Belagavi

ಬೆಳಗಾವಿ ಜಿಲ್ಲೆಯಲ್ಲಿ ಕಾಲೇಜು ಆರಂಭ; 6 ಉಪನ್ಯಾಸಕರಲ್ಲಿ ಕೊರೋನಾ

ಬೆಳಗಾವಿ, 20- ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆಯೆಂದು ಸರಕಾರ ಕಳೆದ 17 ರಿಂದ ಪದವಿ ಕಾಲೇಜುಗಳನ್ನು ಪುನಾರಂಭ ಮಾಡಿದ್ದು ಬೆಳಗಾವಿ ಜಿಲ್ಲೆಯ 6 ಉಪನ್ಯಾಸಕರಲ್ಲಿ ಸೋಂಕು ಕಂಡು ಬಂದಿದೆ.

ಕಾಲೇಜು ಪುನಾರಂಭದ ಮೊದಲ ದಿನ ಅಂದರೆ ನವೆಂಬರ್ 17 ರಂದು 671 ಕಾಲೇಜು ಸಿಬ್ಬಂದಿ, ನ.18 ರಂದು 656, ನ.19 ರಂದು 699 ಕಾಲೇಜು ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಒಟ್ಟು 2026 ಕಾಲೇಜು ಸಿಬ್ಬಂದಿ ಪೈಕಿ 250 ಜನರ ವರದಿ ಬಂದಿದ್ದು, ಈ ಪೈಕಿ ಆರು ಕಾಲೇಜು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇನ್ನುಳಿದಂತೆ 1,776 ಸಿಬ್ಬಂದಿಯ ಕೋವಿಡ್ ವರದಿ ಬರುವುದು ಬಾಕಿ ಇದೆ. ಈ ಎಲ್ಲ ಸಿಬ್ಬಂದಿ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜು ಆವರಣಕ್ಕೆ ತೆರಳಿ ಪಡೆದುಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!