LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮರಕ್ಕೆ ವಾಹನ ಡಿಕ್ಕಿ; ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಹೊರಟಿದ್ದ ಆರು ಭಕ್ತರ ಸಾವು

ರಾಮದುರ್ಗ : ಹೊಸ ವರ್ಷದ ಮೊದಲನೇ ವಾರದಲ್ಲಿಯೇ ಬುಧವಾರ ತಡರಾತ್ರಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನ ರಾಮದುರ್ಗ ತಾಲೂಕಿನ ಚಿಂಚನೂರು ವಿಠ್ಠಲ ದೇವಸ್ಥಾನದ ಬಳಿ ಭೀಕರ ಅಪಘಾತದಲ್ಲಿ ಆರು ಜನ ಮೃತಪಟ್ಟ ಘಟನೆ ನಡೆದಿದೆ.



ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಭಕ್ತರನ್ನು ಕರೆದುಕೊಂಡು ಹೊರಟಿದ್ದ ಮಹೇಂದ್ರ ಗೂಡ್ಸ ವಾಹನ ಆಲದ ಮರಕ್ಕೆ ರಭಸಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.



ಅಪಘಾತದಲ್ಲಿ ಮೃತಪಟ್ಟವರು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಹನಮವ್ವ ಮ್ಯಾಗಾಡಿ (25), ದೀಪಾ ಹರಿಜನ (31), ಸವಿತಾ ಮುಂಡಾಸ (17), ಸುಪ್ರೀತಾ ಹರಿಜನ ( 11), ಯಲ್ಲಪ್ಪ ಬನ್ನೂರ (42), ಮತ್ತು ಇಂದ್ರವ್ವ ಸಿದ್ದಮೇತ್ರಿ (24) ಎಂದು ಗುರುತಿಸಲಾಗಿದೆ.



ಅಪಘಾತದಲ್ಲಿ 16 ಜನ ಗಾಯಗೊಂಡಿದ್ದು ಅವರನ್ನು ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಪಘಾತದ ಕುರಿತು ಅಘಾತ ವ್ಯಕ್ತ ಪಡಿಸಿದ್ದು ಸರಕಾರದಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು