LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
International News

ಆಘಾತಕಾರಿ ವಿಡಿಯೊ: ಪಂದ್ಯದ ವೇಳೆ ಬಡಿದ ಸಿಡಿಲು ಯುವ ಫುಟ್‌ಬಾಲ್ ಆಟಗಾರ ಸಾವು

ಬ್ಯಾಂಕಾಕ, ಆಗಸ್ಟ್ 6: ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆಯುತ್ತಿದ್ದ 'ಗೋಲೋಕ್ ಎಫ್‌ಎ ಕಪ್' ಫುಟ್‌ಬಾಲ್ ಟೂರ್ನಿಯ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದು 24 ವರ್ಷದ ಆಟಗಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತರನ್ನು ಸ್ಯಾಮ್‌ಕೋಲ್ಟ್ಸ್ ತಂಡದ ವಿಂಗರ್ ಸೋಫ್ವಾನ್ ಅವಾಯ್ ಎಂದು ಗುರುತಿಸಲಾಗಿದೆ.

https://twitter.com/visegrad24/status/2084954248505171984

ಧಾರಾಕಾರ ಮಳೆಯ ನಡುವೆಯೂ ಪಂದ್ಯ ಮುಂದುವರಿದಿದ್ದಾಗ ಏಕಾಏಕಿ ಪ್ರಬಲ ಸಿಡಿಲು ಮೈದಾನಕ್ಕೆ ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಸೋಫ್ವಾನ್ ಅವಾಯ್ ಮೈದಾನದಲ್ಲೇ ಕುಸಿದು ಬಿದ್ದಿದ್ದು, ಸಹ ಆಟಗಾರರು ಹಾಗೂ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಥೈಲ್ಯಾಂಡ್ ಹಾಗೂ ಮಲೇಷ್ಯಾದ ಪ್ರಾದೇಶಿಕ ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಸ್ಯಾಮ್‌ಕೋಲ್ಟ್ಸ್ ಮತ್ತು ಅಬು ಎಕ್ಸ್ ನಾಂಗ್ ಸಿರಿನ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಹವಾಮಾನ ಪ್ರತಿಕೂಲವಾಗಿದ್ದರೂ ಪಂದ್ಯವನ್ನು ಸ್ಥಗಿತಗೊಳಿಸದ ಸಂಘಟಕರ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಥೈಲ್ಯಾಂಡ್‌ನಲ್ಲಿ ಸಿಡಿಲು ಬಡಿದು ಸಾವಿನ ಘಟನೆಗಳು ಆಗಾಗ ವರದಿಯಾಗುತ್ತಿವೆ. ಅಲ್ಲಿನ ರೋಗ ನಿಯಂತ್ರಣ ಇಲಾಖೆಯ ಅಂಕಿಅಂಶಗಳ ಪ್ರಕಾರ, 2020ರಿಂದ 2024ರ ಅವಧಿಯಲ್ಲಿ ದೇಶದಲ್ಲಿ ಕನಿಷ್ಠ 283 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗದ್ದಲದಲ್ಲೇ ಸಾಗಿದ ಸಂಸತ್; ಚರ್ಚೆಯಿಲ್ಲದೆ ತೆರಿಗೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ'ಮೋದಿ ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿತ್ತು' ಎಂದ ರೂಪಾಲಿ ಗಂಗೂಲಿ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಧರಣಿಯಲ್ಲಿ ಮೊಳಗಿದ ಏಕತೆಯ ಸಂದೇಶ: ಜಾತಿ–ಧರ್ಮ ಮೀರಿ ವಿದ್ಯಾರ್ಥಿಗಳಿಗೆ ನೆರವುಬೈಕ್–ಬಸ್ ಮುಖಾಮುಖಿ ಡಿಕ್ಕಿ: ತಂದೆ, ಮಗಳು ಸೇರಿ ಮೂವರು ಸ್ಥಳದಲ್ಲೇ ಮೃತ್ಯು'ತೆಹೆಲ್ಕಾ' ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ತರುಣ ತೇಜ್‌ಪಾಲಗೆ 10 ವರ್ಷ ಜೈಲು ಶಿಕ್ಷೆರೈಲು ಹಳಿ ಮಧ್ಯೆ ಕೆಟ್ಟು ನಿಂತ ಶಾಲಾ ವಾಹನ; ಗ್ರಾಮಸ್ಥರ ಸಮಯಪ್ರಜ್ಞೆಗೆ ತಪ್ಪಿದ ಭಾರೀ ದುರಂತ'ವಿಶೇಷ ಮತಪಟ್ಟಿ ಪರಿಷ್ಕರಣೆ' ನೆಪದಲ್ಲಿ 1 ಕೋಟಿ ಮತದಾರರ ಹೆಸರು ಅಳಿಸುವ ಸಂಚು: ಕಾಂಗ್ರೆಸ್ಬದುಕನ್ನೇ ಮಕ್ಕಳಿಗೆ ಅರ್ಪಿಸಿದ್ದ ತಂದೆ ಅನಾಥರಂತೆ ಅಂತ್ಯಕ್ರಿಯೆ; ವಿಡಿಯೊ ಕಾಲ್‌ನಲ್ಲೇ ನೋಡಿದ ಮೂವರು ಪುತ್ರಿಯರುಆಘಾತಕಾರಿ ವಿಡಿಯೊ: ಪಂದ್ಯದ ವೇಳೆ ಬಡಿದ ಸಿಡಿಲು ಯುವ ಫುಟ್‌ಬಾಲ್ ಆಟಗಾರ ಸಾವುವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದಕ್ಕೆ ಅನುಮತಿ ರದ್ದು; ಕಾಂಗ್ರೆಸ್ ಆಕ್ರೋಶ