LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬೆಳಗಾವಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ಮೂವರ ಅತ್ಮಹತ್ಯೆ!

ಬೆಳಗಾವಿ : ನಗರದಲ್ಲಿ‌ ಘೋರ ದುರಂತ ನಡೆದಿದ್ದು, ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೂವರ ಮೃತಪಟ್ಟಿದ್ದರೆ, ಓರ್ವಳ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.



ಮೃತರನ್ನು 44 ವರುಷದ ಮಂಗಳಾ ಕುರಡೇಕರ, ಮಗಳು ಸುವರ್ಣ ಕುರಡೇಕರ ಮತ್ತು ಮಗ ಸಂತೋಷ ಕುರಡೇಕರ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಕುಟುಂಬದ ಇನ್ನೋರ್ವ ಸದಸ್ಯೆಯ ಆರೋಗ್ಯ ಸ್ಥಿತಿ ‌ಚಿಂತಾಜನಂಕವಾಗಿದೆ, ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.



ಶಹಾಪುರಿನ ಜೋಷಿಮಾಳದಲ್ಲಿ ವಾಸವಾಗಿದ್ದ ಕುಟುಂಬವು ಮಾಡಿದ್ದ ಸಾಲ ಹಿಂದಿರುಗಿಸಲು ಸಾಧ್ಯವಾಗದ್ದರಿಂದ ಬುಧವಾರ ಮುಂಜಾನೆ 9 ಗಂಟೆ ಹೊತ್ತಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.



ಮೂಲತಃ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುರಡೇಕರ ಕುಟುಂಬ ಚಿನ್ನಧಾಭರಣ ಉದ್ಯೋಗದಲ್ಲಿದ್ದು ಬೆಳಗಾವಿಯಲ್ಲಿ ಅನೇಕ ವರುಷಗಳಿಂದ ನೆಲೆಸಿತ್ತು. ಮಂಗಳಾ ಅವರ ಪತಿ ನಿಧನರಾಗಿದ್ದು ಅವರ ಪುತ್ರ ಸಂತೋಷ ಶಹಾಪುರಿನಲ್ಲಿ ಚಿನ್ನದ ಆಭರಣ ತಯಾರಿಕೆ ಉದ್ಯೋಗದಲ್ಲಿದ್ದರು.



ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕುರುಡೇಕರ ಕುಟುಂಬ ಪತ್ರ ಬರೆದಿಟ್ಟಿದ್ದು ಓರ್ವ ವ್ಯಕ್ತಿಯ ಹೆಸರು ಸೂಚಿಸಿ ಆತ ವ್ಯವಹಾರದಲ್ಲಿ ವಂಚಿಸಿದ್ದೇ ತಮ್ಮ ಆತ್ಮಹತ್ಯೆಗೆ ಕಾರಣವೆಂದಿದೆ. ಮಂಗಳಾ ಅವರ ಮೂವರೂ ಮಕ್ಕಳು ಅವಿವಾಹಿತರಾಗಿದ್ದರು ಎನ್ನಲಾಗಿದೆ.



ಸ್ಥಳಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಬೋರಸೆ ಮತ್ತು ಡಿಸಿಪಿ ರೋಹನ್ ಜಗದೀಶ್ ಭೆಟ್ಟಿ ನೀಡಿದ್ದರು. ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನನೀರಾವರಿ ಸೌಲಭ್ಯಕ್ಕೆ ₹3.25 ಲಕ್ಷ ಸಹಾಯಧನ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಅಭಿನಂದನ್ ಅವಧಿಗೂ ಮುನ್ನ ನಿವೃತ್ತಿ; ಖಾಸಗಿ ವಿಮಾನ ಪೈಲಟ್ ಆಗಿ ಹೊಸ ವೃತ್ತಿಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿನೇಪಾಳ: 7,500 ಮನೆ ಸಂಪೂರ್ಣ ನಾಶಕೈದಿಯೊಂದಿಗೆ ಸರಸ ಸಲ್ಲಾಪ : ಪಿಎಸ್‌ಐ ಜಯಶ್ರೀ ಅಮಾನತುಕರಡು ಮತದಾರರ ಪಟ್ಟಿಯಿಂದ ರಾಘವ ಚಡ್ಡಾ ಹೆಸರು ಡಿಲಿಟ್ಜಿಎಸ್‌ಟಿ ಸಂಗ್ರಹ ಶೇ. 14.8ರಷ್ಟು ಏರಿಕೆ: ಆಗಸ್ಟನಲ್ಲಿ ₹2 ಲಕ್ಷ ಕೋಟಿ ವರಮಾನಬಿಜೆಪಿ–ಜೆಡಿಎಸ್‌ನ ನೋಬಾಲ್, ಫುಲ್‌ಟಾಸ್‌ಗೆ ನನ್ನ ವಿಕೆಟ್ ಬೀಳುವುದಿಲ್ಲ: ಪ್ರಿಯಾಂಕ್ ಖರ್ಗೆಡಿಸಿಪಿ ನೇಮಗೌಡ ಮೇಲೆ ಹಲ್ಲೆ ಆರೋಪ: ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿರುದ್ಧ ಜೆಡಿಎಸ್ ವಾಗ್ದಾಳಿ