LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಭಯೋತ್ಪಾದಕ ಕೃತ್ಯಗಳನ್ನು ಮೆಟ್ಟಿನಿಂತು ರಾಜತಾಂತ್ರಿಕ ನೈಪುಣ್ಯತೆಯನ್ನು ತೋರಿಸಿದ ಪ್ರಧಾನಿ-ಈರಣ್ಣ ಕಡಾಡಿ ಬಣ್ಣನೆ

ಮೂಡಲಗಿ: ಹಣಬಲ, ತೋಳಬಲ, ಜಾತಿಬಲಗಳ ಮಧ್ಯೆ ಸುತ್ತುತ್ತಿರುವ ರಾಜಕಾರಣದಲ್ಲಿ ಸಾಧಾರಣ ವ್ಯಕ್ತಿಯೊಬ್ಬ ಅಸಾಧಾರಣ ಶಕ್ತಿಯಾಗಿ ಬೆಳೆದು ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಇತಿಹಾಸ ನಮ್ಮೆಲ್ಲರಿಗೂ ಒಂದು ಜೀವಂತ ಉದಾಹರಣೆಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿತ್ವವನ್ನು ಬಣ್ಣಿಸಿದರು.



ಬುಧವಾರ ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಮಂದಿರ ಆವರಣದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಕಲ್ಯಾಣ (ಸೇವಾ) ಸಂಸ್ಥೆ, ಮಾಜಿ ಸೈನಿಕರ ಸಂಘ, ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಲ್ಲೋಳಿ ಹಾಗೂ ರೋಟರಿ ರಕ್ತ ಭಂಡಾರ ಕೇಂದ್ರ ಗೋಕಾಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

370 ನೇ ಆರ್ಟಿಕಲ್ ರದ್ದತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದು, ಉಚಿತ ಕೋವಿಡ್ ವ್ಯಾಕ್ಸಿನೇಷನ್, ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ನಿಧಿ, ಉಚಿತ ಗ್ಯಾಸ್ ಸಂಪರ್ಕ, ರಾಷ್ಟ್ರೀಯ ಶಿಕ್ಷಣ ನೀತಿ, ಜಿ.ಎಸ್.ಟಿ ತೆರಿಗೆ ಜಾರಿ ಮತ್ತು ಗುರುತರ ಬದಲಾವಣೆ ಈ ರೀತಿ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅದ್ವಿತೀಯ ಬದಲಾವಣೆ ತಂದ ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತದ ಸಂಕಲ್ಪದೊಂದಿಗೆ ಭಾರತವನ್ನು ಆತ್ಮನಿರ್ಭರ ಗೊಳಿಸುತ್ತಿದ್ದಾರೆ ಎಂದು ಅವರ ಕಾರ್ಯಶೈಲಿಯನ್ನು ಹಾಡಿ ಹೊಗಳಿದರು.

ದೇಶದ ಒಳಗೂ ಮತ್ತು ದೇಶದ ಹೊರಗೂ ಸವಾಲು ಒಡ್ಡಿರುವ ಭಯೋತ್ಪಾದಕ ಕೃತ್ಯಗಳನ್ನು ಮೆಟ್ಟಿನಿಂತು ರಾಜತಾಂತ್ರಿಕ ನೈಪುಣ್ಯತೆಯನ್ನು ತೋರಿಸಿ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿ ಅವರು ನಿಂತಿರುವುದು ಐತಿಹಾಸಿಕ ಸತ್ಯ. ಇಂತಹ ನರೇಂದ್ರ ಮೋದಿಯವರ ಜನ್ಮದಿನವಾದ ಇಂದು ಇಡೀ ದೇಶ ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿ ನಿಂತಿದೆ. ಭಗವಂತ ಅವರ ಆಯುಷ್ಯ ಮತ್ತು ಆರೋಗ್ಯ ವೃದ್ದಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿ, ಶುಭ ಹಾರೈಸಿದರು.

ಶಿಬಿರದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಗಿರೀಶ್ ಜಂವರ, ಕಾರ್ಯದರ್ಶಿ ಬಸವರಾಜ ಹುಳ್ಳೇರ, ಡಾ. ಬಿ. ಆರ್. ಕಪ್ಪಲಗುದ್ದಿ, ಸೋಮಣ್ಣ ಮಗದುಮ್ಮ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ಶ್ರೀಶೈಲ ತುಪ್ಪದ, ಸಾಯಿ ಸಮಿತಿ ಸದಸ್ಯ ಸುರೇಶ ಕಬ್ಬೂರ, ಬಸವರಾಜ ಕಡಾಡಿ, ಡಾ ಭೀಮಪ್ಪ ಲಿಂಬೋಜಿ, ಅಡಿವೆಪ್ಪ ಕುರಬೇಟ, ಅಜಿತ ಚಿಕ್ಕೋಡಿ, ಶಿವಪ್ಪ ಬಿ.ಪಾಟೀಲ, ಶ್ರೀಶೈಲ ಪೂಜೇರಿ, ಬಸವರಾಜ ಹಿಡಕಲ್, ಶ್ರೀಕಾಂತ ಕೌಜಲಗಿ, ಸಿದ್ದಪ್ಪ ಹಳ್ಳೂರ, ಈಶ್ವರ ಮುರಗೋಡ, ಈರಪ್ಪ ಢವಳೇಶ್ವರ, ಗುರು ಗಂಗಣ್ಣವರ, ಮದನ ದಾನನ್ನವರ, ಸಿದ್ದಪ್ಪ ಬಿಸಗುಪ್ಪಿ, ಯಮನಪ್ಪ ಬಾಗಾಯಿ, ಹಣಮಂತ ಗೋಡಿಗೌಡರ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಮಹಾಂತೇಶ ರೊಡ್ಡನ್ನವರ, ಸಿದಾರ್ಥ ಅಥಣಿ, ಭೀಮಗೌಡ ಪಾಟೀಲ, ಈಶ್ವರ ಗಾಡವಿ ಸೇರಿದಂತೆ, ಕಾರ್ಯಕರ್ತರು ಹಾಗೂ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಎನ್.ಎಸ್,ಎಸ್ ಘಟಕದ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಸೇವಾ ಸಂಸ್ಥೆಯ ಅಧ್ಯಕ್ಷ ಪರಪ್ಪ ಗಿರೆಣ್ಣವರ ಸ್ವಾಗತಿಸಿದರು, ಲೋಹಿತ ಕಲಾಲ ಕಾರ್ಯಕ್ರಮ ನಿರೂಪಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನನೀರಾವರಿ ಸೌಲಭ್ಯಕ್ಕೆ ₹3.25 ಲಕ್ಷ ಸಹಾಯಧನ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಅಭಿನಂದನ್ ಅವಧಿಗೂ ಮುನ್ನ ನಿವೃತ್ತಿ; ಖಾಸಗಿ ವಿಮಾನ ಪೈಲಟ್ ಆಗಿ ಹೊಸ ವೃತ್ತಿಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿನೇಪಾಳ: 7,500 ಮನೆ ಸಂಪೂರ್ಣ ನಾಶಕೈದಿಯೊಂದಿಗೆ ಸರಸ ಸಲ್ಲಾಪ : ಪಿಎಸ್‌ಐ ಜಯಶ್ರೀ ಅಮಾನತುಕರಡು ಮತದಾರರ ಪಟ್ಟಿಯಿಂದ ರಾಘವ ಚಡ್ಡಾ ಹೆಸರು ಡಿಲಿಟ್ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿ