LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ರಾಜ್ಯದ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಚಿಂತನೆ

ಬೆಂಗಳೂರು : ಶಾಲೆಗಳಲ್ಲಿ ಹಿಜಾಬ್, ಪಠ್ಯ ಪರಿಷ್ಕರಣೆ ವಿವಾದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಶುರುವಾಗಿದೆ. ರಾಜ್ಯಾದ್ಯಂತ 7 ಸಾವಿರಕ್ಕೂ ಹೆಚ್ಚು ವಿವೇಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.



ಶಿಕ್ಷಣ ಇಲಾಖೆ ಹೊಸದಾಗಿ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ನೆನಪಿನಲ್ಲಿ ವಿವೇಕ ಶಾಲೆ ಎಂದು ಹೆಸರಿಡಲು ಮುಂದಾಗಿದ್ದು, ಈ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಸಲು ಚಿಂತನೆ ನಡೆಸಿದೆ. ಇಲಾಖೆಯ ಈ ನಡೆಗೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ.



ಶಿಕ್ಷಣ ಇಲಾಖೆ ವಿವೇಕಾನಂದರ ಹೆಸರನ್ನು ಉಪಯೋಗಿಸಿಕೊಂಡು ಶಾಲೆಗಳನ್ನು ಕೇಸರಿಮಯ ಮಾಡಲು ಮುಂದಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯ ನಂತರ ಎರಡನೇ ಸುತ್ತಿನ ಕೇಸರೀಕರಣ ಶುರು ಮಾಡಿದೆ ಎಂದು ಆರೋಪಿಸಲಾಗಿದೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST