LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನಿರಂತರ ಮಳೆ : ಧಾರವಾಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ 25, 26 ರಂದು ರಜೆ ಘೋಷಣೆ

ಧಾರವಾಡ, ಜು.24: ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ 25 ಮತ್ತು 26 ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಬುಧವಾರ ಸಂಜೆ ಆದೇಶಿಸಿದ್ದಾರೆ.



ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಬಹುತೇಕ ಕಡೆಗೆ ನಿರಂತರವಾಗಿ ಮಳೆ ಆಗುತ್ತಿದೆ. ಮತ್ತು ತಂಪುಗಾಳಿ ಬಿಸುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪೂರ್ವ ಪ್ರಾಥಮಿಕ ಶಾಲೆ, ಖಾಸಗಿ, ಅನುದಾನಿತ, ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



ಈ ರಜಾ ದಿನಗಳನ್ನು ಮುಂದಿನ ಸಾರ್ವಜನಿಕ ರಜಾ ದಿನಗಳಂದು ಹೆಚ್ಚುವರಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣೆಕೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
40 ದಿನದಲ್ಲೇ ತೀರ್ಪು; ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ಕೊಂದ ರಾಕ್ಷಸನಿಗೆ ಗಲ್ಲು ಶಿಕ್ಷೆಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ 16,925 ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಅನುಮೋದನೆಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ; ಪಕ್ಷದ ನಾಯಕರು ಕರೆದಾಗ ದಿಲ್ಲಿಗೆ ಹೋಗುತ್ತೇನೆ: ಡಿ.ಕೆ.ಶಿವಕುಮಾರಆಸ್ಟ್ರೇಲಿಯಾದಲ್ಲಿ ಯುವ ಕ್ರಿಕೆಟಿಗರೊಂದಿಗೆ ಮೋದಿ ಸಂವಾದಕೋರ್ಟ ಹಾಲ್‌ನಲ್ಲೇ ಕಾಗದ ಎಸೆದು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗೆ ನಿಂದನೆದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ