LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಮೊಸಳೆ ಪ್ರತ್ಯಕ್ಷ!

ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆಯೊಂದು ಶನಿವಾರ ಕಾಣಿಸಿಕೊಂಡಿತ್ತು.



ಮೊಸಳೆ ಬಾಯಿಗೆ ಹಗ್ಗದಿಂದ ಕಟ್ಟಿದ್ದರಿಂದ ಆಹಾರ ಸೇವಿಸಲಾಗದೇ ಹೆದ್ದಾರಿಗೆ ಬಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜನವಸತಿ ಪ್ರದೇಶ ಅಥವಾ ಕಬ್ಬಿನ ಗದ್ದೆಗಳಲ್ಲಿ ಮೊಸಳೆ ಕಂಡು ಬಂದಾಗ ಸೆರೆ ಹಿಡಿಯುವ ಸಂದರ್ಭದಲ್ಲಿ ಬಾಯಿಗೆ ಹಗ್ಗ ಕಟ್ಟಿದಾಗ ಮೊಸಳೆ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.



ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇಸಿಗೆ ವೇಳೆ ನದಿ ತೀರದ ಕಬ್ಬಿನ ಗದ್ದೆಗಳಿಗೆ ಬರುತ್ತವೆ. ಕೆಲವೊಮ್ಮೆ ಜನವಸತಿ ಪ್ರದೇಶಗಳಿಗೂ ಬರುತ್ತವೆ. ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಮೊಸಳೆ ಕಂಡು ಬರುತ್ತಲೇ ಸ್ಥಳಕ್ಕೆ ಧಾವಿಸಿರುವ ಕೊಲ್ಹಾರ ಠಾಣೆ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬಂದ ಮೇಲೆ ಮೊಸಳೆ ಬಾಯಿಗೆ ಕಟ್ಟಿರುವ ಹಗ್ಗ ಬಿಚ್ಚಿ, ನದಿಗೆ ಬಿಡುವುದಾಗಿ ಪೊಲೀಸರು ತಿಳಿಸಿದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
40 ದಿನದಲ್ಲೇ ತೀರ್ಪು; ಒಂದೂವರೆ ವರ್ಷದ ಮಗುವನ್ನು ಕ್ರೂರವಾಗಿ ಕೊಂದ ರಾಕ್ಷಸನಿಗೆ ಗಲ್ಲು ಶಿಕ್ಷೆಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗೆ 16,925 ಹುದ್ದೆಗಳ ಮುಂದುವರಿಕೆಗೆ ಸರ್ಕಾರದ ಅನುಮೋದನೆಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ; ಪಕ್ಷದ ನಾಯಕರು ಕರೆದಾಗ ದಿಲ್ಲಿಗೆ ಹೋಗುತ್ತೇನೆ: ಡಿ.ಕೆ.ಶಿವಕುಮಾರಆಸ್ಟ್ರೇಲಿಯಾದಲ್ಲಿ ಯುವ ಕ್ರಿಕೆಟಿಗರೊಂದಿಗೆ ಮೋದಿ ಸಂವಾದಕೋರ್ಟ ಹಾಲ್‌ನಲ್ಲೇ ಕಾಗದ ಎಸೆದು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಮೂರ್ತಿಗೆ ನಿಂದನೆದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆಬಳ್ಳಾರಿಯಲ್ಲಿ ಎನ್‌ಐಎ ದಾಳಿ; ಉಗ್ರ ಚಟುವಟಿಕೆಗಳ ಸಂಚುಮೇವು ತರಲು ತೆರಳಿದ್ದ ವೃದ್ಧೆಯ ಮೇಲೆ ಅತ್ಯಾಚಾರ, ಬರ್ಬರ ಹತ್ಯೆಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಪತ್ನಿಯ ಬರ್ಬರ ಹತ್ಯೆವಾಯುದಾಳಿಗೆ ಪ್ರತಿಯಾಗಿ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ