LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿಯಲ್ಲಿ ಹಾಡುಹಗಲೇ ರಿವಾಲ್ವರ್ ತೋರಿಸಿ ಬಂಗಾರ ಅಂಗಡಿ ದರೋಡೆಗೆ ಯತ್ನ

ಬೆಳಗಾವಿ, ೧೬: ಬೆಳಗಾವಿಯ ಶಾಹೂ ನಗರದ ಮುಖ್ಯ ರಸ್ತೆಯಲ್ಲಿರುವ ಸಂತೋಷಿ ಜ್ಯುವೇಲರ್ಸ ಬಂಗಾರದ ಅಂಗಡಿಯನ್ನು ದೋಚಲು ಇಬ್ಬರು ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ಸೋಮವಾರ ಮುಂಜಾನೆ ಸುಮಾರು 10 ಗಂಟೆ ಸುಮಾರಿಗೆ ನಡೆದಿದೆ.



ಬಂಗಾರದಾಭರಣದ ಅಂಗಡಿ ತೆರೆಯುತ್ತಿದಂತೆ ಬೈಕ್  ಒಂದರಲ್ಲಿ ಬಂದ ಇಬ್ಬರು ಒಳಗೆ ಹೋದರು. ಅವರಲ್ಲೊಬ್ಬ ರಿವಾಲ್ವರ್ ತೆಗೆದು ತನ್ನ ಬಳಿಯಲ್ಲಿದ್ದ ಒಂದು ಚೀಲ ಕೊಟ್ಟು ಎಲ್ಲ ಆಭರಣಗಳನ್ನು ಅದರಲ್ಲಿ ಹಾಕಿ ಕೊಡಲು ಆದೇಶಿಸಿದನು. ಆಗ ಅಂಗಡಿಯಲ್ಲಿ ಕೆಲಸ ಮಾಡುವ ಮಾಲೀಕರ ಸಂಬಂಧಿ ಪ್ರತಿಭಟಿಸಿ ಗಟ್ಟಿಯಾದ ಶಬ್ದದಿಂದ ಕೂಗಾಡಿದಾಗ ಹೆದರಿ ವಿಚಲಿತರಾದ ದರೋಡೆಕೋರರು ಅವರ ಮೇಲೆ ಹಲ್ಲೆ ನಡೆಸಿದರು. ಅಂಗಡಿಯಲ್ಲಿದ್ದ ಮಾಲೀಕ ಮತ್ತು ಅವರ ಸಂಬಂಧಿ ನೌಕರ ಕೂಡ ದರೋಡೆಕೋರರ ಮೇಲೆ ತಿರುಗಿ ಬಿದ್ದು ಥಳಿಸಿದ್ದಾರೆ ಎನ್ನಲಾಗಿದೆ. ಆಗ ದರೋಡೆಕೋರರು ಹೆದರಿ ಪಲಾಯನಗೈದರು ಎನ್ನಲಾಗಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.



ಬೆಳಗಾವಿ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಸೇರಿದಂತೆ ಹಿರಿಯ ಪೊಲೀಸರು ಸ್ಥಳಕ್ಕೆ ಭೆಟ್ಟಿ ನೀಡಿ ಬಂಗಾರದಂಗಡಿಯಲ್ಲಿನ ಮತ್ತು ರಸ್ತೆಯಲ್ಲಿನ ಸಿಸಿಟಿವಿ ಕ್ಯಾಮೆರಾ ವೀಕ್ಷಿಸಿ ಡಕಾಯಿತಿಗೆ ಬಂದಿದ್ದವರನ್ನು ಗುರುತಿಸಿದ್ದಾರೆ. ಅವರ ಬಂಧನಕ್ಕೆ ಯತ್ನ ನಡೆದಿದೆ ಎಂದು ಸಿದ್ದರಾಮಪ್ಪ ತಿಳಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST