LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Technology News

ಗೂಗಲ್​ನಲ್ಲಿ ಈ ರೀತಿ ಸರ್ಚ್ ಮಾಡಬೇಡಿ

ಕ್ಯಾಲಿಫೋರ್ನಿಯಾ, ೧೪-

ನಮಗೆ ಯಾವುದೇ ವಿಚಾರಗಳ ಬಗ್ಗೆ ಗೊಂದಲಗಳಿದ್ದಲ್ಲಿ ಅಥವಾ ಅನುಮಾನಗಳಿದ್ದರೆ ಅದನ್ನು ಬಗೆ ಹರಿಸಲು ಇರುವ ಸುಲಭ ದಾರಿ ಗೂಗಲ್ (Google). ಎಲ್ಲ ಪ್ರಶ್ನೆಗಳಿಗೆ ಗೂಗಲ್​ನಲ್ಲಿ ಉತ್ತರವಿದೆ. ಈ ಪ್ರಪಂಚದ ಏನೇ ಮಾಹಿತಿ ಬೇಕಿದ್ದರೂ ಅದು ನಮಗೆ ಗೂಗಲ್​ನಲ್ಲಿ ಸಿಗುತ್ತದೆ. ಆದರೆ, ಗೂಗಲ್​ನಲ್ಲಿ ಕೆಲವು ಕಠಿಣ ನಿಯಮಗಳಿವೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?, ಕೆಲ ವಿಚಾರಗಳನ್ನು ಗೂಗಲ್​ನಲ್ಲಿ ಸರ್ಚ್ (Google search) ಮಾಡಬಾರದು ಎಂಬ ಸುದ್ದಿ ನಿಮಗೆ ಗೊತ್ತೇ?. ಗೂಗಲ್ ನಿಯಮಕ್ಕೆ ವಿರುದ್ಧವಾದ ಕೆಲ ವಿಚಾರಗಳನ್ನು ಸರ್ಚ್ ಮಾಡಿದರೆ ನಿಮ್ಮ ಐಪಿ ಅಡ್ರೆಸ್ (IP Address) ನೇರವಾಗಿ ಭದ್ರತಾ ಸಂಸ್ಥೆಗಳಿಗೆ ತೆರಳುತ್ತದೆ. ಹೀಗಾಗಿ ನೀವು ಎಲ್ಲದಕ್ಕೂ ಗೂಗಲ್ ಸರ್ಚ್ ಎಂಜಿನ್ ಅನ್ನು ಆಶ್ರಯಿಸಿದರೆ, ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಅದರ ನಷ್ಟವನ್ನು ಅನುಭವಿಸಬಹುದು. ಗೂಗಲ್​ನಲ್ಲಿ ಯಾವ ವಿಷಯಗಳನ್ನು ಹುಡುಕಬೇಕು ಅಥವಾ ಹುಡುಕಬಾರದು ಎಂಬ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಮುಖ್ಯ.



ಮಕ್ಕಳ ಅಶ್ಲೀಲ ಚಿತ್ರ:



ಮಕ್ಕಳ ಅಶ್ಲೀಲ ಚಿತ್ರವನ್ನು ಗೂಗಲ್​ನಲ್ಲಿ ಹುಡುಕಾಟ ನಡೆಸುವುದು ಅಪರಾಧವಾಗಿದೆ. ಇದು ಗೂಗಲ್ ನಿಯಮದ ವಿರುದ್ಧ. ಹೀಗಿದ್ದರೂ ನೀವು ಈ ವಿಚಾರದ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಹೆಚ್ಚಿನ ದಂಡ ಕಟ್ಟಬೇಕಾಗಿ ಬರಬಹುದು. ಅಲ್ಲದೆ ಇತ್ತೀಚೆಗಷ್ಟೆ 2021ರ ಐಟಿ ನಿಯಮವನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ಅಂತರ್ಜಾಲ ಕಂಪನಿಗಳಿಗೆ ನೋಟಿಸ್ ನೀಡಿತ್ತು.



ಸಿನಿಮಾ ಪೈರಸಿ: ಸಿನಿಮಾ ಪೈರಸಿಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೂ ಹೆಚ್ಚಿನ ಜನರು ಚಲನಚಿತ್ರ ಪೈರಸಿಯನ್ನು ಮಾಡುತ್ತಿರುತ್ತಾರೆ. ನೀವು ಗೂಗಲ್‌ನಲ್ಲಿ ಸಿನಿಮಾವನ್ನು ಲೀಕ್ ಮಾಡಿದರೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದನ್ನಾದರೂ ಹುಡುಕಿದರೆ, ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಅನುಭವಿಸಬಹುದು.



ಕಸ್ಟಮರ್​ ಕೇರ್​ ಕಾಂಟೆಕ್ಟ್​​​ ನಂಬರ್​ ಸರ್ಚ್​ ಮಾಡುವಾಗ ಎಚ್ಚರ:



ಇದೊಂದು ಜನಪ್ರಿಯ ಆನ್​ಲೈನ್ ಹಗರಣಗಳಲ್ಲಿ​ ಒಂದು. ವಂಚಕರು ಫೇಕ್ ಅಥವಾ ನಕಲಿ ಬ್ಯುಸಿನೆಸ್ ಲಿಸ್ಟ್​ ಮತ್ತು ಕಸ್ಟಮರ್​​ ಕೇರ್​ ನಂಬರ್​ಗಳನ್ನು ವೆಬ್​ಸೈಟ್​​ಗಳಲ್ಲಿ ಪೋಸ್ಟ್​ ಮಾಡಿರುತ್ತಾರೆ. ಇದನ್ನರಿಯದ ಜನರು ಅದೇ ನಿಜವಾದ ಮಾಹಿತಿ ಎಂದು ನಂಬುತ್ತಾರೆ. ಹೆಚ್ಚಿನ ಅಪ್ಲಿಕೇಶನ್​ಗಳು ಇನ್​ ಬಿಲ್ಟ್​ ಕಸ್ಟಮರ್​ ಕೇರ್​​ ಚಾಟ್​ ವಿಂಡೋಸ್​​ನ್ನು ಹೊಂದಿರುತ್ತವೆ. ಆದರೆ ನೀವು ಕರೆ ಮಾಡಬಹುದಾದ ​ ಕಾಂಟೆಕ್ಟ್​ ನಂಬರ್​ನ್ನು ಹೊಂದಿರುವುದಿಲ್ಲ.



ಆನ್‌ಲೈನ್ ಬ್ಯಾಂಕಿಂಗ್ ವೆಬ್‌ಸೈಟ್: ಗೂಗಲ್​ನಲ್ಲಿ ಬ್ಯಾಂಕಿನ ವೆಬ್‌ಸೈಟ್ ಮತ್ತು URL ಅನ್ನು ಸರ್ಚ್ ಮಾಡುತ್ತಾರೆ. ಆದರೆ, ಈ ಹುಡುಕಾಟವು ನಿಮಗೆ ಅಪಾಯದಿಂದ ಮುಕ್ತವಾಗಿಲ್ಲ. ಇಲ್ಲಿಂದ, ನಿಮ್ಮ ವಿವರಗಳನ್ನು ಹ್ಯಾಕರ್‌ಗಳು ಕದಿಯಬಹುದು. ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬೇಕಾದರೆ, ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ URL ಅನ್ನು ನೇರವಾಗಿ ನಮೂದಿಸಿ. ಗೂಗಲ್‌ನಲ್ಲಿ ಬ್ಯಾಂಕಿಂಗ್ ಸೈಟ್‌ಗಳನ್ನು ಹುಡುಕುವುದು ಮತ್ತು ತೆರೆಯುವುದು ಇತರ ಫಿಶಿಂಗ್ ವೆಬ್‌ಸೈಟ್‌ಗಳನ್ನು ಸಹ ಬಹಿರಂಗಪಡಿಸಬಹುದು. ತಿಳಿಯದೆ ನೀವು ಈ ವೆಬ್‌ಸೈಟ್‌ಗಳನ್ನು ತೆರೆಯಬಹುದು. ನೀವು ಇಲ್ಲಿ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದರೆ, ಅದನ್ನು ಹ್ಯಾಕರ್‌ಗಳು ತಮ್ಮ ಹಿಡಿತಕ್ಕೆ ಪಡೆದುಕೊಂಡು ನಿಮ್ಮ ಖಾತೆಯನ್ನು ಖಾಲಿ ಮಾಡುತ್ತಾರೆ.



ಮೆಡಿಸಿನ್ ಬಗ್ಗೆ ಸರ್ಚ್​ ಮಾಡುವಾಗ ಎಚ್ಚರ:



ನಿಮಗೆ ಆರೋಗ್ಯ ಹದಗೆಟ್ಟರೆ ವೈದ್ಯರ ಬಳಿ ಹೋಗಿ. ಆದರೆ ಗೂಗಲ್​ನಲ್ಲಿ ಮೆಡಿಸಿನ್ ಅಥವಾ ಆರೋಗ್ಯ ಸಲಹೆಗಳ ಬಗ್ಗೆ ಸರ್ಚ್​ ಮಾಡಬೇಡಿ. ಯಾಕೆಂದರೆ ಗೂಗಲ್​ನಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಗೂಗಲ್​ ಮಾಹಿತಿಗಿಂತ ವೈದ್ಯರ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಗೂಗಲ್​ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳವುದೂ ಸಹ ಅಷ್ಟೇ ಅಪಾಯಕಾರಿ.



ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್:



ಹೆಚ್ಚಿನ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್‌ಗಳನ್ನು ಗೂಗಲ್​​ನಲ್ಲಿ ಹುಡುಕಲಾಗುತ್ತದೆ. ಯಾವುದೇ ಹೊಸ ಅಪ್ಲಿಕೇಶನ್ ಬಂದಾಗ, ಅದರ ಹುಡುಕಾಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಗೂಗಲ್ ಹುಡುಕಾಟವು ಕೆಲವೊಮ್ಮೆ ಫಿಶಿಂಗ್ ಅಥವಾ ನಕಲಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ಒಳಗೊಂಡಿರಬಹುದು. ಅದು ನಮ್ಮ ಸಾಧನವನ್ನು ಹಾನಿಗೊಳಿಸುತ್ತದೆ ಮತ್ತು ನಮ್ಮ ವಿವರಗಳನ್ನು ಸೋರಿಕೆ ಮಾಡುತ್ತದೆ. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿಗೆ ಪ್ರಶ್ನೆ ಕೇಳಿದ್ದ ನಾರ್ವೆ ಪತ್ರಕರ್ತೆಯ ಭಾರತ ಪ್ರವಾಸಕ್ಕೆ ಕೊನೇ ಕ್ಷಣದಲ್ಲಿ ತಡೆಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಸಮೀಕರಣ: ಒವೈಸಿ–ಆಜಾದ ಮೈತ್ರಿಮೆಟ್ರೊ ಉದ್ಘಾಟನೆಯಲ್ಲಿ ಭಾಷಣಕ್ಕೆ ಅವಕಾಶ ನಿರಾಕರಣೆ: ಕೃಷ್ಣಬೈರೇಗೌಡ ಕಿಡಿದೇಶದ ಯಶೋಗಾಥೆಗಳಿಗೆ ಮಾಧ್ಯಮಗಳು ಆದ್ಯತೆ ನೀಡಲಿ: ಪ್ರಧಾನಿ ಮೋದಿ₹7 ಕೋಟಿ ನೀಡದಿದ್ದರೆ ಕೇಜ್ರಿವಾಲ್, ಪುತ್ರಿಯ ಹತ್ಯೆ: ಬಿಷ್ಣೋಯಿ ಗ್ಯಾಂಗ್ ಬೆದರಿಕೆಹಾಲು, ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ18ರಿಂದ ಅನುದಾನಿತ ಶಾಲಾ-ಕಾಲೇಜು ಬಂದ್‌ಗೆ ನಿರ್ಧಾರಹೊಲದಲ್ಲಿ ಇಳಿದ ಬೆಳಗಾವಿಗೆ ಬರುತ್ತಿದ್ದ ಹೆಲಿಕಾಪ್ಟ ರ್ಬರ ಪರಿಹಾರ ವಿತರಣೆಯಲ್ಲಿನ ಲೋಪ ಸರಿಪಡಿಸಲು ಸೂಚನೆ ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 150ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ