LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ಪಾಸಪೋರ್ಟ ಕಚೇರಿಯಲ್ಲಿ ಸಿಬ್ಬಂದಿ ಕೊರತೆ; ದಾಖಲೆ ಪರಿಶೀಲನೆಗೆ ಆರೇಳು ತಾಸು ಕಾಯುವ ಪರಿಸ್ಥಿತಿ!

ಬೆಳಗಾವಿ, ಡಿಸೆಂಬರ್ 21: ನಗರದ ಪ್ರಧಾನ ಅಂಚೆ ಕಚೇರಿ ಬಳಿ ಇರುವ ಪಾಸಪೋರ್ಟ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಜನ ಹೈರಾಣಾಗುವಂತಾಗಿದೆ. ಪಾಸಪೋರ್ಟ ಪಡೆಯಲು ಅಥವಾ ನವೀಕರಿಸಲು ಆನಲೈನ್ ಮೂಲಕ ಜನ ಸಮಯ‌ ನಿಗದಿ ಮಾಡಿಕೊಂಡು ಇಲ್ಲಿಗೆ ಬರುತ್ತಾರೆ. ಆದರೆ ಅರ್ಧ ಗಂಟೆ ಅಥವಾ ಹೆಚ್ಚೆಂದರೆ ಒಂದು ಗಂಟೆಯಲ್ಲಿ ಮುಗಿದು ಹೋಗಬಹುದಾದ ದಾಖಲೆಗಳ ಪರಿಶೀಲನೆ ಮತ್ತು ಅಪಲೋಡ್‌ ಮಾಡಲು ಜನತೆ ಆರರಿಂದ ಏಳು ತಾಸು ಕಾಯುವಂತಾಗಿದೆ.



ಪ್ರಸ್ತುತ ದಾಖಲೆ ಪರಿಶೀಲನೆಗಾಗಿ ಇಬ್ಬರು ಸಿಬ್ಬಂದಿ ಮಾತ್ರ ಇಲ್ಲಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ನಮ್ಮ ಪತ್ರಿಕೆಯ ಪ್ರತಿನಿಧಿ ಬುಧವಾರ ಪಾಸಪೋರ್ಟ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಗಳು ಅನಾವರಣಗೊಂಡಿವೆ.



ಉದಾಹರಣೆಗೆ ನೋಡುವುದಾದರೆ ಬೆಳಿಗ್ಗೆ ಸುಮಾರು 10 ಗಂಟೆಗೆ ನಿಮ್ಮ ಅಪಾಯಿಂಟ್ಮೆಂಟ್ ಇದ್ದರೆ ನಿಮ್ಮ ನಂಬರ್ ಬರಲು ಸಂಜೆಯಾಗುತ್ತದೆ. ಇದರ ಅರಿವಿಲ್ಲದೇ ಚಿಕ್ಕ ಮಕ್ಕಳೊಂದಿಗೆ ಇಲ್ಲಿಗೆ ಬರುವ ತಾಯಂದಿರು, ವಯಸ್ಸಾದವರು ವಿಪರೀತ ಪಡಿಪಾಟಲು ಪಡುವಂತಾಗಿದೆ. ಬೆಳಿಗ್ಗೆ ಹತ್ತರಿಂದ ಚಿಕ್ಕ ಮಕ್ಕಳೊಂದಿಗೆ ಇಲ್ಲಿ ಬಂದು ಕೂತಿದ್ದೇವೆ. ಮಧ್ಯಾಹ್ನ ನಾಲ್ಕಾದರೂ ಕೆಲಸ ಆಗುತ್ತಿಲ್ಲ, ಮಕ್ಕಳು ಹಸಿವಿನಿಂದ ಕಿರಿ ಕಿರಿ ಮಾಡುತ್ತಿದ್ದಾರೆಂದು ಹಲವರು ಹಲುಬಿದರು.



ಆದರೆ ಬೆಳಗಾವಿಗೆ ಹತ್ತಿರದ ಹುಬ್ಬಳ್ಳಿ ಪಾಸಪೋರ್ಟ ಕಚೇರಿಯಲ್ಲಿನ ಸ್ಥಿತಿ ವಿಭಿನ್ನವಾಗಿದೆ. ಅಲ್ಲಿ ಮಾತ್ರ ಬಹುತೇಕ ನಿಗದಿತ ಸಮಯಕ್ಕೆ ನಿಮ್ಮ ದಾಖಲಾತಿ ಪರಿಶೀಲನೆ, ಅಪಲೋಡ್ ಮುಗಿದು ಹೋಗುತ್ತದೆ. ಹೀಗಿರುವಾಗ ಬೆಳಗಾವಿಯಲ್ಲಿ ಮಾತ್ರ ಈ ಸಮಸ್ಯೆ ಏಕೆ ಎಂಬುದು ತಿಳಿಯದಾಗಿದೆ.



ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ನಾಲ್ವರು ಸಂಸದರಿದ್ದಾರೆ. ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೆಲ ಭಾಗಗಳಲ್ಲಿ ಬರುವ ಅನಂತ ಕುಮಾರ ಹೆಗಡೆ ಮತ್ತು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಇಲ್ಲಿದ್ದಾರೆ. ಆದರೂ ಜನ ತಮ್ಮ ಹಕ್ಕು ಪಡೆಯಲು ಪರದಾಡುವಂಥ ಪರಿಸ್ಥಿತಿ ಇರುವುದು ದುರ್ದೈವ. ಸಂಸದ ಈರಣ್ಣಾ ಕಡಾಡಿ ಅವರನ್ನು ಹೊರತುಪಡಿಸಿ ಇತರ ಸಂಸತ್‌ ಸದಸ್ಯರು ಹೆಸರಿಗೆ ಮಾತ್ರ ಸಂಸದರಾಗಿದ್ದು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಕಾಣುತ್ತಿಲ್ಲ.



ಬೆಳಗಾವಿ ಪಾಸಪೋರ್ಟ ಕಚೇರಿಗೆ ಮತ್ತಷ್ಟು ಸಿಬ್ಬಂದಿಯನ್ನು ನೇಮಿಸಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಅವರು ಈ ವಿಷಯದಲ್ಲಿ ಆಸ್ಥೆ ವಹಿಸಲಿ ಎಂಬುದು ಜನರ ಒತ್ತಾಯವಾಗಿದೆ. ಇನ್ನು ಸಂಸತ್‌ ಸದಸ್ಯರಾದ ಈರಣ್ಣಾ ಕಡಾಡಿ, ಮಂಗಲಾ ಅಂಗಡಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ದಿಸೆಯಲ್ಲಿ ಕ್ರಮ ವಹಿಸಿದರೆ ಜನರ ಸಮಸ್ಯೆಗೆ ಪರಿಹಾರ ಸಿಕ್ಕೀತು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು