LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪಿತನಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪಿತನಿಗೆ ಪೋಕ್ಸೋ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.



ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ಫಿರ್ಯಾದಿ ಮಗಳು ನೊಂದ ಬಾಲಕಿ ಇವಳು ಅಪ್ರಾಪ್ತ ವಯಸ್ಸಿನವಳು ಅಂತಾ ಗೊತ್ತಿದರೂ ಆರೋಪಿ ಗಜಾನನ ಅಣ್ಣಪ್ಪ ಪಾಟೀಲ

(35) ಮಾರುತಿ ನಗರ 3 ನೇ ಕ್ರಾಸ್, ಎಸ್.ವಿ.ಮೋಟರ್ ಹತ್ತಿರ ಬೆಳಗಾವಿ ಇವನು ದಿನಾಂಕ 11-07-2023 ಬಾಲಕಿಗೆ ಲೈಂಗಿಕ ಹಲ್ಲೆ ಮತ್ತು ಅಪಹರಣ ಮಾಡುವ ದುರುದ್ದೇಶದಿಂದ ಅವಳಿಗೆ ಒತ್ತಾಯಪೂರ್ವಕವಾಗಿ ಅಡ್ಡಗಟ್ಟಿ ನಿಲ್ಲಿಸಿ ಅವಳು ಬೇಡ ಬೇಡ ಅಂದರು ಸಹ ಅವಳ ಮೈಕೈ ಮುಟ್ಟಿ ಬೆದರಿಕೆ ಹಾಕಿ ಅವಳನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಅಲ್ಲಿಂದ ಹೋಗಿದ್ದಾನೆ. ಆಗ ಬಾಲಕಿ ಹಿಂದಿ ಭಾಷೆಯಲ್ಲಿ ನೀನು ಯಾರು ನನಗೆ ಏಕೆ ಕಿಡ್ನಾಪ್ ಮಾಡುತ್ತಿರುವೆ ಎಂದು ಕೇಳಿದಾಗ, ಆರೋಪಿತನು ಬಾಲಕಿಗೆ ನಿಮ್ಮ ಮಮ್ಮಿ ಕಿಡ್ನಾಪ್ ಆಗಿರುತ್ತಾಳೆ. ಅವಳ ಹತ್ತಿರ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ.

ಆಗ ಬಾಲಕಿ ನನ್ನನ್ನು ಅಪಹರಣ ಮಾಡುತ್ತಿದ್ದಾರೆ ಎಂದು ಕೂಗಿದಾಗ ಆತ ಅವಳನ್ನು ಅಲ್ಲಿಯೇ ಬಿಟ್ಟು ಓಡಿದ್ದಾನೆ. ಈ ಎಲ್ಲಾ ಅಪರಾಧಕ್ಕೆ ಶ್ವೇತಾ ಪಿ.ಎಸ್‌.ಐ ಇವರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನು ತನಿಖಾಧಿಕಾರಿ ಸಂತೋಷ ದಳವಾಯಿ ಸಿ.ಪಿ.ಐ, ಟಿಳಕವಾಡಿ ಅವರು ಪ್ರಕರಣದ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು, ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 7 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 27 ದಾಖಲೆಗಳು, 2 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ ಐಪಿಸಿ ಕಲಂ 363 ರಡಿ 7 ವರ್ಷ ಕಾರಾಗೃಹ ಶಿಕ್ಷೆ ದಂಡ ರೂ 50,000/- ಪೋಕ್ಸೊ ಕಲಂ 8 ಪ್ರಕಾರ 05 ವರ್ಷಗಳ ಕಠಿಣ ಕಾರಾಗೃಹ ತೀಕ್ಷೆ &ದಂಡ ರೂ 10,000/- ರೂಪಾಯಿ & ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು ಮತ್ತು ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂಪಾಯಿ 01 ಲಕ್ಷಗಳನ್ನು ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 05 ವರ್ಷಗಳವರೆಗೆ ಮುದ್ದತ್ ಠೇವಣಿಯಾಗಿ ಇಡಲು ಮಾನ್ಯ ನ್ಯಾಯಾಲಯವು ಆದೇಶ ಮಾಡಿರುತ್ತಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಎಲ್. ವಿ ಪಾಟೀಲ, ವಿಶೇಷ ಸರ್ಕಾರಿ ಅಭಿಯೋಜಕರು, ಬೆಳಗಾವಿ ಇವರು ಹಾಜರಾಗಿ ಪ್ರಕರಣವನ್ನು ನಡೆಸಿ ಹಾಗೂ ವಾದ ಮಂಡಿಸಿರುತ್ತಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ