LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವಾರ್ತಾ ಇಲಾಖೆಯ ಪತ್ರಕರ್ತರ ವಾಹನಕ್ಕೆ ಸಚಿವ ಸತೀಶ ಜಾರಕಿಹೊಳಿ ಹಸಿರು ನಿಶಾನೆ

ಬೆಳಗಾವಿ, ಸೆ.5 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಕರ್ತರ ನೂತನ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.



ನಗರದ ಬುಡಾ ಆವರಣದಲ್ಲಿ ಮಂಗಳವಾರ ನೂತನ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪತ್ರಕರ್ತರ ಪ್ರವಾಸಕ್ಕಾಗಿ ನೂತನ ವಾಹನವು ಅನುಕೂಲವಾಗಲಿದೆ ಎಂದು ಹೇಳಿದರು.



ನಂತರ ಇದೇ ವಾಹನದಲ್ಲಿ ಪ್ರಯಾಣಿಸಿದ ಸಚಿವರು, ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಅಶೋಕ ನಗರದ ಬಳಿ ಪಾಲಿಕೆಯ ಜಾಗೆಯನ್ನು ಪರಿಶೀಲಿಸಿದರು.



ಶಾಸಕ ಆಸೀಫ(ರಾಜು) ಸೇಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಹಾಗು ಪತ್ರಕರ್ತರು  ಸಚಿವರೊಂದಿಗೆ ವಾರ್ತಾ ಇಲಾಖೆಯ ನೂತನ ವಾಹನದಲ್ಲಿ ಪ್ರಯಾಣಿಸಿದರು.



ವಾರ್ತಾ ಮತ್ತು ಸಾರ್ವಜನಿಕಇಲಾಖೆ ಕಾರ್ಯದರ್ಶಿ ಎನ್.ಜಯರಾಮ್, ಇಲಾಖೆಯ ಆಯುಕ್ತ ಹೇಮಂತ ನಿಂಬಾಳ್ಕರ ಅವರು ವಿಶೇಷ ಮುತುವರ್ಜಿ ವಹಿಸಿ ಬೆಳಗಾವಿ ಜಿಲ್ಲೆಗೆ ಹೊಸ ವಾಹನವನ್ನು ಒದಗಿಸಿರುವುದಕ್ಕೆ ಪತ್ರಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST