LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಎಲ್ಲಾ ಮದರಸಾಗಳನ್ನು ಮುಚ್ಚುವ ಕುರಿತು ಚಿಂತನೆ - ಆಸ್ಸಾಂ ಮುಖ್ಯಮಂತ್ರಿ

ಬೆಳಗಾವಿ:  ಹೊಸ ಭಾರತಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಸದಾ ಹಿಂದೂ-ಮುಸ್ಲಿಮ ವಿಷಯದಲ್ಲಿ ರಾಜಕೀಯ ಮಾಡುವ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.



ಬಿಜೆಪಿಯಲ್ಲಿ ರಾಜ್ಯದ ಹೊರಗಿನವರನ್ನೇ ಕರೆತಂದು ಚುನಾವಣಾ ಪ್ರಚಾರ ನಡೆಸುತ್ತಿದ್ದು ಈಗ ಆಸ್ಸಾಂ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಬೆಳಗಾವಿಗೆ ಬಂದಿದ್ದಾರೆ.   ಅವರು ನಗರದ ಶಿವಾಜಿ ಗಾರ್ಡನ್‌ನಲ್ಲಿ ‘ಶಿವಚರಿತ್ರೆ’ ಹೆಸರಿನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ  ಮಾತನಾಡಿದರು. ಮದರಸಾ ಶಿಕ್ಷಣಕ್ಕೆ ಕಡಿವಾಣ ಹಾಕಲು ಆಸ್ಸಾಂ ಸರ್ಕಾರ ಮುಂದಾಗಿದೆ. ನಮ್ಮ ಸರ್ಕಾರವು ಈಗಾಗಲೇ ಆಸ್ಸಾಂನಲ್ಲಿ 600 ಮದರಸಾಗಳನ್ನು ಮುಚ್ಚಿದೆ ಎಂದು ಹೇಳಿದರು.



ಶೀಘ್ರದಲ್ಲೇ ಉಳಿದ ಮದರಸಾಗಳನ್ನೂ ಮುಚ್ಚುವ ಯೋಜನೆಯನ್ನು ಜಾರಿಗೆ ತರಲಿದೆ. ನಮಗೆ ಎಂಜಿನಿಯರ್‌ಗಳು ಮತ್ತು ವೈದ್ಯರು ಬೇಕು,  ಮದರಸಾಗಳ ಅಗತ್ಯವಿಲ್ಲ ಎಂದು ಹೀಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.



ಕಾಂಗ್ರೆಸಿಗರು ಬಾಬರಿ ಮಸೀದಿಯ ಬಗ್ಗೆ ಮಾತ್ರ ಮಾತನಾಡುತ್ತಾರೆ, ರಾಮಮಂದಿರದ ಬಗ್ಗೆ ಮಾತನಾಡುವುದಿಲ್ಲ. ಮೊಘಲರಂತೆಯೇ ಇರುವ ಕಾಂಗ್ರೆಸ್ಸಿಗರಿಗೆ ಜನರು ತಕ್ಕ ಪಾಠ ಕಲಿಸಬೇಕು, ಅವರನ್ನು ದೇಶದಿಂದ ಕಿತ್ತೊಗೆಯುವ ಅಗತ್ಯವಿದೆ ಎಂದು ಅವರು ಹೇಳಿದರು. ಕಮ್ಯುನಿಸ್ಟ ಸಾಹಿತಿಗಳು ಇಡೀ ಭಾರತ ಔರಂಗಜೇಬನ ಅಧೀನದಲ್ಲಿತ್ತು ಎಂದು ತಿರುಚಿದ ಇತಿಹಾಸ ಸೃಷ್ಟಿಸಿ ಹೋಗಿದ್ದಾರೆ. ಶಿವಾಜಿ ಮಹಾರಾಜರು ಔರಂಗಜೇಬನಿಗಿಂತ 10 ಪಟ್ಟು ಹೆಚ್ಚು ಸಮರ್ಥ ಯೋಧನಾಗಿದ್ದರು ಎಂದು ಅವರು ಹೇಳಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಎಪಿ ನಾಯಕ ದೀಪಕ ಸಿಂಗ್ಲಾ ಮನೆ ಮೇಲೆ ಇ.ಡಿ ದಾಳಿಮೇ 20ರ ಸಾರಿಗೆ ಮುಷ್ಕರ ನಿಲ್ಲದು : ನೌಕರರ ಪಟ್ಟು ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವು