LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಜೈನ ಮುನಿಗಳ ಡೈರಿ ವಶಕ್ಕೆ; ಸುಟ್ಟು ಹಾಕಿದ್ದಾಗಿ ಮೊದಲು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದ ಹಂತಕರು

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಆಶ್ರಮದ ಜೈನ ಮುನಿ ಕಾಮಕುಮಾರ ಮಹಾರಾಜರ ಹತ್ಯೆಗೆ ಮತ್ತೊಂದು ಪ್ರಮುಖ ಸಾಕ್ಷಿ ದೊರೆತಿದ್ದು ಮುನಿಗಳು ದಿನನಿತ್ಯ ಬರೆಯುತ್ತಿದ್ದ ಡೈರಿ (ದಿನಚರಿ) ಯನ್ನು ತನಿಖಾಧಿಕಾರಿಗಳು ಆಶ್ರಮದಿಂದ ವಶಕ್ಕೆ ಪಡೆದಿದ್ದಾರೆ.



ಇದಕ್ಕೂ ಮೊದಲು ಹಂತಕರು ಮುನಿಗಳು ಬರೆಯುತ್ತಿದ್ದ ದಿನಚರಿ ಪುಸ್ತಕವನ್ನು ತಾವು ಸುಟ್ಟು ಹಾಕಿರುವದಾಗಿ ತಿಳಿಸಿ ಸುಟ್ಟಿರುವ ಸ್ಥಳವನ್ನೂ ತೋರಿಸಿದ್ದರು. ಇದನ್ನು ನಂಬಿದ್ದ ಪೊಲೀಸರು ಸುಟ್ಟ 'ದಿನಚರಿ' ಯ ಬೂದಿಯನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಫಾರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಪರೀಕ್ಷಿಸಿದಾಗ "ಬೂದಿ ಡೈರಿಯದಲ್ಲ" ಎಂದು ವರದಿ ನೀಡಿದ್ದರು. ತನಿಖೆಯ ದಿಕ್ಕು ತಪ್ಪಿಸಲು ಸುಳ್ಳು ಮಾಹಿತಿ ನೀಡಿದ್ದ ಹಂತಕರನ್ನು ತಮ್ಮದೇ 'ಭಾಷೆ' ಯಲ್ಲಿ ವಿಚಾರಿಸಿಕೊಂಡ ಅವರು ಸುಟ್ಟದ್ದು ಡೈರಿಯಲ್ಲ, ಅದು ಆಶ್ರಮದಲ್ಲಿ ಮುನಿಗಳು ತಂಗುತ್ತಿದ್ದ ಕೋಣೆಯಲ್ಲೇ ಇದೆ ಎಂದು ಗೊತ್ತಾಗಿ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



ಈ ಕುರಿತು ಸಮದರ್ಶಿಗೆ ಮಾಹಿತಿ ನೀಡಿದ ತನಿಖೆಯ ಮುಖ್ಯಾಧಿಕಾರಿ, ಚಿಕೋಡಿ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಅವರು, "ಮುನಿಗಳು ಬರೆಯುತ್ತಿದ್ದ ಡೈರಿಯಲ್ಲಿ ಆಶ್ರಮದಿಂದ ಸಾಲ ಪಡೆದವರ ಹೆಸರು, ದಿನಾಂಕ, ಪಡೆದ ಸಾಲ, ಅವರ ಫೋನ್ ನಂಬರ್, ಮನೆಉ ವಿಳಾಸ ಮುಂತಾದವುಗಳನ್ನು ನಮೂದಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ನಾರಾಯಣ ಮಾಳಿ ಕೂಡ 6 ಲಕ್ಷ ಸಾಲ ಪಡೆದುಕೊಂಡಿದ್ದಾನೆ" ಎಂದು ತಿಳಿಸಿದರು.



ಆರೋಪಿ ಮಾಳಿ ಮುನಿಗಳಿಗೆ ಆಪ್ತನಾಗಿದ್ದ, ಆಶ್ರಮಕ್ಕೆ ಬೇಕಾದಾಗ ಬಂದು ಹೋಗುತ್ತಿದ್ದ. ಮುನಿಗಳು ಕಟ್ಟಿಸುತ್ತಿದ್ದ ವಸತಿ ಶಾಲೆಗೆ ಮರಳು ಸಾಗಿಸುತ್ತಿದ್ದ. ರಾಯಬಾಗ ತಾಲ್ಲೂಕಿನ ಖಟಕಭಾವಿ ಗ್ರಾಮದವನಾದ ಈತ ಸರಬರಾಜು ಮಾಡುತ್ತಿದ್ದ ಮರಳನ್ನು ಕೃಷ್ಣ ನದಿಯಿಂದ ಅಕ್ರಮವಾಗಿ ತೆಗೆಯುತ್ತಿದ್ದ. ಇದು ಮುನಿಗಳಿಗೆ ಗೊತ್ತಿರಲಿಲ್ಲ. ತನ್ನ ಅಕ್ರಮ ಮರಳು ವ್ಯವಹಾರ ಸಾಂಗವಾಗಿ ನಡೆದಿದ್ದರಿಂದ ಅವನಿಗೆ ಒಂದು ಜೆಸಿಬಿ ತೆಗೆದುಕೊಂಡು ವ್ಯವಹಾರ ಇನ್ನಷ್ಟು ವೃದ್ಧಿಸುವ ಯೋಚನೆ ಬಂದಿದೆ. ಇದನ್ನು ಮುನಿಗಳಿಗೆ ತಿಳಿಸಿ ಅವರಿಂದ 6 ಲಕ್ಷ ಸಾಲ ಪಡೆದಿದ್ದ. ಪಡೆದ ಸಾಲ ಹಿಂದಿರುಗಿಸಲು ಮುನಿಗಳು ಒತ್ತಾಯಿಸುತ್ತಿದರಿಂದ ಕೂಪಿತನಾಗಿ ಅವರ ಹತ್ಯೆ ಮಾಡಲು ನಿರ್ಧಾರಿಸಿದ. ಇದಕ್ಕೆ ರಾಯಬಾಗ ತಾಲ್ಲೂಕಿನ ಹಸನಸಾಬ ಢಾಲಾಯತ ಎಂಬವನ ನೆರವು ಪಡೆದುಕೊಂಡಿದ್ದ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು