LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಸಾಮೂಹಿಕ ಮತಾಂತರ ಆರೋಪಿಸಿ ಕ್ರಿಶ್ಚಿಯನ್ನರ ಪ್ರಾರ್ಥನಾ ಸಭೆಗೆ ಅಡ್ಡಿ; ಆರೋಪ ತಳ್ಳಿಹಾಕಿದ ಪೊಲೀಸರು

ಹೊಸದಿಲ್ಲಿ, ಸೆ. 21 : ದೆಹಲಿಯ ಜನಕಪುರಿಯ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ಭಾನುವಾರ ನಡೆದ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನಾ ಸಭೆಗೆ ಗುಂಪೊಂದು ನುಗ್ಗಿ ಅಡ್ಡಿಪಡಿಸಿದೆ. ಸಭೆಯಲ್ಲಿ ಹಿಂದೂಗಳನ್ನು ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಗುಂಪಿನ ಸದಸ್ಯರು ಆರೋಪಿಸಿದ್ದಾರೆ. ಆದರೆ ದೆಹಲಿ ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದು, ಸ್ಥಳದಲ್ಲಿ ಮತಾಂತರಕ್ಕೆ ಸಂಬಂಧಿಸಿದ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೆ. 20ರಂದು ನಡೆದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಪ್ರಾರ್ಥನಾ ಸಭೆಗೆ ನುಗ್ಗಿದ ಕೆಲವರು, ಅಲ್ಲಿ ಮಕ್ಕಳು ಸೇರಿದಂತೆ ಹಿಂದೂಗಳನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಭೆಯಲ್ಲಿ ಸುಮಾರು 500 ಜನರನ್ನು ಮತಾಂತರಿಸುವ ಉದ್ದೇಶದಿಂದ ಅರ್ಜಿಗಳನ್ನು ಭರ್ತಿ ಮಾಡಿಸಲಾಗುತ್ತಿದೆ ಹಾಗೂ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.

ಆದರೆ, ಸಭೆಯಲ್ಲಿ ವಿತರಿಸಲಾಗಿದ್ದ ದಾಖಲೆಗಳು ‘ಗ್ಲೋಬಲ್ ರಾಯಲ್ ಪ್ರೀಸ್ಟ್‌ಹುಡ್ ಚರ್ಚ್’ನ ಪ್ರಾರ್ಥನಾ ವಿನಂತಿ ಹಾಗೂ ಸಮುದಾಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಸಕ್ತಿ ಸೂಚಿಸುವ ಅರ್ಜಿಗಳಾಗಿದ್ದವು ಎಂದು ವರದಿಯಾಗಿದೆ.

ಮತಾಂತರ ನಡೆದಿಲ್ಲ: ಡಿಸಿಪಿ

ಪಶ್ಚಿಮ ದೆಹಲಿಯ ಉಪ ಪೊಲೀಸ್ ಆಯುಕ್ತ ವಿಚಿತ್ರಾ ವೀರ್ ಅವರು ಘಟನೆಯ ಕುರಿತು ಸ್ಪಷ್ಟನೆ ನೀಡಿದ್ದು, ಸ್ಥಳೀಯ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ತಮ್ಮ ನಿಯಮಿತ ಭಾನುವಾರದ ಪ್ರಾರ್ಥನೆಗಾಗಿ ಅಲ್ಲಿ ಸೇರಿದ್ದರು. ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಯಾವುದೇ ವಿಷಯ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಸುಮಾರು 500 ಜನರನ್ನು ಮತಾಂತರಿಸಲಾಗುತ್ತಿದೆ ಎಂಬ ಆರೋಪವೂ ಸತ್ಯವಲ್ಲ ಎಂದು ಹೇಳಿ, ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಗ್ಲೋಬಲ್ ರಾಯಲ್ ಪ್ರೀಸ್ಟ್‌ಹುಡ್ ಚರ್ಚ್ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ನಿಯಮಿತವಾಗಿ ಭಾನುವಾರದ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದು, ಸೆ. 20ರ ಸಭೆಯನ್ನು ‘ಅಟೋನ್‌ಮೆಂಟ್ ಸಂಡೇ ಸರ್ವೀಸ್’ ಎಂದು ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಧಿವೇಶನ ಒಂದು ವಾರ ವಿಸ್ತರಿಸಿ: ವಿಜಯೇಂದ್ರಹೊಲದಲ್ಲಿ ರಾಶಿ ಕಾಯುತ್ತಿದ್ದ ರೈತನಿಗೆ ಸಿಡಿಲು ಬಡಿದು ಸಾವು; ಮತ್ತೊಬ್ಬರಿಗೆ ಗಂಭೀರ ಗಾಯಯಲ್ಲಮ್ಮನಗುಡ್ಡದಲ್ಲಿ ಅನಧಿಕೃತ ಔಷಧ ಮಾರಾಟ: 9 ಅಂಗಡಿ ಮಾಲೀಕರಿಗೆ ನೋಟಿಸ್ಕರ್ನಾಟಕದಲ್ಲಿ ನಾಲ್ಕು ದಿನ ಭಾರಿ ಮಳೆ; ಸೆ. 24ರಂದು ಕರಾವಳಿಗೆ ರೆಡ್ ಅಲರ್ಟ್ಉತ್ತರ ಕರ್ನಾಟಕದಲ್ಲಿ ಮಳೆ: ಸಿಡಿಲಿಗೆ ಇಬ್ಬರು ಮಹಿಳೆಯರು ಸೇರಿ ಮೂವರು ಬಲಿಕೆಪಿಎಸ್‌ಸಿ ನೇಮಕಾತಿ ಹಗರಣ: ಅಲೋಕ ಕುಮಾರ ನೇತೃತ್ವದಲ್ಲಿ ಎಸ್‌ಐಟಿ ತನಿಖೆನಮ್ಮ ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ– ಡಿ.ಕೆ. ಶಿವಕುಮಾರ‘ವಂದೇ ಮಾತರಂ’ ಗಾಯನಕ್ಕೆ ಉಭಯ ಸದನಗಳಲ್ಲಿ ಜಟಾಪಟಿ; ಸಂವಿಧಾನ ಪೀಠಿಕೆ ವೇಳೆ ಪೂರ್ಣ ಗೀತೆ ಹಾಡಿದ ಬಿಜೆಪಿ ಸದಸ್ಯರುಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ; ಗ್ರಾಮವಾರು ಭೌತಿಕ ಸಮೀಕ್ಷೆಗೆ ಡಾ. ಜಿ. ಪರಮೇಶ್ವರ ಒತ್ತಾಯನಕಲಿ ಔಷಧ ವಿತರಣಾ ಜಾಲದ ನಂಟು: 16 ಫಾರ್ಮಸಿಗಳ ಪರವಾನಗಿ ರದ್ದು, 8 ಅಮಾನತು