LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ದಕ್ಷಿಣ ಭಾರತದಲ್ಲೆ ಅತಿ ಹೆಚ್ಚು ಮೊಬೈಲ್ ಪತ್ತೆ ಮಾಡಿದ ಹಾವೇರಿ ಜಿಲ್ಲೆಯ ಪೋಲಿಸ ಅಧಿಕಾರಿಗಳು.

ಹಾವೇರಿ ಜಿಲ್ಲೆ ಪೊಲೀಸರು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ ಪೊಲೀಸ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ‌ ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಳ್ಳತನವಾಗಿದ್ದ ಸುಮಾರು  210 ಮೊಬೈಲಗಳನ್ನ ಹಾವೇರಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಪತ್ತೆಹಚ್ಚಿದ ೨೧೦ ಮೊಬೈಲಗಳ ಮೌಲ್ಯ ಸುಮಾರು ೪೨ ಲಕ್ಷ ಎಂದು ಅಂದಾಜಿಸಲಾಗಿದೆ. ಈ ಮೊಬೈಲಗಳನ್ನ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಲಿಕರಿಗೆ ಹಸ್ತಾಂತರಿಸಲಾಯಿತು. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾಲಿಕರಿಗೆ ಮೊಬೈಲ್ ಹಸ್ತಾಂತರಿಸಿದರು. ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ಸಾರ್ವಜನಿಕರ ಮೊಬೈಲ್ ಗಳನ್ನ ಪತ್ತೆಹಚ್ಚಿ ಮೊಬೈಲ್ ನೀಡಿದಕ್ಕೆ ಮೊಬೈಲ್ ಮಾಲಿಕರು ಸಂತಸ ವ್ಯಕ್ತಪಡಿಸಿದರು.ಇಸಿಐಅರ್ ಪೊರ್ಟಲ್ ನ ಸಹಾಯದಿಂದ ವಿವಿಧ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲಿದ್ದ ಮೊಬೈಲಗಳನ್ನ ಪೊಲೀಸ್ ಇಲಾಖೆ ಪತ್ತೆ ಹಚ್ಚಿದೆ. 
ಕಳೆದ 3 ವರ್ಷಗಳಿಂದ ಪ್ರಕರಣ ದಾಖಲಾಗಿದ್ದ ಕೇಸಗಳನ್ನ ದಾಖಲಿಸಿಗೊಂಡ ಪೊಲೀಸರು ಮೊಬೈಲ್ ಪತ್ತೆಹಚ್ಚಿ ಮಾಲಿಕರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ 
ಕಳ್ಖತನವಾಗಿದ್ದ ಮೊಬೈಲ್
ಪತ್ತೆ ಮಾಡುವಲ್ಲಿ ಹಾವೇರಿ ಜಿಲ್ಲೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ
ಅತಿಹೆಚ್ಚು ಮೊಬೈಲ್ ಪತ್ತೆಮಾಡಿ ಪ್ರಥಮ ಸ್ಥಾನಕ್ಕೇರಿದ ಹಾವೇರಿ ಜಿಲ್ಲೆಯ ಪೊಲೀಸರಿಗೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದು ಹೋಗಿದ್ದ ಮೊಬೈಲ್ ಸಿಕ್ಕಿರುವದಕ್ಕೆ ಮಾಲಿಕರು ಸಂತಸ ವ್ಯಕ್ತಪಡಿಸಿದರು. ಮೂರು ವರ್ಷದ ಹಿಂದೆ ಮೊಬೈಲ್ ಕಳ್ಳತನವಾಗಿತ್ತು. ಮೊಬೈಲ್ ಸಿಗುವ ಆಸೆಯನ್ನೆ ಬಿಟ್ಟಿದ್ದೆ ಆದರೂ ಇರಲಿ ಅಂತಾ ಇಸಿಐಆರ್ ಪೊರ್ಟಲನಲ್ಲಿ ದೂರು ದಾಖಲಿಸಿದ್ದೆ. ಈಗ ಮೊಬೈಲ್ ಸಿಕ್ಕಿರುವದು ಸಂತಸ ತಂದಿದೆ. ಹೊರ ರಾಜ್ಯಗಳಲ್ಲಿದ್ದ ಮೊಬೈಲ್ ಪತ್ತೆ ಹಚ್ಚಿ ತಂದು‌ಕೊಟ್ಟ ಪೊಲೀಸರಿಗೆ ಧನ್ಯವಾದ ಅರ್ಪಿಸುವದಾಗಿ ಮೊಬೈಲ್ ಮಾಲಿಕರು ತಿಳಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಎಪಿ ನಾಯಕ ದೀಪಕ ಸಿಂಗ್ಲಾ ಮನೆ ಮೇಲೆ ಇ.ಡಿ ದಾಳಿಮೇ 20ರ ಸಾರಿಗೆ ಮುಷ್ಕರ ನಿಲ್ಲದು : ನೌಕರರ ಪಟ್ಟು ಮುಸ್ಲಿಮರ 10 ಪ್ರಮುಖ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿ: ಸಮಾವೇಶದಲ್ಲಿ ಒತ್ತಾಯಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ : ಶಿವಾನಂದ ನೀಲಣ್ಣನವರ್‌ ಆಸ್ತಿ ಜಪ್ತಿ ಶುರುನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ಪ್ರಶ್ನೆಪತ್ರಿಕೆ ಸಮಿತಿಯ ಜೀವಶಾಸ್ತ್ರ ಉಪನ್ಯಾಸಕಿ ಬಂಧನಮಾಲ್ಡೀವ್ಸ್‌ನಲ್ಲಿ ಕೇವ್‌ ಸ್ಕೂಬಾ ಡೈವಿಂಗ್ ದುರಂತ : ಇಟಲಿಯ 5 ಪ್ರಜೆಗಳ ಸಾವುಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಏನು ಮಾಡಿದ್ದಾರೆ : ಸಚಿವೆ ಹೆಬ್ಬಾಳ್ಕರ ಪ್ರಶ್ನೆಸುದೀರ್ಘ ವಿಚಾರಣೆ ನಂತರ ಶಿವಂ ಅಸೋಸಿಯೇಟ್ಸ ಶಿವಾನಂದ‌ ನೀಲಣ್ಣವರ ಬಂಧನ : ಸಾವಿರಾರು ಕೋಟಿ ಅಕ್ರಮ ಹಣ ಸಂಗ್ರಹ ಶಂಕೆಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವು