Sports

ಸಿರಾಜ ತಂದೆ ನಿಧನ; ತವರಿಗೆ ಮರಳಲು ಸಾಧ್ಯವಿಲ್ಲ

ನವದೆಹಲಿ, ನ.21 – ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ ಗೌಸ್ ಅವರು ಹೈದರಾಬಾದ್‌ನಲ್ಲಿ ಶುಕ್ರವಾರ ನಿಧನರಾದರು. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಸಿರಾಜ್ ಅವರು ಕಟ್ಟುನಿಟ್ಟಿನ ಕ್ಯಾರೆಂಟೈನ್ ನಿಯಮಗಳಿಂದಾಗಿ ಮನೆಗೆ ಮರಳಲು ಸಾಧ್ಯವಾಗುವುದಿಲ್ಲ.

ಸಿರಾಜ್ ಅವರ 53 ವರ್ಷದ ತಂದೆ ಮೊಹಮ್ಮದ ಗೌಸ ಹೈದರಾಬಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಶ್ವಾಸಕೋಶದ ಕಾಯಿಲೆಯೊಂದಿಗೆ ಬಳಲುತ್ತಿದ್ದರು

“ನನ್ನ ತಂದೆಯ ಸಾವಿನ ಬಗ್ಗೆ ಕೋಚ್ ಶಾಸ್ತ್ರಿ ಸರ್ ಮತ್ತು ನಾಯಕ ವಿರಾಟ ಕೊಹ್ಲಿ ನನಗೆ ಮಾಹಿತಿ ನೀಡಿದರು. ಇಬ್ಬರೂ ನನಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ನನಗೆ ಸಹಾಯ ಮಾಡುವ ಬಗ್ಗೆ ಮಾತನಾಡಿದರು” ಎಂದು ಸಿರಾಜ್ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಸಿರಾಜ್, “ತನ್ನ ಮಗ ದೇಶಕ್ಕೆ ಕೀರ್ತಿ ತರಬೇಕೆಂದು ನನ್ನ ತಂದೆ ಯಾವಾಗಲೂ ಬಯಸಿದ್ದರು” ಎಂದು ತಂದೆಯ ಆಶಯವನ್ನು ನೆನಪಿಸಿಕೊಂಡರು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರಭ ಗಂಗೂಲಿ ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಸಿರಾಜ್ ಈ ದುಃಖವನ್ನು ಭರಿಸುವ ಧೈರ್ಯವನ್ನು ನೀಡಲಿ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರಿಗೆ ಯಶ ಸಿಗಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದ್ದಾರೆ.

ಖ್ಯಾತ ನಿರೂಪಕ ಹರ್ಷ ಭೋಗ್ಲೆ, “ಮೊಹಮ್ಮದ ಸಿರಾಜ್ ಮತ್ತು ಅವರ ಕುಟುಂಬಕ್ಕೆ ನನ್ನ ಸಂತಾಪ. ಜೀವನವು ತುಂಬಾ ಕ್ರೂರವಾಗಿದೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 13 ರಲ್ಲಿ ಹೈದರಾಬಾದ್ ಮೂಲದ ವೇಗದ ಬೌಲರ್ ಸಿರಾಜ್ ಬೆಂಗಳೂರು ಪರ ಒಂಭತ್ತು ಪಂದ್ಯಗಳನ್ನು ಆಡಿದ್ದು, ಇದರಲ್ಲಿ 8.68 ರ ಆರ್ಥಿಕ ದರದಲ್ಲಿ 11 ವಿಕೆಟ್ ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!