Belagavi

ಖಾಸಬಾಗ್ ದಲ್ಲಿ ಗುಂಪು ಘರ್ಷಣೆ; ಓರ್ವನಿಗೆ ಗಾಯ

ಬೆಳಗಾವಿ, 22- ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಪರಸ್ಪರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಓರ್ವ ಯುವಕ ಗಾಯಗೊಂಡ ಘಟನೆ ಬೆಳಗಾವಿಯ ಖಾಸಬಾಗ್ ನಲ್ಲಿ ರವಿವಾರ ರಾತ್ರಿ ಸಂಭವಿಸಿದೆ.

ಹಳೆಯ ಪಿಬಿ ರಸ್ತೆಯಲ್ಲಿರುವ ಖಾಸಬಾಗದ ಜಯವಂತಿ ಮಂಗಲ ಕಾರ್ಯಾಲಯದ ಎದುರು ಈ ಘಟನೆ ನಡೆದಿದೆ. ಯುವಕರ ಎರಡು ಗುಂಪುಗಳ ನಡುವೆ ಯಾವುದೋ ಕಾರಣಕ್ಕೆ ವಾದ ವಿವಾದ ನಡೆದು ,ಕಲ್ಲು ತೂರಾಟ ನಡೆದಿದೆ. ಗಾಯಗೊಂಡ ಯುವಕನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸ್ಥಳಕ್ಕೆ ಶಹಾಪೂರ ಪೋಲೀಸ್ ಠಾಣೆಯ ಪೋಲೀಸರು ಧಾವಿಸಿದ್ದು ಪರಿಸ್ಥಿತಿ ಈಗ ಹತೋಟಿಯಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!