LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟರ್ ಹರಿದ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಬೆಳಗಾವಿ : ರಾಜ್ಯ ಸರಕಾರದ ಬಜೆಟ್ ಹಾಗೂ 18 ಬಿಜೆಪಿ ಶಾಸಕರ ಅಮಾನತ್ತು ಖಂಡಿಸಿ ಸೋಮವಾರ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸುಮಾರು 8ಕ್ಕೂ ಅಧಿಕಾರ ಕಾರ್ಯಕರ್ತರನ್ನು ಮಾರ್ಕೇಟ್ ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ನಡೆದಿದೆ.



ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಕ್ಕಿದ್ದ ಸರಕಾರದ ಗ್ಯಾರಂಟಿ ಯೋಜನೆಯ ಪೋಸ್ಟರ್ ಹರಿಯಲು ಯತ್ನಿಸಿದ್ದ ಪುರುಷರನ್ನು ತಡೆದರು. ಆಗ ಪುರುಷರು ಮಹಿಳೆಯರನ್ನು ಮುಂದೆ ಬಿಟ್ಟು ಪೋಸ್ಟರ್ ಹರಿಯಲು ಸೂಚಿಸಿದರು. ಆದರೆ ಕಡಿಮೆ ಸಂಖ್ಯೆಯಲ್ಲಿದ್ದ ಮಹಿಳಾ ಪೊಲೀಸರು ಬಿಜೆಪಿ ಮಹಿಳೆಯರನ್ನು ತಡೆಯಲು ವಿಫಲವಾದರು. ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಭಾವಚಿತ್ರವಿದ್ದ ಪೋಸ್ಟರ್ ಹರಿದರು.



ಪ್ರತಿಭಟನೆ ನಡೆಸುತ್ತಿದ್ದ ಸುಮಾರು 10 ಪುರುಷ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಜೀಪನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಜೀಪ್ ಎದುರು ಕುಳಿತು ಪ್ರತಿಭಟನೆ ನಡೆಸಲಾಯಿತು.



[video width="848" height="480" mp4="https://samadarshi.net/wp-content/uploads/2025/03/6e555027-f7d1-406f-9a2a-41366cbf4295.mp4"][/video]



ರಾಜ್ಯ ಸರಕಾರ ಮಂಡಿಸಿದ ಬಜೆಟ್ ಹಿಂದು ವಿರೋಧಿ ಬಜೆಟ್ ಹಾಗೂ ದಲಿತರ ಅನುದಾನವನ್ನು ತನ್ನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ  ಧಿಕ್ಕಾರ ಕೂಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅಳವಡಿಸಲಾದ ಗ್ಯಾರಂಟಿ ಯೋಜನೆಯ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದ ವೇಳೆ  ಪೊಲೀಸರು ತಡೆಯಲೆತ್ನಿಸಿದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.



082e131e-5168-4e05-a384-c95fb7208269 e944398d-af88-4e2f-a94b-7aad152fbb21



ಇದೇ ಸಂದರ್ಭದಲ್ಲಿ ಪೊಲೀಸರಿಗೆ ತಳ್ಳಾಟ ನೂಕಾಟ ನಡೆಸಿದ ಸುಮಾರು 8 ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದುಕೊಂಡರು‌ ಎಂದು ವರದಿಯಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತ ಶಿಕ್ಷಕ ಶ್ರೀ ಎಸ್. ಎ. ಕೊತವಾಲ್ ನಿಧನನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಎನ್‌ಟಿಎ ವಿಷಯ ತಜ್ಞರೇ ರೂವಾರಿಗಳುಇಂಡಿಯಲ್ಲಿ ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಂಭೀರ ಗಾಯಬ್ರಹ್ಮಾಂಡ ಭ್ರಷ್ಟಾಚಾರ : ಸಿಬಿಐ ತನಿಖೆ ನಡುವೆಯೂ ಪಿಎನ್‌ಸಿ ಇನ್‌ಫ್ರಾಟೆಕ್‌ಗೆ 3,483 ಕೋಟಿ ರೂ. ಹೆದ್ದಾರಿ ಗುತ್ತಿಗೆಗದ್ದಲದಲ್ಲೇ ಸಾಗಿದ ಸಂಸತ್; ಚರ್ಚೆಯಿಲ್ಲದೆ ತೆರಿಗೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ'ಮೋದಿ ಸರ್ವಾಧಿಕಾರಿಯಾಗಿದ್ದರೆ ಚೆನ್ನಾಗಿತ್ತು' ಎಂದ ರೂಪಾಲಿ ಗಂಗೂಲಿ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಧರಣಿಯಲ್ಲಿ ಮೊಳಗಿದ ಏಕತೆಯ ಸಂದೇಶ: ಜಾತಿ–ಧರ್ಮ ಮೀರಿ ವಿದ್ಯಾರ್ಥಿಗಳಿಗೆ ನೆರವುಬೈಕ್–ಬಸ್ ಮುಖಾಮುಖಿ ಡಿಕ್ಕಿ: ತಂದೆ, ಮಗಳು ಸೇರಿ ಮೂವರು ಸ್ಥಳದಲ್ಲೇ ಮೃತ್ಯು'ತೆಹೆಲ್ಕಾ' ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ತರುಣ ತೇಜ್‌ಪಾಲಗೆ 10 ವರ್ಷ ಜೈಲು ಶಿಕ್ಷೆರೈಲು ಹಳಿ ಮಧ್ಯೆ ಕೆಟ್ಟು ನಿಂತ ಶಾಲಾ ವಾಹನ; ಗ್ರಾಮಸ್ಥರ ಸಮಯಪ್ರಜ್ಞೆಗೆ ತಪ್ಪಿದ ಭಾರೀ ದುರಂತ