Bengaluru

ಬೆಳಗಾವಿ ಉಪಚುನಾವಣೆಗೆ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಸಾಧ್ಯತೆ

ಬೆಂಗಳೂರು, 20- ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಎರಡು ಪ್ಲಾನ್ ಹಾಕಿಕೊಂಡಿದೆ

ಪ್ಲಾನ್-1 : ಅಂಗಡಿ ಕುಟುಂಬಕ್ಕೆ ಆದ್ಯತೆ.

ಪ್ಲಾನ್-2 : ಅವರು ಒಪ್ಪದಿದ್ದರೆ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಅಭ್ಯರ್ಥಿ ಆಯ್ಕೆ ಮಾಡುವದು.

ಪಕ್ಷದ ಉನ್ನತ ಮೂಲಗಳ ಪ್ರಕಾರ ದಿ ಸುರೇಶ ಅಂಗಡಿಯವರ ಸಂಬಂಧಿಕರೇ ಆಗಿರುವ ಮಾಜಿ ಮುಖ್ಯಮಂತ್ರಿ, ಸಚಿವ ಜಗದೀಶ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ ಚಿಂತನೆಯಲ್ಲಿದೆ. ಶೆಟ್ಟರ್ ಅಂಗಡಿಯವರ ಬೀಗರು. ಇದರಿಂದ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದಂತಾಗುತ್ತದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಪ್ರಬಲ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ ಚಿಂತನೆ ನಡೆಸಿದ್ದು, ಈಗಾಗಲೇ ತೆರೆಮೆರೆಯಲ್ಲಿ ಶೆಟ್ಟರ್ ಅವರ ಸ್ಪರ್ಧೆಯನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.

ನಾಲ್ಕು ಬಾರಿ ಸಂಸದರಾಗಿದ್ದ ಅಂಗಡಿ ಕುಟುಂಬಕ್ಕೆ ಪ್ರಾಧಾನ್ಯತೆ ನೀಡಲು ನಿರ್ಧರಿಸಿರುವ ಪಕ್ಷ, ಅವರಾರೂ ಒಪ್ಪದಿದ್ದರೆ, ಎರಡನೆಯ ಪ್ರಾಧ್ಯಾನತೆಯಾಗಿ ಲಿಂಗಾಯತ ಸಮುದಾಯಕ್ಕೆ ಕೊಡಲು ನಿರ್ಧರಿಸಿದೆ. ಶೆಟ್ಟರ್ ಕಣಕ್ಕಿಳಿಸುವ ಮೂಲಕ ಪ್ಲಾನ್-1 ಫೈನಲ್ ಮಾಡಲಿದೆ ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!