LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮಕ್ಕಳಿಗೆ ಐಸ್ ಕ್ರೀಮ್ ನೀಡಿ ಪಾಲಕರ ಮತ ಸೆಳೆಯಲು ಬೆಳಗಾವಿ ಶಾಸಕರ ಯತ್ನ

ಬೆಳಗಾವಿ : ಮತದಾರರನ್ನು ಸೆಳೆಯಲು ಶಾಸಕರು ಮತ್ತು ಸ್ಪರ್ಧಾಕಾಂಕ್ಷಿಗಳು ಕಾಣಿಕೆ, ಉಡುಪು, ಸೀರೆ, ಊಟ, ಮದ್ಯ, ಉಚಿತ ತೀರ್ಥ ಕ್ಷೇತ್ರ ಪ್ರವಾಸ ಮುಂತಾದ ಆಮಿಷ ನೀಡುವುದನ್ನು ಕೇಳಿದ್ದೇವೆ. ಆದರೆ ಮಕ್ಕಳಿಗೆ ಐಸ್‌ ಕ್ರೀಮ್ ನೀಡಿ ಅವರ ಪಾಲಕರನ್ನು ಸೆಳೆಯುವ ಯತ್ನ ನಡೆದಿರುವಂಥ ಘಟನೆಗಳು ಬೆಳಗಾವಿಯಲ್ಲಿ ನಡೆದಿವೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಮತದಾರರಿಗೆ ಯಾವುದೇ ಆಮಿಷ, ಉಡುಗೊರೆ ನೀಡಬಾರದು ಎಂದು ಬೆಳಗಾವಿ ಜೆಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ ಮರುದಿನವೇ ಮತದಾರರಿಗೆ ಆಮಿಷ ನೀಡುವ ಘಟನೆಗಳು ವರದಿಯಾಗಿವೆ.



[video width="352" height="640" mp4="https://samadarshi.net/otassoos/2023/03/VIDEO-2023-03-14-18-32-51-1.mp4"][/video]



ಬೆಳಗಾವಿ ದಕ್ಷಿಣ ಮತ್ತು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ತಮ್ಮ ಕ್ಷೇತ್ರದಲ್ಲಿ ಇರುವ ಶಾಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಫೋಟೊಗಳಿರುವ ಉಚಿತ ಐಸ್ ಕ್ರೀಮ್ ಕೂಪನ್ ನೀಡಿದ್ದಾರೆ ಎನ್ನಲಾಗಿದ್ದು ಕಾರ್ಯಕರ್ತರು ಶಾಲೆಗಳ ಹೊರಗೆ ಮಕ್ಕಳಿಂದ ಕೂಪನ್‌ ಪಡೆದು ಅವರಿಗೆ ಕೋನ್ ಐಸ್ ಕ್ರೀಮ್ ನೀಡುತ್ತಿರುವುದು ಕಂಡು ಬಂದಿದೆ.



ಅಭಯ ಪಾಟೀಲ ಇಂದು ಐಸ್‌ ಕ್ರೀಮ್ ವಿತರಿಸಿದ್ದು ನಾಳೆ ಕೂಡ ನೀಡಲಿದ್ದಾರೆ‌ ಎನ್ನಲಾಗುತ್ತಿದೆ. ಅದರಂತೆ ಬೆನಕೆ ಕೂಡ ಬುಧವಾರ ಮತ್ತು ಗುರುವಾರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಐಸ್ ಕ್ರೀಮ್ ವಿತರಿಸಲು ಅವರು ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲವಾದರೂ ಸರಕಾರಿ ಶಾಲೆಯ ಶಿಕ್ಷಕರು ಮತ್ತು ಕೆಲವು ಖಾಸಗಿ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳು ಇದಕ್ಕೆ ಸಹಕಾರ ನೀಡಿವೆ ಎಂದು ತಿಳಿದು ಬಂದಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಬಿಜೆಪಿಗೆ ಮತ ನೀಡುವಂತೆ ಸೂಚಿಸಲು ತಿಳಿಸಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿ ಬಂದಿವೆ.



ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಾರ್ಯಕರ್ತೆ ಪ್ರಭಾವತಿ ಚಾವಡಿ ಅವರು, ತಾವು ತಮ್ಮ ಪ್ರಭಾತಾಯಿ ಫೌಂಡೇಶನ್ ವತಿಯಿಂದ ಪ್ರತಿ ಹೋಳಿ ಹಬ್ಬದ ದಿನದಂದು ಮಹಿಳೆಯರಿಗಾಗಿ ರಂಗಪಂಚಮಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವು. ಅದಕ್ಕೆ ಶಿಕ್ಷಣ ಇಲಾಖೆಯಿಂದ ಸರಕಾರಿ ಶಾಲೆಯ ಆವರಣಕ್ಕೆ ಬೇಡಿಕೆಯಿಡುತ್ತಿದ್ದೆ. ಆದರೆ ಈ ಬಾರಿ ಮಹಿಳೆಯರ ಹೋಳಿ ಕಾರ್ಯಕ್ರಮಕ್ಕೆ ಅನುಮತಿ ನೀಡದ ಶಿಕ್ಷಣ ಇಲಾಖೆಯು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಐಸ್ ಕ್ರೀಮ್ ವಿತರಿಸಲು ಶಾಸಕರಿಗೆ ಅನುಮತಿ ನೀಡಿದ್ದಲ್ಲದೇ ತನ್ನ ಶಿಕ್ಷಕರಿಗೂ ಸಹಕರಿಸಲು ಆದೇಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದರು.



ಮಕ್ಕಳಿಗೆ ಐಸ್ ಕ್ರೀಮ್ ಕೂಪನ್ ನೀಡಿ ಬಿಜೆಪಿಗೆ ಮತ ನೀಡುವಂತೆ ತಮ್ಮ ತಮ್ಮ ಪಾಲಕರಿಗೆ ಆಗ್ರಹಿಸಲು ಶಿಕ್ಷಕರು ಕೋರಿದ್ದಾರೆ ಎಂದು ಪ್ರಭಾವತಿ ಅವರು ಸಮದರ್ಶಿಯೊಂದಿಗೆ ಮಾತನಾಡುತ್ತ ದೂರಿದರು.



ಈ ಘಟನೆಗಳ ಕುರಿತು ಬೆಳಗಾವಿ ನಗರ ಬಿಇಓ ಅವರನ್ನು ಸಮದರ್ಶಿ ಸಂಪರ್ಕಿಸಿದಾಗ ʼʼನಾವು ಐಸ್‌ ಕ್ರೀಮ್‌ ವಿತರಿಸಲು ಯಾವುದೇ ಅನುಮತಿ ನೀಡಿಲ್ಲ. ಬಿಜೆಪಿಗೆ ಮತ ನೀಡುವಂತೆ ಮಕ್ಕಳಿಗೆ ಬೆಳಗಾವಿಯಲ್ಲಿ ಶಿಕ್ಷಕರು ಕೇಳಿಕೊಳ್ಳುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿʼʼ ಎಂದು ಹೇಳಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಸರಕಾರದ ‘ಅಚ್ಚೇ ದಿನ್’ ಜನ ನೋಡಲೇ ಇಲ್ಲKoppal | ಸೇತುವೆ ಮೇಲಿಂದ ಬಿದ್ದ ಟ್ರ್ಯಾಕ್ಟರ್ : 6 ಮಂದಿ ಸಾವುಡಿಸೇಲ್ ದರ ಏರಿಕೆ ಹೊಡೆತದ ಮೇಲೆ ಖಾಸಗಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳದ ಪ್ರಹಾರಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂಧನ ಬೆಲೆ ಇಳಿದಾಗ ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡ ಕಂಪನಿಗಳಿಂದ ಈಗ ಜನರ ಮೇಲೆ ಮತ್ತಷ್ಟು ಹೊರೆ2027ರಿಂದ ಕಂಪ್ಯೂಟರ್‌ ಆಧಾರಿತ ನೀಟ್‌ ಪರೀಕ್ಷೆಅದಾನಿ ಉಳಿಸಲು ಅಮೇರಿಕದೊಂದಿಗೆ ರಾಜಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಹಿಂಪಡೆಯಲು ಸಿದ್ದರಾಮಯ್ಯ ಒತ್ತಾಯಜಾಮೀನು ನಿರಾಕರಣೆ: ನಟ ದರ್ಶನ್‌ಗೆ ಜೈಲೇ ಗತಿಭಾರಿ ಗಾಳಿ-ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ 4 ಮಂದಿ ಸಾವು