Bengaluru

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ‌ ತಾಜಾ ಮೀನು

ಬೆಂಗಳೂರು,ನ.19(ಯುಎನ್‌ಐ) ಮತ್ಸ್ಯಪ್ರಿಯರಿಗೆ ಬಾಯಿರುಚಿಗೆ ಇನ್ಮುಂದೆ ಮನೆ ಬಾಗಿಲಿಗೆ ತಾಜಾ ಮೀನುಗಳು ಬರಲಿವೆ.

ಮೀನಿನ ಖಾದ್ಯ ಮಾಡುವವರಿಗೆ ಮೀನನ್ನು ಇಷ್ಟಪಟ್ಟು ತಿನ್ನುವವರಿಗೆ ಇನ್ನ ಮುಂದೆ ಕರಾವಳಿ ಭಾಗದಂತೆಯೇ ತಾಜಾ ಮೀನುಗಳು ಸಿಗಲಿವೆ. ಅದು ಮನೆ ಬಾಗಿಲ ಬಳಿಯೇ. ಮಾಲ್‌ಗಳಿಗೋ ಮೀನು ಅಂಗಡಿಗಳನ್ನು ಹುಡುಕಿಕೊಂಡು ಹೋಗುವವರಿಗೆ ಕರ್ನಾಟಕ ರಾಜ್ಯ ಮೀನುಗಾರಿಕೆ ಇಲಾಖೆಯಿಂದ ಇದಕ್ಕಾಗಿ ಹೊಸ ಯೋಜನೆಯೊಂದು ಬರಲಿದೆ.

ಆನ್ ಲೈನ್ ಮುಖಾಂತರ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಮೀನು ತಂದು‌ಕೊಡುವ ಯೋಜನೆ ರೂಪಿಸಲಾಗುತ್ತಿದ್ದು,ಈ ಬಗ್ಗೆ ಈಗಾಗಲೇ ಅಪ್ ಸಿದ್ಧ ಪಡಿಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ನ. 21 ನೇ ತಾರೀಖು ಮತ್ಸ್ಯ ಸಂಪದ ಕಾರ್ಯಾಗಾರದಲ್ಲಿ ಈ ಯೋಜನೆಗೆ ಮುಖ್ಯಮಂತ್ರಿ ಚಾಲನೆ ಕೊಡುವ ಸಾಧ್ಯತೆ ಇದೆ.

ಇದೇ 21ರಂದು ವಿಧಾನಸೌಧದಲ್ಲಿ ಪ್ರಧಾನಿ ಮೋದಿ ಮತ್ಸ್ಯ ಸಂಪದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ‌ ಕೊಡಲಿದ್ದು, ಈ ಯೋಜನೆಯಿಂದ ಮೀನು ಉತ್ಪಾದನೆ ಮತ್ತು ಮೀನುಗಾರರು ಮೀನು ಕೃಷಿಕರಿಗೆ ಲಾಭದಾಯಕ ವಾಗಲಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಕರ್ನಾಟಕ ಮೀನುಗಾರಿಕೆ ದೇಶದಲ್ಲಿ ಎರಡು ಮೂರನೇ ಸ್ಥಾನದಲ್ಲಿರುವಂತಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!