸರ್ಕಾರ ಗ್ಯಾಂಗ್ ' ಹೆಸರಿನ ಒಂಭತ್ತು ಜನರನ್ನು ಬಂಧಿಸಿ ಸುಲಿಗೆ, ದರೋಡೆ, ಮೋಟಾರ ಸೈಕಲ್ ಕಳ್ಳತನ, ಜಾನುವಾರು ಕಳ್ಳತನ ಮಾಡಿದ್ದನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 7,89,700/- ಮೌಲ್ಯದ ಚಿನ್ನಾಭರಣ, ನಗದು ಹಣ, 19 ಮೊಬೈಲಗಳು, ಮತ್ತು 16 ಮೋಟಾರ ಸೈಕಲಗಳು ಹಾಗೂ ಒಂದು ಟ್ರಕ್ ಹಾಗೂ 4 ಜಂಬೆ, ತಲವಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



ಈ ಎರಡೂ ಗ್ಯಾಂಗ್ ಗಳು ಪ್ರತೇಕವಾಗಿ ಮಾಡಿದ್ದ 3 ಸುಲಿಗೆ-ಡಕಾಯಿತಿ, 12 ಜಾನುವಾರು ಕಳ್ಳತನ, ಹಾಗೂ ಮೋಟಾರ ಸೈಕಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಡಕಾಯಿತಿ ಗ್ಯಾಂಗಿನವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.



ಈ ಪ್ರಕರಣ ಬೇಧಿಸಲು ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೋಹಿತ ಹಾಗೂ ನಗರ ಪಿಎಸ್ಐ ಎಮ್.ಡಿ.ಘೋರಿ ಹಾಗೂ ಅಂಕಲಗಿ ಪಿಎಸ್ಐ ಎಚ್. ಯರಝರ್ವಿ ಮತ್ತು ಸಿಬ್ಬಂದಿ ಬಿ.ವಿ.ನೇರ್ಲಿ, ವಿ ಆರ್ ನಾಯಕ , ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಸ್.ಎಚ್.ಈರಗಾರ, ಎಂ ಬಿ ಗಿಡ್ಡಗೀರಿ, ಎಮ್.ಎಮ್.ಹಾಲೋಳ್ಳಿ, ಜಿ.ಎಚ್.ಗುಡ್ಲ , ಎಮ್.ಬಿ.ತಳವಾರ, ಕೆ ಆಯ್ ತಿಳಿಗಂಜಿ, ಸಂತೋಷ ರುದ್ರಮಟ್ಟಿ ಅವರು ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದಾರೆ.



ಬೆಲೆ ಬಾಳುವ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ಗಳಲ್ಲಿ ಇಡುವಂತೆ ಹಾಗೂ ಮೈಮೇಲೆ ಆಭರಣಗಳನ್ನು ಹಾಕಿಕೊಂಡು ಮನೆಯಿಂದ ಹೊರಗಡೆ ಹೋಗುವಾಗ `ಡಕಾಯಿತಿ-ಸುಲಿಗೆಗಾರರಿಂದ ಎಚ್ಚರಿಕೆಯಿಂದ ಇರಲು ಹಾಗೂ ಮನೆಗಳಿಗೆ ಬೀಗ ಹಾಕಿ ಬೇರೆ ಸ್ಥಳಕ್ಕೆ ತೆರಳುವುದಿದ್ದರೆ ಸರಹದ್ದಿನ ಪೊಲೀಸ ಠಾಣೆಗಳಿಗೆ ಮಾಹಿತಿ ನೀಡಲು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ