Bengaluru

ಬೆಂಗಳೂರಲ್ಲಿ ಕಾಲೇಜ ಪುನಾರಂಭವಾದ 3 ದಿನದಲ್ಲಿ 57 ವಿದ್ಯಾರ್ಥಿಗಳಿಗೆ ಸೋಂಕು

ಬೆಂಗಳೂರು : ನೆರೆಯ ಆಂಧ್ರದಲ್ಲಿ ಹೈ ಸ್ಕೂಲ್ ಪುನಾರಂಭ ಮಾಡಿದ ಮೂರೇ ದಿನಕ್ಕೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ರಾಜ್ಯದಲ್ಲಿ “ವಿದ್ಯಾಗಮ” ಕಲಿಕೆ ಪ್ರಾರಂಭವಾಗಿ 500 ಹೆಚ್ಚು ವಿದ್ಯಾರ್ಥಿ, ಶಿಕ್ಷಕರು ಕೋವಿಡ್ ಸೋಂಕಿನಿಂದ ಬಳಲಿದ್ದು ಗೊತ್ತಿದ್ದರೂ ಸರಕಾರ ಅಂತಿಮ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸಿದ ಮೂರೇ ದಿನದಲ್ಲಿ ಬೆಂಗಳೂರೊಂದರಲ್ಲೇ ಅಧ್ಯಾಪಕರು ಸೇರಿದಂತೆ 57 ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿದೆ.

ಈ ಕುರಿತು ಸ್ವತಃ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಪ್ರಸಾದ ಹೇಳಿದ್ದಾರೆ.

ತರಗತಿಗಳಿ ಆರಂಭವಾದ ಬಳಿಕ 11 ಸಾವಿರ ವಿದ್ಯಾರ್ಥಿ, ಅಧ್ಯಾಪಕರ ಕೊರೋನಾ ಸೋಂಕು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದರಲ್ಲಿ 7,000 ಪರೀಕ್ಷೆಗಳ ವರದಿ ಬಂದಿದ್ದು ಅದರಲ್ಲಿ 57 ಜನ ಸೋಂಕಿತರೆಂದು ಕಂಡು ಬಂದಿದ್ದಾರೆಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಹಾವಳಿ ಸ್ವಲ್ಪ ಕಮ್ಮಿಯಾದ ಹಿನ್ನೆಲೆ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ 17 ರಿಂದ ಭೌತಿಕ ತರಗತಿಗಳನ್ನ ಆರಂಭಿಸಲಾಗಿತ್ತು. ಉಳಿದವರಿಗೆ ಆನ್​ಲೈನ್ ಕ್ಲಾಸ್​ ಮುಂದುವರಿಸಲಾಗಿತ್ತು. ಆದರೆ ಕಾಲೇಜು ಆರಂಭವಾದ ಮೂರೇ ದಿನದಲ್ಲಿ 57 ಜನರಿಗೆ ಸೋಂಕು ತಗುಲಿರೋದು ಆತಂಕ ಮೂಡಿಸಿ, ತರಗತಿಗಳನ್ನು ಮುಂದುವರೆಸಬೇಕೇ ಬೇಡವೇ ಎಂಬ ನಿರ್ಧಾರ ಸರಕಾರ ತೆಗೆದುಕೊಳ್ಳಲಿದೆ.

ಕೊರೋನಾ ಭಯದಿಂದ ಎಷ್ಟೋ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ, ಕ್ಲಾಸ್ ಅಟೆಂಡ್​ ಮಾಡಿದವರಿಗೆ ಸೋಂಕು ತಗುಲಿದೆ ಎನ್ನುವುದು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಅವರ ಕುಟುಂಬಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!