Moscow

ವಿಶ್ವದಲ್ಲಿ 5 ಕೋಟಿ ದಾಟಿದ ಕೊರೋನ ಸೋಂಕು ಪ್ರಕರಣಗಳು

ಮಾಸ್ಕೋ, ನ, 22 – ವಿಶ್ವದಲ್ಲಿ ಈವರೆಗೆ 5 ಕೊಟಿ 80 ಲಕ್ಷಕ್ಕೂ ಹೆಚ್ಚಿನ ಕೊರೋನ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಅಮೆರಿಕದ – ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಹೇಳಿದೆ.

ವಿಶ್ವದಲ್ಲಿ 5 ಕೋಟಿಗೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಜಾಗತಿಕವಾಗಿ 1,378,866 ರೋಗಿಗಳು ಮೃತಪಟ್ಟಿದ್ದಾರೆ. 37,155,362 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಹೊಸ ಮಾಹಿತಿ ನೀಡಿದೆ.

ದೃಡಪಡಿಸಿದ ಹೆಚ್ಚು ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕ , ಭಾರತ ಮತ್ತು ಬ್ರೆಜಿಲ್ ದೇಶಗಳು ಮೊದಲ ಮೂರು ರಾಷ್ಟ್ರಗಳಾಗಿವೆ. ಫ್ರಾನ್ಸ್ ನಾಲ್ಕನೇ ಸ್ಥಾನದಲ್ಲಿದೆ.ಅಮೆರಿಕದಲ್ಲಿ 12 ದಶಲಕ್ಷಕ್ಕೂ ಹೆಚ್ಚು ಕೊರೋನ ಪ್ರಕರಣ ದಾಖಲಾಗಿದೆ.
ವಿಶ್ವದ ಎಲ್ಲಾ ದೇಶಗಳಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದೆ. ರಷ್ಯಾ ನಾಲ್ಕನೇ ಸ್ಥಾನದಲ್ಲಿದ್ದು 20 ಲಕ್ಷ ಖಚಿತ ಪಡಿಸಿದ ಪ್ರಕರಣ ವರದಿಯಾಗಿದ್ದು. ಈವರೆಗೆ 35,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

Leave a Reply

Your email address will not be published. Required fields are marked *

Back to top button
error: Content is protected !!