New Delhi

ಎಲ್ಲರಿಗೂ ಕೊರೋನಾ ಲಸಿಕೆ ಸಿಗಲು 4 ವಷ೯ ಬೇಕು

ನವದೆಹಲಿ, ನ 20 (ಯುಎನ್ಐ) ದೇಶದ ಪ್ರತಿಯೊಬ್ಬ ಪ್ರಜೆಗೂ ಕೊರೋನ ಲಸಿಕೆ ಸಿಗಬೇಕು ಎಂದರೆ ಇನ್ನು ನಾಲ್ಕು ವರ್ಷಗಳ ವರೆಗೆ ಕಾಯಬೇಕಾಗುತ್ತದೆ ಎಂದು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಪೂನಾವಾಲಾ ಹೇಳಿದ್ದಾರೆ.

‘ಲಸಿಕೆಯಿಂದಲೂ ಸೋಂಕು ಬೇಗ ಕೊನೆಯಾಗುವುದಿಲ್ಲ, ಪ್ರಭಾವ ಹಲವು ವರ್ಷಗಳವರೆಗೆ ಕಾಡಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂಬುದನ್ನು ಅವರು ನೆನಪು ಮಾಡಿದ್ದಾರೆ. ಅದಾರೂ ತಮ್ಮ ಲಸಿಕೆ ಅಂತಿಮ ಹಂತದಲ್ಲಿದೆ. ಇದುವರೆಗಿನ ಲಸಿಕೆ ವಯಸ್ಸಾದವರಲ್ಲಿಯೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂಬುದು ಸಾಬೀತಾಗಿದೆ.

ಈ ಲಸಿಕೆಗಳು ದೀರ್ಘಾವಧಿಯಲ್ಲಿ ನಮ್ಮನ್ನು ರಕ್ಷಿಸುತ್ತದೆಯೇ ಎಂಬುದನ್ನು ಮುಂದಿನ ದಿನಗಳು, ಸಮಯವೇ ಮಾತ್ರ ಇದಕ್ಕೆ ಉತ್ತರ ಹೇಳಬೇಕಿದೆ ಎಂದರು. ಲಸಿಕೆ ವಿಳಂಬಕ್ಕೆ ಸರಬರಾಜು ನಿರ್ಬಂಧಗಳು ಮಾತ್ರ ಕಾರಣವಲ್ಲ, ಆದರೆ ಬಜೆಟ್, ಲಸಿಕೆ, ಲಾಜಿಸ್ಟಿಕ್ಸ್, ಮೂಲಸೌಕರ್ಯಗಳು ಬೇಕಾಗುತ್ತದೆ ಹೀಗಾಗಿ ಪ್ರತಿಯೊಬ್ಬರಿಗೂ ಲಸಿಕೆ ಸಿಗಲು 2024ರವರೆಗೂ ಕಾಯುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!