LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಟಿಪ್ಪರ್ ಹಾಯ್ದು ಪೌರಕಾರ್ಮಿಕ ಮಹಿಳೆ ಮೃತ್ಯು 

ಬೆಳಗಾವಿ: ಶನಿವಾರ ಮುಂಜಾನೆ ನಗರವನ್ನು ಶುಚಿಗೊಳಿಸುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಮಹಿಳೆ ಮೇಲೆ ಟಿಪ್ಪರ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿರುವ ವಿಷಾದದ ಸಂಗತಿ ಜರುಗಿದೆ


ಬೆಳಗಾವಿ- ಖಾನಾಪುರ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಅವಕ್ಕಾ ಕೋಲ್ಕಾರ್ (50) ಮೃತ ಪೌರಕಾರ್ಮಿಕ ಮಹಿಳೆ ಎಂದು ಗುರುತಿಸಲಾಗಿದೆ. ಎಂದಿನಂತೆ ನಗರವನ್ನು ಶುಚಿಗೊಳಿಸುವ ವೇಳೆ ಬೆಳಗಾವಿ ನಗರದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಅವಕ್ಕಾ ಅವರಿಗೆ ಅಪ್ಪಳಿಸಿದೆ.


ಘಟನೆ ಕುರಿತು ಮಾತನಾಡಿದ ಮಾಜಿ ಉಪಮೇಯರ್ ವಾಣಿ ಜೋಶಿ, ಬೆಳಗಾವಿ ಪಾಲಿಕೆಯ ಪೌರಕಾರ್ಮಿಕೆ ಅವಕ್ಕಾಗಿ ಟಿಪ್ಪರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತ ಮಾಡಿ ಪರಾರಿಯಾಗಿದ್ದ ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.


ಪಾಲಿಕೆ ಪರಿಸರ ಅಭಿಯಂತ ಹನುಮಂತ ಕಲಾದಗಿ ಅವಕ್ಕ ಅವರ ಕುಟುಂಬಕ್ಕೆ ಸರಕಾರದಿಂದ ಸಿಗುವ ಸಕಲ ಸೌಲಭ್ಯ ಕೊಡಲಾಗುವುದು. ಅಲ್ಲದೆ ಅವರ ಅಂತ್ಯಸಂಸ್ಕಾರಕ್ಕೆ ಪಾಲಿಕೆಯಿಂದ ಆರ್ಥಿಕ ಸಹಾಯವನ್ನೂ ಮಾಡಲಾಗುವುದು. ರಸ್ತೆ ಅಪಘಾತದಲ್ಲಿ ಇದು ಎರಡನೇ ಪೌರಕಾರ್ಮಿಕರು ಬಲಿಯಾಗಿರುವುದು ಎಂದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST