LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವಲಯ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಹುಬ್ಬಳ್ಳಿ, ಮೇ 8 : ಇ-ಸ್ವತ್ತು ಹಾಗೂ ಭೂ ದಾಖಲೆಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಒಟ್ಟು 12 ವಲಯ ಕಚೇರಿಗಳ ಮೇಲೆ ಪ್ರತ್ಯೇಕ ತಂಡಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿವೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಎಸ್.ಟಿ. ನೇತೃತ್ವದಲ್ಲಿ 12 ತಂಡಗಳನ್ನು ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ.

ಇ-ಸ್ವತ್ತು ಹಾಗೂ ಇತರ ದಾಖಲೆಗಳನ್ನು ಮಾಡಿಕೊಡುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು. ಹಣ ನೀಡಿದರೆ ಮಾತ್ರ ಇ-ಸ್ವತ್ತು ನೀಡಲಾಗುತ್ತಿದೆ, ಇಲ್ಲವಾದರೆ ಕಡತಗಳನ್ನು ಬಾಕಿ ಇಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿವಿಧ ಕಡತಗಳು, ಅರ್ಜಿಗಳು ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆ ವೇಳೆ ಕಚೇರಿಗಳಲ್ಲಿದ್ದ ಸಿಬ್ಬಂದಿಯಿಂದಲೂ ಮಾಹಿತಿ ಪಡೆಯಲಾಗುತ್ತಿದ್ದು, ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕೋಪ ನಿರ್ವಹಣೆಗೆ ಸಚಿವರ ನೇಮಕ: ಜಿಲ್ಲಾವಾರು ಉಸ್ತುವಾರಿ ಹಂಚಿಕೆಜುಲೈ 1ರಿಂದ ವಿಬಿ-ಜಿ ರಾಮ್ ಜಿ ಜಾರಿ; ಹೆಚ್ಚುವರಿ ಹೊರೆ ಭರಿಸಲು ರಾಜ್ಯ ಸಿದ್ಧ: ಖಂಡ್ರೆಸಚಿವ ಸತೀಶ ಜಾರಕಿಹೊಳಿ ಭಾಮೈದ ಮಂಜುನಾಥಗೆ ಈಡಿ ಬಿಗ್ ಶಾಕ್: ಆರು ಕಡೆ ಏಕಕಾಲದ ದಾಳಿಹಸೆಮಣೆ ಏರಬೇಕಿದ್ದ ಯುವತಿ, ತಂದೆ-ತಾಯಿ ಆತ್ಮಹತ್ಯೆದುಡ್ಡು ಕೊಟ್ಟು ಖರೀದಿಸಿ ತಂದ 17 ಕಾಂಗ್ರೆಸ್‌ ಶಾಸಕರಿಂದಲೇ ಬಿಜೆಪಿ ಹಾಳಾಯ್ತು : ಈಶ್ವರಪ್ಪ ಬಾಂಬ್ಕನ್ನಡ ಆದೇಶ ಹರಿದು ಎಂಇಎಸ್‌ ಪುಂಡಾಟ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆಮೊಸರು ಪ್ಯಾಕೆಟನಲ್ಲಿ ಸತ್ತ ಇಲಿ ಮರಿ ಪತ್ತೆ!ಅಶ್ಲೀಲ ವಿಡಿಯೋಗಳ ವೀಕ್ಷಣೆ ; 9 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 12 ವರ್ಷದ ಬಾಲಕ!ನೀಟ್‌ ಮರುಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲಯುವತಿಯೊಂದಿಗೆ ಹೊಟೇಲ್‌ಗೆ ತೆರಳಿದ್ದ ಯುವಕನ ಮೇಲೆ ಹಲ್ಲೆ