LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಜ್ಞಾನೇಶ ಕುಮಾರ ಬೆಂಬಲಕ್ಕೆ ನಿಂತ ಬಿಜೆಪಿ

ಹೊಸದಿಲ್ಲಿ, ಸೆ. 23 : (ಸಮದರ್ಶಿ ಸುದ್ದಿ) - ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸೇರಿದಂತೆ ಹಲವು ವಿಷಯಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಕುರಿತು ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿರುವ ವರದಿಗಳ ಬೆನ್ನಲ್ಲೇ, ಬಿಜೆಪಿ ಅವರ ಬೆಂಬಲಕ್ಕೆ ನಿಂತಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಎಸ್‌ಐಆರ್‌ ಪ್ರಕ್ರಿಯೆಯನ್ನು ಮೂವರು ಚುನಾವಣಾ ಆಯುಕ್ತರು ಸರ್ವಾನುಮತದಿಂದ ಅನುಮೋದಿಸಿದ್ದಾರೆ” ಎಂದು ಹೇಳಿದರು. ವಿವಿಧ ವಿಷಯಗಳ ಕುರಿತು ಆಯುಕ್ತರ ನಡುವೆ ಅಭಿಪ್ರಾಯ ವಿನಿಮಯ ನಡೆದಿರುವುದನ್ನು ಭಿನ್ನಮತ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ ಹಲವು ಆಡಳಿತಾತ್ಮಕ ಹಾಗೂ ಎಸ್‌ಐಆರ್‌ಗೆ ಸಂಬಂಧಿಸಿದ ವಿಷಯಗಳಲ್ಲಿ 14 ಬಾರಿ ಲಿಖಿತ ಆಕ್ಷೇಪ ಅಥವಾ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ ಎಂಬ ವರದಿಗಳು ವಿವಾದಕ್ಕೆ ಕಾರಣವಾಗಿವೆ.

ಆದರೆ, ಅಂತಿಮವಾಗಿ ಎಸ್‌ಐಆರ್‌ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಪೂರ್ಣ ಆಯೋಗ ಸರ್ವಾನುಮತದಿಂದ ಕೈಗೊಂಡಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ನಿರ್ಧಾರಕ್ಕೂ ಮೊದಲು ಸದಸ್ಯರು ಪ್ರಶ್ನೆಗಳನ್ನು ಎತ್ತುವುದು, ಸಲಹೆ ನೀಡುವುದು ಹಾಗೂ ವಿಭಿನ್ನ ಅಭಿಪ್ರಾಯ ದಾಖಲಿಸುವುದು ಬಹುಸದಸ್ಯ ಸಂಸ್ಥೆಯ ಸಹಜ ಪ್ರಕ್ರಿಯೆ ಎಂದು ಆಯೋಗ ಹೇಳಿದೆ.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪಾತ್ರಾ, ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿದರು.

“ನಾನು ಚುನಾವಣಾ ಆಯೋಗದ ಪರವಾಗಿ ಸುದ್ದಿಗೋಷ್ಠಿ ನಡೆಸುತ್ತಿಲ್ಲ. ಆಯೋಗ ಹೊರಡಿಸಿರುವ ಪ್ರಕಟಣೆಯನ್ನಷ್ಟೇ ಉಲ್ಲೇಖಿಸುತ್ತಿದ್ದೇನೆ. ಪ್ರತಿಪಕ್ಷಗಳೂ ಅದನ್ನು ಗಮನಿಸಬೇಕು” ಎಂದು ಪಾತ್ರಾ ಹೇಳಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 66 ವರ್ಷದ ಮಹಿಳೆಗೆ ₹16 ಲಕ್ಷ ವಂಚನೆಆಂಧ್ರದಲ್ಲಿ ರೈಲು ಢಿಕ್ಕಿ: ನಾಲ್ವರು ವಿದ್ಯಾರ್ಥಿಗಳ ಸಾವು, ಓರ್ವನ ಸ್ಥಿತಿ ಗಂಭೀರವಿಟಿಯು 26ನೇ ಘಟಿಕೋತ್ಸವ : 52,025 ವಿದ್ಯಾರ್ಥಿಗಳಿಗೆ ಪದವಿ, ಮೂವರಿಗೆ ಗೌರವ ಡಾಕ್ಟರೇಟ್ಅನುಭವ ಮಂಟಪ ಖಾಸಗಿ ಸಂಸ್ಥೆ, ಮಠಗಳಿಗೆ ನೀಡಬೇಡಿ: ಎಸ್.ಎಂ.ಜಾಮದಾರಜ್ಞಾನೇಶ ಕುಮಾರ ವಿರುದ್ಧ ರಾಷ್ಟ್ರಪತಿ ಕ್ರಮ ಕೈಗೊಳ್ಳಲಿ, ಇಲ್ಲದಿದ್ದರೆ ಸೇನೆ ಮುಂದೆ ಬರಲಿ: ಸಂಜಯ ರಾವತ್ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆಡಿಜೆ ಸದ್ದಿನ ವೇಳೆ ತರಗತಿಯಲ್ಲಿ ಕುಸಿದು 2ನೇ ತರಗತಿ ಬಾಲಕಿ ಸಾವುಎಸ್‌ಐಆರ್‌ ನಿರ್ಧಾರಗಳಲ್ಲಿ ಭಿನ್ನಮತ ಇಲ್ಲ : ಚುನಾವಣಾ ಆಯೋಗಜ್ಞಾನೇಶ ಕುಮಾರ ಅವರನ್ನು ಪದಚ್ಯುತಗೊಳಿಸಿ, ತನಿಖೆಗೆ ಆದೇಶಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹಎಸ್‌ಐಆರ್‌ ಪ್ರಕ್ರಿಯೆಯ ಕಾನೂನುಬದ್ಧತೆ ಬಗ್ಗೆ ಮಾಜಿ ಚುನಾವಣಾ ಆಯುಕ್ತ ಅಶೋಕ ಲವಾಸಾ ಪ್ರಶ್ನೆ